ಕುಷ್ಟಗಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಕುಷ್ಟಗಿ ತಾಲೂಕು ಅಧ್ಯಕ್ಷರಾದ ಹಿರಿಯ ಮುಖಂಡರು ಚಂದಪ್ಪ ತಳವಾರ ತಮ್ಮ ಬ್ಲಾಕ್ ಕಾಂಗ್ರೇಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದಿಂದ ಹೊರ ಬಂದಿದ್ದಾರೆ.ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಶಿವರಾಜ ತಂಗಡಗಿ ಇವರಿಗೆ ರಾಜಿನಾಮೆ ಪತ್ರ ನೀಡಿ ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳು ಸಾಕಷ್ಟು ಇದ್ದು ಹಾಗೂ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ರವರು ನಮಗೆ ಸರಿಯಾದ ರೀತಿಯಲ್ಲಿ ಸ್ಪಂದಿಸುವದಿಲ್ಲ ನಮಗೆ ಬಹಳ ಬೇಜಾರಾಗಿದೆ ಮತ್ತು ಹನಮಸಾಗರದ ಕಾಂಗ್ರೆಸ್ ಪಕ್ಷದಲ್ಲಿ ಜಾತೀಯತೆ ಬಹಳ ಇದ್ದು ಪಕ್ಷ ಸಂಘಟನೆ ಮಾಡಲು ಆಗುತ್ತಿಲ್ಲ ಎಂದು ಖಚಿತ ಮಸಹಿತಿ ನೀಡಿ ಪಕ್ಷದಲ್ಲಿ ಕೆಲಸ ಮಾಡಲು ಆಗುತ್ತಿಲ್ಲ.

ಆದರೆ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಬೇಕಾದರೆ ನಮ್ಮ ರಾಜ್ಯ ನಾಯಕರಾದ ಸತೀಶ್ ಜಾರ್ಕಿಹೊಳಿ ಅಭಿಮಾನಕ್ಕಾಗಿ ಪಕ್ಷ ಸೇರ್ಪಡೆಗೊಂಡು ನಮ್ಮ ನಾಯಕರ ಅಭಿಮಾನದ ಪಕ್ಷನಿಷ್ಠೆ ಗಾಗಿ ಕೆಲಸ ಕಾರ್ಯಗಳನ್ನು 2015 ರಿಂದ ಇಲ್ಲಿಯ ವರೆಗೆ ನಿಷ್ಟೆಯಿಂದ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ ಆದರೆ ಈಗ ಕಾಂಗ್ರೇಸ್ ಪಕ್ಷದ ಹನಮಸಾಗರದಲ್ಲಿ ಜಾತೀಯತೆ ತಾಂಡವಾಡುತ್ತಿದೆ. ಹಿರಿಯರು ಕಿರಿಯರು ಎನ್ನುವ ಭಾವನೆ ಪಕ್ಷದಲ್ಲಿ ಎಳ್ಳಷ್ಟು ಪಕ್ಷದಲ್ಲಿ ಎಳ್ಳಷ್ಟು ಉಳಿಯದ ಕಾರಣ ನನ್ನ ವೈಯಕ್ತಿಕ ಕೆಲಸ ಕಾರ್ಯಗಳು ಸಾಕಷ್ಟು ಇದ್ದು ನಾನು ಬೇಸತ್ತು ರಾಜೀನಾಮೆ ನೀಡಿದ್ದೇನೆ ಎಂದು ಮಾಹಿತಿ ನೀಡಿದರು.