ಬಣ್ಣದ ಬದುಕು: ಬಯಲಾಟದ ಮುಮ್ಮೇಳಗಾರ “ಕೊತ್ತಲಚಿಂತ ಹೇಮರೆಡ್ಡಿ”

ಪ್ರಾಚೀನ ಕಾಲದಿಂದಲೂ ಬಹುತೇಕ ಹಳ್ಳಿಗಳಲ್ಲಿ ಯಾರಾದರೂ ನಾಟಕಗಳಲ್ಲಿ ,ಅದರಲ್ಲೂ ಬಯಲಾಟಗಳಲ್ಲಿ ಅಭಿನಯಿಸಿದರೆ ಅದನ್ನು ಆ ಅಭಿನೇತೃಗಳ ವರ್ಚಸ್ಸು, ಶ್ರೇಯಸ್ಸು ಎಂದು ಭಾವಿಸಿದ ಕಾಲ ನಮ್ಮ ಕಾಲಮಾನದೊಂದಿಗೆ ಬೆಸೆದು ಕೊಂಡಿದೆ.ಅಂತೆಯೇ ಇಂದಿಗೂ ಪ್ರತಿಹಳ್ಳಿಗಳಲ್ಲಿ ಗ್ರಾಮೋದ್ಧಾರಕ್ಕಾಗಿ,ಕುಟುಂಬದ ಶ್ರೇಯಸ್ಸಿಗೆ, ವೈಯಕ್ತಿಕ ಪ್ರತಿ?ಗೆ ನಾಟಕಗಳನ್ನು ಮಾಡುವುದನ್ನು ಕಾಣಬಹುದು.ಅದರಲ್ಲೂ ಬಹುತೇಕರು ಉದರ ಪೋ?ಣೆಗೂ ನಾಟಕಗಳಲ್ಲಿ ಅಭಿನಯಿಸುವುದಕ್ಕೆ ಮುಂದಾಗಿದ್ದಾರೆ. ಆದರೆ ಕೌಟುಂಬಿಕ ಹಿನ್ನೆಲೆಯಲ್ಲಿ ಧನವಂತರಾಗಿದ್ದರು ಊರಿನ ಆಸಕ್ತರೊಡನೆ ಸೇರಿ ಸ್ವಂತ ಖರ್ಚಿನಲ್ಲಿ ಗ್ರಾಮೋದ್ಧಾರಕ್ಕಾಗಿ ನಾಟಕಗಳನ್ನು ಮಾಡಿ ಹೆಸರಾದ ಕೆಲವರಲ್ಲಿ ಒರ್ವರು ಎಮ್ಮಿಗನೂರಿನ ಕೊತ್ತಲಚಿಂತ ಹೇಮರೆಡ್ಡಿ.


ಇವರು ಕಂಪ್ಲಿ ತಾಲೂಕಿನ ಎಮ್ಮಿಗನೂರಿನ ಗಿರಿರೆಡ್ಡಿ ಮತ್ತು ಜಡಿಯಮ್ಮ ಎಂಬ ದಂಪತಿಗಳ ಮಗನಾಗಿ ಕ್ರಿ.ಶ.೦೧.೦೬.೧೯೫೫ ರಲ್ಲಿ ಜನಿಸಿದರು.ಹುಟ್ಟೂರಿನಲ್ಲೇ ೯ ನೇತರಗತಿಯ ಓದಿ ನಂತರ ಅರ್ಧಕ್ಕೆ ನಿಲ್ಲಿಸಿದರು. ಕೌಟುಂಬಿಕವಾಗಿ ಉಳ್ಳವರಾಗಿದ್ದರಿಂದ ಇವರ ತಂದೆ ಊರಿನ ಸರಿಕರೊಡನೆ ಸೇರಿ ವ?ಕ್ಕೆ ಎರಡು ಬಾರಿ ನಡೆಯುವ ಜಾತ್ರೆ ಪ್ರಯುಕ್ತ ಗಿರಿಜಾ ಕಲ್ಯಾಣ ಬಯಲಾಟವಾಡಲು ಮುಂದಾದರು.ಅಲ್ಲದೇ ತಮ್ಮ ೧೦ ನೇ ವಯಸ್ಸಿನ ಹೇಮಣ್ಣರಿಗೂ ಬಾಲಕೃ? ಪಾತ್ರಕ್ಕೆ ಬಣ್ಣ ಹಚ್ಚಿ ತಾವು ತಾರಕಾಸುರರಾಗಿ ಅಭಿನಯಿಸಿದ್ದರು.ಈ ಮೂಲಕ ಹೇಮರೆಡ್ಡಿಯವರು ಬಣ್ಣದ ಲೋಕಕ್ಕೆ ಕಾಲಿಟ್ಟರು.ಇವರು ಸಹ ತಮ್ಮ ತಂದೆಯಂತೆ ಜಮೀನನ್ನು ಗುತ್ತಿಗೆಗೆ ನೀಡಿ ಧನ-ಕಾಳು ಕೂಡಿಟ್ಟಿದ್ದರು.ಅಲ್ಲದೇ ಅಪ್ಪನನ್ನು ಮೀರಿಸುವ ಮಟ್ಟಿಗೆ ವ?ಕ್ಕೊಮ್ಮೆ ಬಯಲಾಟ ಆಡಲು ಮುಂದಾದರು.ಅಂತೆಯೇ ಇವರು ಮಾಡಿದ ಪ್ರಮುಖ ಬಯಲಾಟಗಳೆಂದರೆ ಲವ – ಕುಶರ ಕಾಳಗದಲ್ಲಿ ಆಂಜಿನೇಯ, ರಾಮಾಯಣದಲ್ಲಿ ವಾಲಿಯಾಗಿ ಹಾಗೂ ಮುಂದೆ ಗಿರಿಜಾ ಕಲ್ಯಾಣದಲ್ಲಿ ತಂದೆ ಮಾಡಿದ ತಾರಕಾಸುರನಾಗಿ ಅಭಿನಯಿಸಿ ಜನಮನ್ನಣೆ ಗಳಿಸಿದರು.ಸುಮಾರು ೭೦ ಅಧಿಕ ನಾಟಕಗಳಲ್ಲಿ ಅಭಿನಯಿಸಿ ಅಭಿನಯ ರಸಾನುಭವ ಅನುಭವಿಸಿದ್ದಾರೆ.ಇವರು ಅಭಿನಯದ ಪಟ್ಟುಗಳನ್ನು ರಂಗ ಗುರುಗಾಳದ ಗುಂಡ್ಲುವದ್ದಿಗೇರಿ ತಿಮ್ಮನಗೌಡರಿಂದ ಕಲಿತಿದ್ದನ್ನು ಇಂದಿಗೂ ಸ್ಮರಿಸುತ್ತಾರೆ.ಅಲ್ಲದೇ ಪ್ರತಿ ಸಾರಿ ಬಯಲಾಟಕ್ಕೆ ಹೋಗುವಾಗ ಮನೆಯವರಿಂದ ಬೈಗುಳದ ಮಂಗಳಾರತಿಯ ಬೀಳ್ಕೊಡುಗೆ ಇದ್ದೇ ಇರುತ್ತಿತ್ತು. ಆದರೆ ಇದ್ಯಾವುದಕ್ಕೂ ಮನ ನೀಡದೆ ಕಲೆಯೇ ಸರ್ವಸ್ವ ಎಂದು ಬಾಳುವ ಇವರ ಪರಿ ಎಂತವರನ್ನೂ ಬೆರಗಾಗಿಸಿದೆ.


ಬಹುತೇಕ ಹಳ್ಳಿಗಳಲ್ಲಿ ತಾವೇ ಸ್ವತಃ ಪಟ್ಟಿಹಾಕಿ (ಹಣ ಹಾಕಿ) ನಟನೆ ಮುಂದಾಗುತ್ತಾರೆ.ಅಲ್ಲದೇ ತಮ್ಮ ಹಣದ ಮೊತ್ತಕ್ಕೆ ಅನುಗುಣವಾಗಿ ಉತ್ತಮವಾಗಿ ಅಭಿನಯಿಸುವ ಅಭಿನೇತ್ರಿಯರನ್ನು ಆಯ್ಕೆ ಮಾಡಿ ಅವರಿಗೆ ತಕ್ಕ ಮಟ್ಟಿಗೆ ಸಂಭಾವನೆ ನೀಡುತ್ತಾರೆ.ಅಂತೆಯೇ ಉಳ್ಳವರಾದರೆ ನಾಟಕಕ್ಕೆ ಪಟ್ಟಿಯಲ್ಲಾಗಲಿ, ಉಸ್ತುವಾರಿಯಲ್ಲಾಗಲಿ ಮೇಲುಗೈ ಇದ್ದೇ ಇರುತ್ತದೆ. ಅಂತೆಯೇ ಪ್ರತಿಸಾರಿ ಆಟವಾಡಿದಾಗ ಇವರ ಪಾಲುದಾರಿಕೆ ಹೇರಳ ಇರುತ್ತಿತ್ತು. ಆದರೆ ಈ ಒಂದು ಅನುಚೂನವಾದ ವ್ಯವಸ್ಥೆಯಿಂದಾಗಿ ಬೇಸತ್ತು,ಕಾಲ ಕ್ರಮೇಣವಾಗಿ ನಟನೆಯಿಂದ ಮುಮ್ಮೇಳಗಾರಿಕೆಗೆ ಬಂದು ತಾಳವಾದ್ಯ ನುಡಿಸುವಲ್ಲಿ ಪರಿಣಿತರಾಗಿ ಅಭಿಮನ್ಯು ಕಾಳಗ,ಪಾಂಡು ವಿಜಯ, ಸುಂದೋಪ ಸುಂದರ, ಭೀಮಾರ್ಜುನರ ಕಾಳಗ ಹೀಗೆ ಸುಮಾರು ೨೦೦೦ ಕ್ಕೂ ಹೆಚ್ಚಿನ ಬಯಲಾಟಗಳಿಗೆ ತಾಳವಾದ್ಯ ನುಡಿಸುವ ಮೂಲಕ ಪ್ರಸಿದ್ಧರಾಗಿದ್ದಾರೆ.ಅಲ್ಲದೇ ತಮ್ಮ ಬಯಲಾಟದ ಚತುರತೆಯನ್ನು ಕರ್ನಾಟಕ ರಾಜ್ಯದಲ್ಲಿ ಅಲ್ಲದೆ ಗುಜರಾತ್, ಕೇರಳ,ಆಂಧ್ರಪ್ರದೇಶ, ತಮಿಳುನಾಡು ರಾಜ್ಯದ ಅನೇಕ ಪ್ರದೇಶಗಳಲ್ಲಿ ತೋರಿಸಿ ಹೆಸರಾಗಿದ್ದಾರೆ.


ಇದೆಲ್ಲಕ್ಕೂ ಮಿಗಿಲಾಗಿ ಅಂದಿನ ಹೆಸರಾಂತ ರಾಜಕಾರಣಿಗಳಾದ ರಾಮಕೃ? ಹೆಗೆಡೆಯವರು,ಕೃ?ರಾಗಿ, ಎಂ.ಪಿ.ಪ್ರಕಾಶರು ಅರ್ಜುನರಾಗಿ ಹಾಗೂ ವಾಟಳ್ ನಾಗರಾಜರು ಸೈಂದವರಾಗಿ ಅಭಿನಯಿಸಿದ ಬಯಲಾಟದಲ್ಲಿ ಹೇಮರೆಡ್ಡಿಯವರು ಭಾಗವತರಾಗಿ (ಸೂತ್ರಧಾರ) ಆ ನಾಟಕವನ್ನು ಮುನ್ನೆಡೆಸಿದ್ದು ಇಂದಿಗೂ ಅವಿಸ್ಮರಣೀಯ.ಇ?ಲ್ಲಾ ಸಾಧನೆ ತೋರಿದ ಮಹನೀಯರು ಇಂದಿಗೂ ಯಾವ ಪ್ರಶಸ್ತಿ- ಪುರಸ್ಕಾರಗಳ,ಸರ್ಕಾರದ ಮಾಶಾಸನದಂತಹ ಸೌಲಭ್ಯಗಳ ಕಣ್ಣಿಗೂ ಬೀಳದಿರುವುದೇ ವಿ?ಧನೀಯ.
ಸುಮಾರು ೭೦ ರ ಪ್ರಾಯದ ಶ್ರೀಯುತರಲ್ಲಿ ಇಂದಿಗೂ ಬಯಲಾಟದ ಆಸಕ್ತಿ ಹಸಿರಾಗಿ ಉಳಿದಿರುವುದು. ಅವರ ಕಲೆಯ ಬಗೆಗಿನ ಇಚ್ಛಾಶಕ್ತಿಯನ್ನು ತೋರಿಸುತ್ತದೆ. ಇನ್ನಾದರೂ ಇಂತಹ ಎಲೆ ಮರೆಯ ಕಾಯಿಯಂತಿರುವ ಕಲಾವಿದರು ಎಲ್ಲರ ಕಣ್ಣಿಗೂ ಕಾಣಿಸಿ ಎಲ್ಲ ಮನ್ನಣೆ ಗಳಿಸಲಿ ಹಾಗೂ ಇವರ ಕಲಾ ನೈಪುಣ್ಯತೆ ಎಲ್ಲರಿಗೂ ಹಂಚಿಕೆಯಾಗಲಿ ಎಂಬುದೇ ನನ್ನಿ ಲೇಖನದ ಆಶಯ.

ಲೇಖನ
ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ.
ರಂಗ ಸಂಶೋಧನಾರ್ಥಿ.
manjuamazing7@gmail.com
9379857775.

Leave a Comment

Your email address will not be published. Required fields are marked *

Translate »
Scroll to Top