ಹಾಸನ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದು ಎನ್ನಲಾದ ವಿಡಿಯೋಕ್ಕೆ ಸಂಬಂಧಿಸಿದ ಸಂತ್ರಸ್ಥೆ ಮಹಿಳೆಯನ್ನು ಅಪಹರಿಸಿದ್ದ ಆರೋಪದ ಮೇಲೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ (HD Revanna) ಅವರು ಜೈಲು ಸೇರಿದ್ದರು. ಇಂದು(ಮೇ. 14) ಜೈಲಿನಿಂದ ಬಿಡುಗಡೆಯಾಗಿದ್ದು, ಜೆಡಿಎಸ್ ಕರ‍್ಯರ‍್ತರಲ್ಲಿ ಸಂಭ್ರಮ ಮನೆ ಮಾಡಿದೆ. ಇದರ ಬೆನ್ನಲ್ಲೇ ನಾಳೆ (ಮೇ. 15) ರೇವಣ್ಣ ಅವರು ಸ್ವಕ್ಷೇತ್ರ ಹೊಳೆನರಸೀಪುರಕ್ಕೆ ತೆರಳುವ ಸಾಧ್ಯತೆಯಿದ್ದು, ರೇವಣ್ಣ ಸ್ವಾಗತಕ್ಕೆ ಜೆಡಿಎಸ್ ಕಾರ್ಯಕರ್ತರು ಸಿದ್ಧತೆ ಮಾಡಿಕೊಂಡಿದ್ದಾರೆ. ಜಿಲ್ಲೆಯ ಗಡಿಯಲ್ಲೇ ಸ್ವಾಗತಕೋರುವುದಕ್ಕೆ ಭರ್ಜರಿ ತಯಾರಿ ನಡೆಸಿದ್ದಾರೆ.
ನಾಳೆ ಹೊಳೆನರಸೀಪುರಕ್ಕೆ ಹೋಗಿ ದೇಗುಲಗಳಿಗೆ ಭೇಟಿ?
ಇನ್ನು ರೇವಣ್ಣ ಜೈಲಿನಿಂದ ಬಿಡುಗಡೆ ಹಿನ್ನಲೆ ಮಂಕಾಗಿದ್ದ ದಳ ಕೋಟೆಯಲ್ಲಿ ಉತ್ಸಾಹ ಹೆಚ್ಚಿದೆ. ತಮ್ಮ ನಾಯಕನ ಸ್ಚಾಗತಕ್ಕೆ ಜೆಡಿಎಸ್ ಮುಖಂಡರು ಹಾಗೂ ಕರ‍್ಯರ‍್ತರು ಸಜ್ಜಾಗಿದ್ದಾರೆ. ಜೊತೆಗೆ ಕರ‍್ಯರ‍್ತರು ಹಾಗೂ ಮುಖಂಡರಲ್ಲಿ ಹೊಸ ಹುಮ್ಮಸ್ಸು ಮೂಡಿದೆ. ಇಂದು ಬಿಡುಗಡೆಯಾಗಿ ಬೆಂಗಳೂರಿನ ಮನೆಗೆ ತೆರಳಿರುವ ರೇವಣ್ಣ ಅವರು, ನಾಳೆ (ಮೇ. 15) ಹೊಳೆನರಸೀಪುರದ ಮನೆಗೆ ಆಗಮಿಸಿ, ಬಳಿಕ ಆರಾಧ್ಯ ದೇವಾಲಯಗಳಾದ ಹೊಳೆನರಸೀಪುರದ ಲಕ್ಷ್ಮಿನರಸಿಂಹ, ದೇವೇಗೌಡರ ಹುಟ್ಟೂರು ಹರದನಹಳ್ಳಿಯಲ್ಲಿರುವ ಮನೆ ದೇವರು ದೇವೇಶ್ವರ, ಮಾವಿನಕೆರೆಯ ಬೆಟ್ಟದ ರಂಗನಾಥನಿಗೆ ಪೂಜೆ ಸಲ್ಲಿಸುವ ಸಾಧ್ಯತೆಯಿದೆ.
ಡಿಸಿಎಂ ಡಿಕೆ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಗರಂ:
ಇತ್ತ ರೇವಣ್ಣ ಬಿಡುಗಡೆ ಹಿನ್ನಲೆ ಪದ್ಮನಾಭನಗರದ ದೇವೇಗೌಡರ ನಿವಾಸದ ಬಳಿ ಜೆಡಿಎಸ್ ಕರ‍್ಯರ‍್ತರು ರೇವಣ್ಣ ಪರ ಜೈಕಾರ ಘೋಷಿಸಿದ್ದಾರೆ. ಇದೇ ವೇಳೆ ಕರ‍್ಯರ‍್ತರು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಗರಂ ಆಗಿದ್ದಾರೆ. ‘ ರೇವಣ್ಣ ಕಣ್ಣೀರು ಹಾಕಿದ್ದಾರೆ, ಡಿಕೆ ಸಹ ಜೈಲಿಗೆ ಹೋಗ್ತಾರೆ. ಡಿಕೆಗೆ ಒಕ್ಕಲಿಗರ ಮತ ಬೀಳಲ್ಲ, ಡಿಕೆಶಿ ಸಿಎಂ ಆಗುವುದಿಲ್ಲ. ಊ.ಆ.ರೇವಣ್ಣ ಅವರು ಎಷ್ಟೋ ಜನರ ಕಣ್ಣೀರು ಒರೆಸಿದ್ದರು. ರೇವಣ್ಣ ಇವತ್ತು ಕಣ್ಣೀರು ಹಾಕಿದ್ದಾರೆ, ಇದಕ್ಕೆ ರ‍್ಕಾರ ಕಾರಣ ಎಂದು ಡಿಸಿಎಂ ಡಿಕೆ ವಿರುದ್ಧ ಎಆS ಕರ‍್ಯರ‍್ತರು ಆಕ್ರೋಶ ವ್ಯಕ್ತಪಡಿಸಿದರು.
ಸಂಜೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಲಿರುವ ರೇವಣ್ಣ:
ಇನ್ನು ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೆ ಹೆಚ್.ಡಿ.ರೇವಣ್ಣ ಅವರು ತಾಯಿ ಚಾಮುಂಡಿ ಆಶರ‍್ವಾದ ಪಡೆಯಲು ಮುಂದಾಗಿದ್ದಾರೆ. ಅದರಂತೆ ಇಂದು (ಮೇ. 14) ಸಂಜೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಲಿರುವ ಅವರು, ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಜೊತೆಗೆ ನಾಳೆ ಸ್ವಕ್ಷೇತ್ರ ಹೊಳೆನರಸೀಪುರದ ಮನೆಗೆ ಆಗಮಿಸಿ ದೇವಸ್ಥಾನಗಳಿಗೆ ಭೇಟಿ ನೀಡಲಿದ್ದಾರೆ.