ಕರ್ನಾಟಕದಲ್ಲಿ  ಸೋಲಾರ್ ಉದ್ಯಮದಲ್ಲಿ ಕ್ರಾಂತಿ: ಸರ್ಕಾರದ ಸಬ್ಸಿಡಿ ಯೋಜನೆಗಳಿಗೆ ಸೌರ ಫಲಕ ವಿತರಣೆಗೆ ಚಾಲನೆ

ಬೆಂಗಳೂರು: ಅದಾನಿ ಸೋಲಾರ್ ಮತ್ತು ವಾಟ್‌ಕ್ರಾಫ್ಟ್ ಎನರ್ಜಿ ಸೊಲ್ಯೂಷನ್ಸ್ ಪ್ರೈ. ಲಿಮಿಟೆಡ್ ನಿಂದ ಕರ್ನಾಟಕದಲ್ಲಿ ಸೌರ ವಿದ್ಯುತ್ ವಲಯದಲ್ಲಿ ಕ್ರಾಂತಿ ತರುತ್ತಿದ್ದು, ಅತ್ಯಾಧುನಿಕ ತಂತ್ರಜ್ಞಾನದ ಸೌರ ಫಲಕಗಳ ಚಿಲ್ಲರೆ ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡಿದೆ.

 

ನಗರದ ಮ್ಯಾರಿಯಟ್ ಹೋಟೆಲ್ ಸಭಾಂಗಣದಲ್ಲಿ ಅದಾನಿ ಗ್ರೂಪ್‌ನ ಸೋಲಾರ್ ಉತ್ಪಾದನಾ ಅಂಗವಾಗಿರುವ ಅದಾನಿ ಸೋಲಾರ್ ಕರ್ನಾಟಕದಲ್ಲಿ ವ್ಯಾಟ್‌ಕ್ರಾಫ್ಟ್ ಎನರ್ಜಿ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ ನಿಂದ ಅತ್ಯಾಧುನಿಕ ಸೌರ ಫಲಕಗಳನ್ನು ಅದಾನಿ ಗ್ರೂಪ್ ನ ಪ್ಯಾನ್ ಇಂಡಿಯ ಮಾರಾಟಗಾರರಾದ ಸಿಸಿಲ್ ಆಗಸ್ಟಿನ್, ಅದಾನಿ ಗ್ರೂಪ್ ದಕ್ಷಿಣ ವಲಯ ವ್ಯವಸ್ಥಾಪಕರಾದ ಪ್ರಶಾಂತ್ ಬೈಂದೂರು ಹಾಗೂ ವ್ಯಾಟ್ ಕ್ರಾಫ್ಟ್ ಎನರ್ಜಿ ಸೊಲ್ಯೂಷನ್ಸ್ ಪ್ರೈವೈಟ್ ಲಿಮಿಟೆಡ್ ವ್ಯವಸ್ಥಾಪಕರಾದ ಅನೂಪ್ ಶೆಟ್ಟಿ ಅದಾನಿ ಸೌರ ಫಲಕಗಳನ್ನು ಅನಾವರಣಗೊಳಿಸಿದರು. 

ಸಿಸಿಲ್ ಅಗ್ಟಸ್ಟಿನ್ ಮಾತನಾಡಿ, ರಾಜ್ಯ ಸರ್ಕಾರದ ಮೇಲ್ಛಾವಣಿ ಸೌರ ಫಲಕ ಯೋಜನೆ, ಪ್ರಧಾನ ಮಂತ್ರಿ ಕುಸುಮ್, ಪ್ರಧಾನ ಮಂತ್ರಿ ಸೂರ್ಯಘರ್ ಮಫ್ಟ್ ಬಿಲ್ ಯೋಜನೆಗಳಿಗೆ ಸೌರ ವಿದ್ಯುತ್ ಸ್ಥಾಪನೆಗಾಗಿ ಸೌರ ಫಲಕಗಳನ್ನು ಒದಗಿಸಲಾಗುವುದು. ಖಾಸಗಿ ವಲಯಕ್ಕೂ ಸಹ ಪೂರೈಕೆ ಮಾಡಲಾಗುವುದು. ಅದಾನಿ ಕಂಪನಿ ಸೌರ ಫಲಕ ಉದ್ಯಮದಲ್ಲಿ ಹೊಸ ಆಯಾಮ ಸೃಷ್ಟಿಸಿದ್ದು, ಸೌರ ಫಲಕಕ್ಕೆ ನವನವೀನ ತಂತ್ರಜ್ಞಾನ ಆಳವಡಿಸಲಾಗಿದೆ. ಈ ಸೌರ ಫಲಕ ಮೇಲ್ಬಾಗ ಮತ್ತು ಕೆಳಭಾಗ ಎರಡೂ ಬದಿಯಲ್ಲಿ ವಿದ್ಯುತ್ ಉತ್ಪಾದನೆ ಮಾಡಲಿದ್ದು, ಇತರೆ ಸೌರ ಫಲಕಕ್ಕೆ ಹೋಲಿಸಿದರೆ ಶೇ 30 ರಷ್ಟು ಹೆಚ್ಚಿನ ವಿದ್ಯುತ್ ಉತ್ಪಾದನೆಯಾಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಶುದ್ಧ ಇಂಧನ ಯೋಜನೆಗಳಿಗೆ ಸೌರ ವಿದ್ಯುತ್ ಫಲಕಗಳನ್ನು ಪೂರೈಸಲಾಗುವುದು  ಎಂದರು. 

ಪ್ರಶಾಂತ್ ಮಾತನಾಡಿ, ಪ್ರಥಮ ಬಾರಿಗೆ ಸೌರ ಫಲಕದಲ್ಲಿ ಅದಾನಿ ಕಂಪನಿ ಸೋಲಾರ್ ಟಾಪ್ ಆನ್ ತಂತ್ರಜ್ಞಾನ ಆಳವಡಿಸಲಾಗಿದೆ. ಬಾಳಿಕೆ ಮತ್ತು ಉಳಿತಾಯಕ್ಕೆ ಅದಾನಿ ಸೋಲಾರ್ ಪ್ಯಾನಲ್ ಅನುಕೂಲವಾಗಲಿದೆ. ಕರ್ನಾಟಕ ಪ್ರತಿ ಮೂಲೆ, ಮೂಲೆಗಳಲ್ಲಿ ಅದಾನಿ ಸೌರ ಫಲಕ ತಲುಪಿಸುತ್ತಿದ್ದು, ಮನೆ, ಕೈಗಾರಿಕೆ, ಕೃಷಿಗೆ ಇದು ಉಪಯೋಗವಾಗಲಿದೆ ಎಂದರು.

 

ಆನೂಪ್ ಶೆಟ್ಟಿ ಮಾತನಾಡಿ, ಅದಾನಿ ಸೋಲಾರ ಅಧಿಕೃತ ಸಗಟು ಮಾರಾಟದ ಜವಾಬ್ದಾರಿಯನ್ನು ನಮ್ಮ ಕಂಪನಿ ಪಡೆದುಕೊಂಡಿದೆ. ಅದಾನಿ ಸೋಲಾರ್ ಪ್ಯಾನಲ್ ಉಪಯೋಗದ ಬಗ್ಗೆ ಜನ ಜಾಗೃತಿ ಮೂಡಿಸಲಾಗುವುದು.  ಅದಾಗಿ ಗ್ರೂಪ್ ಸೌರ ಫಲಕಗಳ ಮಾರಾಟದ ವ್ಯಾಪ್ತಿಯನ್ನು 3,500 ಕ್ಕೂ ಹೆಚ್ಚು ಪಟ್ಟಣಗಳಿಗೆ ವಿಸ್ತರಿಸಿದೆ ಎಂದರು. 

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top