ಹೆಚ್.ಡಿ. ಕುಮಾರಸ್ವಾಮಿ ಈಗ ಬಿಜೆಪಿ ವಕ್ತಾರಾರಾಗಿದ್ದಾರೆ:  ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.  ಕುಮಾರಸ್ವಾಮಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಈಗ ಬಿಜೆಪಿ ವಕ್ತಾರ ಆಗಿಬಿಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ವ್ಯಂಗ್ಯವಾಡಿದರು.

ಅವರು ಇಂದು 2024-25 ನೇ ಸಾಲಿನ ಆಯವ್ಯಯವನ್ನು ಮಂಡಿಸಿದ ನಂತರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ  ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ಬಸವಣ್ಣನವರು ಸಮಾನತೆಯನ್ನು ಕಂಡಿದ್ದವರು. ಸಮಸಮಾಜಕ್ಕಾಗಿ ಚಳವಳಿ ಮಾಡಿದವರನ್ನು ಸಾಂಸ್ಕøತಿಕ ನಾಯಕ ಎಂದು ಘೋಷಿಸಿದ್ದೇವೆ. ಕೇಂದ್ರ ಸರ್ಕಾರದ ಬಿಜೆಪಿಯ  ಅವಧಿಯದ್ದು ಶೇ 5.8% ಸರ್ಕಾರ. ನಮ್ಮದು ಶೇ 2.95 % ವಿತ್ತೀಯ ಕೊರತೆ (ಫಿಸ್ಕಲ್ ಡೆಫಿಸಿಟ್) ಇದೆ. ಒಟ್ಟಾರೆ ಜನಪರ ಬಜೆಟ್. ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಸಮಾನವಾಗಿ ಬೆಳೆಸುವ ಕೆಲಸ ಮಾಡಲಾಗಿದೆ ಎಂದರು.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ 1,20000 ಕೋಟಿ ಅಭಿವೃದ್ಧಿಗೆ ಖರ್ಚು ಮಾಡಿದರೆ ಅದು ಅಭಿವೃದ್ಧಿಪೂರಕ ಬಜೆಟ್. 52009 ಕೋಟಿ ಬಡವರಿಗೆ ಖರ್ಚು ಮಾಡಿದೆ ಅದು ಅಭಿವೃದ್ಧಿಗೆ ಪೂರಕವಾಗಿರುವಂಥದ್ದು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಕಾಲದಲ್ಲಿ  77, 750 ಕೋಟಿ ರೂ.ಗಳ ಒಟ್ಟು ಸಾಲ , 23 ಸಾವಿರ ಕೋಟಿ ರೂ.ಗಳ ಋಣೇತರ ಸ್ವೀಕೃತಿಗಳಾಗಿದೆ. ಕೇಂದ್ರ ಸರ್ಕಾರ 16.85 ಲಕ್ಷ ಕೋಟಿ ಈ ವರ್ಷಕ್ಕೆ ಸಾಲ ಮಾಡಿದೆ ಎಂದು ವಿವರಿಸಿದರು.

ಬಿಜೆಪಿಗೆ ಕಾಮಾಲೆ ರೋಗ

ಮಾಧ್ಯಮದವರ ಮತ್ತೊಂದು ಪ್ರಶ್ನಗೆ ಪ್ರತಿಕ್ರಿಯೆ ನೀಡಿ 3,71,383 ಕೋಟಿ ಗಾತ್ರದ ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ  3 ಸಾವಿರ ಕೋಟಿ  (1%ಕ್ಕಿಂತ ಕಡಿಮೆ) ಕೊಡಲಾಗಿದೆÀ.  ಎಸ್ ಸಿ ಪಿ /ಟಿಎಸ್‍ಪಿ ಯಲ್ಲಿ 2017-18 ರಲ್ಲಿ 30 ಸಾವಿರ ಕೋಟಿ ನೀಡಲಾಗಿತ್ತು. ಕಳೆದ  ಜುಲೈ ಬಜೆಟ್ ನಲ್ಲಿ 34 ಸಾವಿರ ಕೋಟಿ ಕೊಡಲಾಗಿತ್ತು. ಈಗ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ  39 ಸಾವಿರ ಕೋಟಿಗೂ ಹೆಚ್ಚು ಅನುದಾನ ನೀಡಲಾಗಿದೆ. ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಬಾಯಿಯಲ್ಲಿ ಮಾತ್ರ ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್ ಎನ್ನುತ್ತಾರೆ. ಬಿಜೆಪಿಗೆ ಕಾಮಾಲೆ ರೋಗ ಎಂದರು.

 

ಬೆಂಗಳೂರಿಗೆ ಹೆಚ್ಚು ಅನುದಾನ ನೀಡಿಲ್ಲ, ಹೆಚ್ಚು ಕಾರ್ಯಕ್ರಮಗಳನ್ನು ನೀಡಲಾಗಿದೆ. ಬಿಜೆಪಿ ಬೆಂಗಳೂರನ್ನು ನಿರ್ಲಕ್ಷ್ಯ ಮಾಡಿತ್ತು  ಹೆಚ್ಚು ಯೋಜನೆ ಕೊಡಲಾಗಿದೆ. ನಾವು ಬ್ರ್ಯಾಂಡ್  ಬೆಂಗಳೂರು 1.50 ಕೋಟಿ ಜನರಿದ್ದು, ಅವರಿಗೆ ಮೂಲಭೂತ ಸೌಕರ್ಯಕ್ಕೆ ಅನುದಾನ ನೀಡಲಾಗಿದೆ. 

ಹೈದರಾಬಾದ್ ಕರ್ನಾಟಕ್ಕೆ 1500 ಕೋಟಿ ರೂ.ಗಳು ಈವರೆಗ ವೆಚ್ಚವಾಗಿದ್ದು, ಈ ಬಾರಿ  ಕ್ರಿಯಾ ಯೋಜನೆಯನ್ನು ಏಪ್ರಿಲ್ ನಲ್ಲಿಯೇ  ತಯಾರಿಸಿ ಹೆಚ್ಚು ವೆಚ್ಚ ಮಾಡಲಾಗುವುದು ಎಂದರು.

ಎಸ್ ಸಿಪಿ ಟಿಎಸ್ ಪಿ ಯಿಂದ ಗ್ಯಾರಂಟಿಗೆ ಅನುದಾನ ತೆಗೆದುಕೊಳ್ಳಲಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿ  ಅಲ್ಲಿಂದ ಕೆಲವೊಮ್ಮೆ ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲಿಯೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರು ಬರುತ್ತಾರೆ. ಅವರ ಜನಸಂಖ್ಯೆಯಲ್ಲಿ ಆಧಾರದ ಮೇಲೆ ಪಡೆಯಲಾಗುವುದು ಎಂದರು.

ಜೆ.ಹೆಚ್ ಪಟೇಲ್ ಸರ್ಕಾರದಲ್ಲಿ ಮಾಡಿದಂತೆ ಬಾಂಡ್ ಮೂಲಕ ಸಾಲ ತೆಗೆದುಕೊಳ್ಳುವ ಕೆಲಸ ಈಗ  ಮಾಡುತ್ತಿಲ್ಲ.  ಆಗ ಪಡೆದಿದ್ದ ಬಾಂಡ್‍ಗಳನ್ನು ಬಡ್ಡಿ ಸಮೇತ ಹಿಂದಿರುಗಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೇಂದ್ರದಿಂದ ನಿರಂತರ ಅನ್ಯಾಯ, ನಮ್ಮ ಪಾಲಿನ ನ್ಯಾಯಯುತ ಪಾಲು ಬರದಿದ್ದರೂ ರಾಜ್ಯ ಆರ್ಥಿಕವಾಗಿ ಸುಭದ್ರ

ವಿತ್ತೀಯ ಕೊರತೆ 82981 ಕೋಟಿ ರೂ.ಗಳು ರಷ್ಟಿದ್ದು, ರಾಜ್ಯದ ಜಿಎಸ್ ಡಿ ಪಿಯ 2.95% ರಷ್ಟಿದೆ. ಇದು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ 2002ರಲ್ಲಿ ನಿಗದಿಪಡಿಸಿರುವ ಶೇ.3 ರ ಮಿತಿಯೊಳಗೆ ಇದ್ದು, ವಿತ್ತೀಯ ಶಿಸ್ತು ಪಾಲಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

 

ಕರ್ನಾಟಕದಲ್ಲಿ  ರಾಜಸ್ವ ಕೊರತೆ 27354 ಕೋಟಿ ರೂಇದ್ದು, 0.97% ರಷ್ಟಿದೆ. ಹೊಣೆಗಾರಿಕೆಯು(Borrowings)  105246 ಕೋಟಿಗಳಿದ್ದು, ಜಿಎಸ್ ಡಿಪಿಯ ಶೇ.23.68ರಷ್ಟಿದೆ. ರಾಜಸ್ವ ಹೆಚ್ಚಳ (Revenue Surplus)ನ್ನು  ಮುಂದಿನ ವರ್ಷದಿಂದ ಸ್ಥಿರಗೊಳ್ಳಲಿದೆ ಎಂದರು.

ರಾಜ್ಯ ಆರ್ಥಿಕವಾಗಿ ಸುಭದ್ರ

2017-2018 ರಿಂದ ಇಲ್ಲಿಯವರೆಗೆ 1,87,000 ಲಕ್ಷ ಕೋಟಿ ಬಂದಿದ್ದರೆ ರಾಜ್ಯ ಅಭಿವೃದ್ಧಿಯಾಗುತ್ತಿತ್ತು. 6 ವರ್ಷಗಳಲ್ಲಿ 62000 ಕೋಟಿ ಹಂಚಿಕೆಯಲ್ಲಿ ಅನ್ಯಾಯವಾಗಿದೆ. ಕೇಂದ್ರದಿಂದ ನ್ಯಾಯಯುತ ಪಾಲು ಬರದಿದ್ದರೂ ರಾಜ್ಯ ಆರ್ಥಿಕವಾಗಿ ಸುಭದ್ರವಾಗಿದ್ದೇವೆ. ಗ್ಯಾರಂಟಿಗಳಿಗೆ 52009 ಕೋಟಿ ಅಂದಾಜಿಸಲಾಗಿದೆ. ಇದಕ್ಕೂ ಹೆಚ್ಚು ಬೇಕಾದಲ್ಲಿ ನೀಡಲಾಗುವುದು ಎಂದರು.

ಕೇಂದ್ರದಿಂದ ರಾಜ್ಯಕ್ಕೆ ಕೇವಲ 23% ಸ್ವೀಕೃತಿ

ಉತ್ತರ ಪ್ರದೇಶ ರಾಜ್ಯದಿಂದ 49% ತೆರಿಗೆ  ಹೋದರೆ ಕೇಂದ್ರದಿಂದ ಸ್ವೀಕೃತಿ  312280 ಕೋಟಿ ರೂ. ಬರುತ್ತದೆ. ಕರ್ನಾಟಕದಿಂದ 77 % ತೆರಿಗೆ ಕೇಂದ್ರಕ್ಕೆ ಹೋದರೆ ಮುಂದಿನ ವರ್ಷಕ್ಕೆ ರಾಜ್ಯಕ್ಕೆ ಕೇವಲ 59,785 ರೂ. ಅಂದರೆ ಕೇವಲ 23% ಬರುತ್ತದೆ. ಉತ್ತರಪ್ರದೇಶ, ರಾಜಸ್ಥಾನ, ಮದ್ಯಪ್ರದೇಶ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡಲು ನಮಗೆ ವಿರೋಧವಿಲ್ಲ. ಆದರೆ ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಕತ್ತರಿಸಿದಂತೆ, ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡಬಾರದು ಎಂದರು.

ಬಿಟ್ಟಿ ಭಾಗ್ಯ ಎಂದು ಬಡವರಿಗೆ ಅವಮಾನ

 

ಸಾರ್ವತ್ರಿಕ ಮೂಲ ಆದಾಯ ದಂತೆ ಪ್ರತಿಯೊಬ್ಬರಿಗೆ ವಾರ್ಷಿಕವಾಗಿ 50 ರಿಂದ 55 ಸಾವಿರ ರೂ. ಸಿಗುತ್ತದೆ. 155 ಕೋಟಿ ಮಹಿಳೆಯರು ಬಸ್ ಗಳಲ್ಲಿ ಉಚಿತವಾಗಿ ತಿರುಗಾಡಿದರೆ , ಅನ್ನಭಾಗ್ಯದಡಿ ಊಟ, ವಿದ್ಯುತ್ ಬಿಲ್ ಕಟ್ಟಬೇಡಿ , 1.17 ಲಕ್ಷ ಮಹಿಳೆಯರಿಗೆ 2000 ರೂ. ತಿಂಗಳಿಗೆ ನೀಡಿದರೆ , ಅದನ್ನು ಬಿಟ್ಟಿ ಭಾಗ್ಯ ಎಂದು ಬಡವರಿಗೆ ಅವಮಾನಿಸಿದ್ದಾರೆ.  ನಮ್ಮ ಆಯವ್ಯಯ  ಎಲ್ಲರನ್ನೂ ಒಳಗೊಂಡ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಎಲ್ಲ ಜಾತಿ, ಧರ್ಮಗಳುಸೇರಿದಂತೆ ಎಲ್ಲರಿಗೂ ಕೊಂಡುಕೊಳ್ಳುವ ಶಕ್ತಿ ಹೆಚ್ಚಾಗಲಿ ಎಂದು ಜಾರಿ ಮಾಡಲಾಗಿದೆ.  ದೂರದೃಷ್ಟಿಯಿರುವ , ಎಲ್ಲರನ್ನೂ ಒಳಗೊಂಡ, ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಆಯವ್ಯಯ ಎಂದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top