ಶಿವಮೊಗ್ಗ: ವಿಶ್ರಾಂತ ನೌಕರರ ಸಂಘ ಶನಿವಾರ ಏರ್ಪಡಿಸಿದ್ದ ನಿವೃತ್ತ ಸರಕಾರಿ ಅಧಿಕಾರಿಗಳು ಹಾಗೂ ನೌಕರರ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪಾಲ್ಗೊಂಡರು. ಮಾಜಿ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಚಂದ್ರಶೇಖರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್, ನಿವೃತ್ತ ಡಿಎಫ್ಒ ರವಿಕುಮಾರ್, ನಿವೃತ್ತ ಡಿವೈಎಸ್ಪಿಗಳಾದ ಪಿ.ಒ. ಶಿವಕುಮಾರ್, ಎಸ್.ಸಿ. ಮಂಜಪ್ಪ, ನಿವೃತ್ತ ಎಆರ್ಟಿಒ ಪಾಲಾಕ್ಷಪ್ಪ, ನಿವೃತ್ತ ಡಿಡಿಪಿಐ ಕುಮಾರ್ ಮತ್ತಿತರರು ಪಾಲ್ಗೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ನೀವು ನಿವೃತ್ತರಾಗಿದ್ದೆರೆಂದು ಭಾವಿಸುವ ಅಗತ್ಯವಿಲ್ಲ. ನಿಮ್ಮಂತ ಪ್ರಜ್ಞಾವಂತರ, ಅನುಭವಿಗಳ ಸೇವೆ ಈ ಸಮಾಜಕ್ಕೆ ಹೆಚ್ಚಿನ ಅಗತ್ಯವಿದೆ. ನಿಮ್ಮ ಜ್ಞಾನ ಸಮಾಜಕ್ಕೆ ಮತ್ತಷ್ಟು ಹಂಚಿಕೆ ಆಗಬೇಕಿದೆ. ಇದಕ್ಕೆ ಕಾಂಗ್ರೆಸ್ ಪಕ್ಷ ಎಲ್ಲ ಸಹಕಾರ ನೀಡಲಿದೆ. ಪಕ್ಷಕ್ಕೂ ನಿಮ್ಮ ಮಾರ್ಗದರ್ಶನ ಬೇಕಿದೆ ಎಂದರು.

ವಿಶ್ರಾಂತ ಅಧಿಕಾರಿಗಳು ಹಾಗೂ ನೌಕರರೂ ಇದಕ್ಕೆ ಸಹಮತ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವುದಾಗಿ, ಸಂಘಟನೆ, ಬಲವರ್ಧನೆಗೆ ಶ್ರಮಿಸುವುದಾಗಿ ಭರವಸೆ ನೀಡಿದರು.