ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿಗೆ ಸಂಬಂಧಿಸಿದ ಪ್ರಕರಣದಲ್ಲಿ ತೆಲುಗು ನಟಿ ಮತ್ತು ಇತರೆ ಎಂಟು ಮಂದಿಗೆ ಕರ್ನಾಟಕ ಪೊಲೀಸರು ನೋಟಿಸ್ ನೀಡಿದ್ದು, ಅವರ ರಕ್ತದ ಮಾದರಿಯಲ್ಲಿ ಮಾದಕ ವಸ್ತುವಿನ ಅಂಶ ಇರುವುದು ಪತ್ತೆಯಾಗಿದೆ.
![](https://kannadanadunews.in/wp-content/uploads/2024/05/15-5.png)
ಇತ್ತೀಚೆಗೆ ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ ಬಳಿಯ ಫಾರ್ಮ್ಹೌಸ್ನಲ್ಲಿ ನಡೆದ ರೇವ್ ಪಾರ್ಟಿಯ ಮೇಲೆ ಸಿಸಿಬಿಯ ಮಾದಕ ವಸ್ತು ವಿರೋಧಿ ದಳ ದಾಳಿ ನಡೆಸಿ, ಸ್ಥಳದಿಂದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿತ್ತು. ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದ ೯೮ ಜನರ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಈ ಪೈಕಿ ೮೬ ಮಂದಿಯ ರಕ್ತದಲ್ಲಿ ಮಾದಕ ವಸ್ತುವಿನ ಅಂಶ ಇರುವುದು ದೃಢಪಟ್ಟಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Facebook
Twitter
LinkedIn
Telegram
WhatsApp
Email
Print