ಈಗ ಇವಿಎಂ ಸರಿಯಾಗಿದೆಯೇ? ವಿರೋಧ ಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯ

ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ‍ಟ್ಯಾಂಪರ್ಡ್ ಆರೋಪಕ್ಕಾಗಿ ಶುಕ್ರವಾರ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ, ಜೂನ್ ೪ರಂದು ಬಂದ ಚುನಾವಣಾ ಫಲಿತಾಂಶಗಳು ವಿರೋಧ ಪಕ್ಷದ ಎಲ್ಲಾ ಆರೋಪಗಳನ್ನು ಅಲ್ಲಗಳೆಯುತ್ತವೆ. ಈ ಬಾರಿಯ ಫಲಿತಾಂಶ ಇವಿಎಂ ಮತ್ತು ಚುನಾವಣಾ ಪ್ರಕ್ರಿಯೆಯ ಸತ್ಯಾಂಶವನ್ನು ಪ್ರರ‍್ಶಿಸಿವೆ ಎಂದು ಹೇಳಿದ್ದಾರೆ. ಇದರಿಂದಾಗಿ ಚುನಾವಣಾ ಫಲಿತಾಂಶದ ಬಳಿಕ ವಿಪಕ್ಷಗಳು ಮೌನ ವಹಿಸಿವೆ ಎಂದಿದ್ದಾರೆ.

ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸಂಸದೀಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಇವಿಎಂಗಳು ಇನ್ನೂ ಜೀವಂತವಾಗಿವೆಯೇ ಅಥವಾ ಸತ್ತಿವೆಯೇ ಎಂದು ನಾನೇ ಬೇರೆಯವರನ್ನು ಕೇಳಿದೆ. ವಿರೋಧ ಪಕ್ಷಗಳು ಯಾವಾಗಲೂ ಮತದಾನದ ಯಂತ್ರ ಮತ್ತು ಚುನಾವಣಾ ಪ್ರಕ್ರಿಯೆಯ ಬಗ್ಗೆ ಆರೋಪಿಸುತ್ತಾರೆ. ಇದರಿಂದಾಗಿ ಜನರು ಪ್ರಜಾಪ್ರಭುತ್ವ ಮತ್ತು ಭಾರತದ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ನಂಬಿಕೆ ಇಡುವುದನ್ನು ನಿಲ್ಲಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ಜೂನ್ ೪ರಂದು ಫಲಿತಾಂಶ ಬಂದಾಗ, ನಾನು ಕೆಲಸದಲ್ಲಿ ನಿರತನಾಗಿದ್ದೆ. ನಂತರ ಫೋನ್ ಕರೆಗಳು ಬರಲಾರಂಭಿಸಿದವು. ನಾನು ಆಗ ಬೇರೆಯವರ ಬಳಿ ಮತ ಎಣಿಕೆಯ ಸಂಖ್ಯೆಗಳು ಸರಿಯಾಗಿವೆಯೇ? ಇವಿಎಂ ಬದುಕಿದೆಯೇ ಅಥವಾ ಸತ್ತಿದೆಯೇ? ಎಂದು ಕೇಳಿದೆ. ವಿರೋಧ ಪಕ್ಷದವರು ಅದನ್ನು ಖಚಿತಪಡಿಸಿಕೊಳ್ಳಲು ನರ‍್ಧರಿಸಿದ್ದರು. ಜನರು ಭಾರತದ ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ನಂಬಿಕೆ ಇಡುವುದನ್ನು ನಿಲ್ಲಿಸುತ್ತಾರೆ. ಅವರು ನಿರಂತರವಾಗಿ ಇವಿಎಂ ಅನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ನರೇಂದ್ರ ಮೋದಿ ಅವರು ಇಂಡಿಯ ಬ್ಲಾಕ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರ ಸೋಲಿಗೆ ಇವಿಎಂ ಕಾರಣವೆಂದು ಕಿಡಿಕಾರುತ್ತಾರೆ ಎಂದು ನಾನು ಭಾವಿಸಿದ್ದೆ ಎಂದು ಹೇಳಿದ್ದಾರೆ. ಆದರೆ ಫಲಿತಾಂಶಗಳು ಅವರ ಬಾಯಿ ಮುಚ್ಚುವಂತೆ ಮಾಡಿತು. ಆದರೆ, ೨೦೨೯ರ ಲೋಕಸಭೆ ಚುನಾವಣೆಯಲ್ಲಿ ಬಹುಶಃ ಇವಿಎಂ ಮತ್ತೆ ಆರೋಪಿಯಾಗಬಹುದು ಎಂದು ಬಿಜೆಪಿಯ ಹಿರಿಯ ನಾಯಕ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ.

ಇನ್ನೂ ೫ ರ‍್ಷಗಳವರೆಗೆ ವಿಪಕ್ಷದವರು ಇವಿಎಂ ಬಗ್ಗೆ ಕೇಳುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಆದರೆ ನಾವು ೨೦೨೯ಕ್ಕೆ ಪ್ರವೇಶಿಸಿದಾಗ, ಲೋಕಸಭಾ ಚುನಾವಣೆ ವೇಳೆ ಬಹುಶಃ ಅವರು ಮತ್ತೆ ಇವಿಎಂ ಬಗ್ಗೆ ಕಿಡಿಕಾರಬಹುದು. ದೇಶವು ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಮೋದಿ ಹೇಳಿದ್ದಾರೆ.

ಈ ಸಭೆಯಲ್ಲಿ ನರೇಂದ್ರ ಮೋದಿ ಅವರನ್ನು ಎನ್‌ಡಿಎ ಮತ್ತು ಲೋಕಸಭೆಯ ನಾಯಕರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಲಿದ್ದಾರೆ. ಭಾನುವಾರ ಸಂಜೆ ೬ ಗಂಟೆಗೆ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಇದಕ್ಕೂ ಮೊದಲು, ಮುಖ್ಯ ಚುನಾವಣಾ ಆಯೋಗ ರಾಜೀವ್ ಕುಮಾರ್ ಅವರು ಇವಿಎಂಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುವವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಮುಂಬರುವ ಚುನಾವಣೆಯಲ್ಲಿ ಮತ್ತೆ ದುರುಪಯೋಗಪಡಿಸಿಕೊಳ್ಳಲು ಸಿದ್ಧವಾಗಿರುವುದರಿಂದ ಮುಂದಿನ ಚುನಾವಣೆಯವರೆಗೆ ಇವಿಎಂಗಳನ್ನು ವಿಶ್ರಾಂತಿಗೆ ಬಿಡಬೇಕು ಎಂದು ಹೇಳಿದ್ದರು. ಇವಿಎಂ ಟ್ಯಾಂಪರಿಂಗ್ ಆರೋಪದ ಕುರಿತು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ರಾಜೀವ್ ಕುಮಾರ್, ಕಳೆದ ೨೦-೨೨ ಚುನಾವಣೆಗಳಲ್ಲಿ ಇದೇ ರೀತಿಯ ಸಂಪ್ರದಾಯವನ್ನು ಅನುಸರಿಸಲಾಗಿದೆ. ಅಲ್ಲಿ ಇವಿಎಂಗಳನ್ನು ಟ್ಯಾಂಪರಿಂಗ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಅವುಗಳ ವಿಶ್ವಾಸರ‍್ಹತೆಯನ್ನು ಯಾವಾಗಲೂ ಪ್ರಶ್ನಿಸಲಾಗುತ್ತಿರುತ್ತದೆ ಎಂದಿದ್ದಾರೆ.

ಭಾರತದ ಚುನಾವಣಾ ಆಯೋಗದ ಪ್ರಕಾರ, ಬಿಜೆಪಿ ೨೪೦ ಸ್ಥಾನಗಳನ್ನು ಗೆದ್ದಿದೆ. ೨೦೧೯ರ ೩೦೩ ಸ್ಥಾನಗಳಿಗೆ ಹೋಲಿಸಿದರೆ ಇದು ಗಮನರ‍್ಹವಾಗಿ ಕಡಿಮೆಯಾಗಿದೆ. ಕಾಂಗ್ರೆಸ್ ಈ ಬಾರಿ ಗಣನೀಯ ಲಾಭವನ್ನು ಗಳಿಸಿತು. ೯೯ ಸ್ಥಾನಗಳನ್ನು ಗೆದ್ದಿತು. ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) ೨೯೩ ಸ್ಥಾನಗಳನ್ನು ಗಳಿಸಿದರೆ, ಇಂಡಿಯ ಬಣವು ೨೩೦ ಅಂಕಗಳನ್ನು ದಾಟಿತು, ತೀವ್ರ ಪೈಪೋಟಿಯನ್ನು ಕೂಡ ಒಡ್ಡಿತು.

 

ನರೇಂದ್ರ ಮೋದಿ ಅವರು ಜೂನ್ ೯ರಂದು (ಭಾನುವಾರ) ಸಂಜೆ ೬ ಗಂಟೆಗೆ ಸತತ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ. ಪ್ರಮಾಣ ವಚನ ಸಮಾರಂಭದಲ್ಲಿ ಹಲವಾರು ವಿದೇಶಿ ನಾಯಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top