ಹೊಸಪೇಟೆ : ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಬೂದಗುಂಪಾ ಕ್ರಾಸ್ ಬಳಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆಯ ರೈತ ನಾಯಕ ಜೆ. ಕಾರ್ತಿಕ್ ( 40 ) ಸಾವನ್ನಪ್ಪಿದ್ದಾರೆ.
ಬೈಕ್ ಮೇಲೆ ತೆರಳಿದ್ದ ಜೆ. ಕಾರ್ತಿಕ್ ಬೈಕ್ ಸ್ಕಿಡ್ ಆಗಿ ಬಿದ್ದಿದ್ದಾರೋ, ಅಥವಾ ಹಿಟ್ ಅಂಡ್ ರನ್ ಆಗಿದೆಯೋ ಅನ್ನೋದು ತಿಳಿಯಬೇಕಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ಜೆ. ಕಾರ್ತಿಕ್ ರನ್ನು, ಹುಬ್ಬಳ್ಳಿಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ, ಇಂದು ಬೆಳಗಿನ ಜಾವ ಸಾವನ್ನಪ್ಪಿದ್ದಾರೆ
ಹೊಸಪೇಟೆಯ ನಿವಾಸಿ ಜೆ. ಕಾರ್ತಿಕ್, ನಾನಾ ರೈತರ ಹೋರಾಟಗಳಲ್ಲಿ ಭಾಗಿಯಾಗಿದ್ರು. ಈ ಹಿಂದೆ ಕೋಡಿಹಳ್ಳಿ ಚಂದ್ರಶೇಖರ ಬಣದ ರೈತ ಸಂಘದಲ್ಲಿದ್ರು, ಕರ್ನಾಟಕ ರಾಜ್ಯ ರೈತರ ಸಂಘ, ಹಸಿರು ಸೇನೆ ಎಂಬ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಹಲವು ಹೋರಾಟಗಳನ್ನು ಮಾಡಿದ್ದ ಜೆ. ಕಾರ್ತಿಕ್ ಸಾವಿಗೆ ಹಲವು ಅನುಮಾನಗಳು ಎದ್ದಿವೆ . ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಪೊಲೀಸ್ ಇಲಾಖೆಗೆ ಒತ್ತಾಯ ಮಾಡಲಾಗಿದೆ.
Facebook
Twitter
LinkedIn
Telegram
WhatsApp
Email
Print
Tumblr