ಬೆಂಗಳೂರು : ರಾಜ್ಯದ ಭಕ್ತಾದಿಗಳಿಗೆ ತಿರುಪತಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕರ್ನಾಟಕ ಭವನದ ವಸತಿಗೃಹ ಕಾಮಗಾರಿಯನ್ನ ಮುಜರಾಯಿ ಸಚಿವ ರಾಮಲಿಂಗಾರೆರೆಡ್ಡಿ ಅವರು ಪ್ರಗತಿ ಪರಿಶೀಲನೆ ಮಾಡಿದರು, ವಸತಿ ಗೃಹದಲ್ಲಿ ಪೂರ್ವಬಾವಿಯಾಗಿ ವಿಶೇಷಪೂಜೆ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ ಮಾತನಾಡಿ, ಕರ್ನಾಟಕ ಮತ್ತು ತಿರುಪತಿ ತಿರುಮಲ ದೇವಸ್ಥಾನಕ್ಕೆ ನೂರಾರು ವರ್ಷಗಳಿಂದ ಅವಿನಾಭವ ಸಂಬಂಧವಿದ್ದು, ಇದು ಹಾಗೆಯೇ ಮುಂದುವರೆದಿದೆ.
ಪ್ರತಿ ತಿಂಗಳು ಲಕ್ಷಾಂತರ ಭಕ್ತರು ತಿರುಪತಿ ಬಾಲಾಜಿಯ ದರ್ಶನ ಪಡೆಯಲು ಆಗಮಿಸುತ್ತಾರೆ. ಭಕ್ತರಿಗೆ ಸುಸಜ್ಜಿತ ವಸತಿ ಸೌಲಭ್ಯ ಕಲ್ಪಿಸಬೇಕು ಎಂಬ ಉದ್ದೇಶದಿಮದ ರಾಜ್ಯ ಸರ್ಕಾರ ವಿಶೇಷ ವಸತಿಗೃಹಗಳನ್ನು ನಿರ್ಮಾಣ ಮಾಡುತ್ತಿದೆ. ಒಟ್ಟು ಇಲ್ಲಿ 110 ಕೊಠಡಿಗಳ ಮೂಲಕ ವಿಶೇಷ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ನಿರ್ಮಾಣ ಕಾಮಗಾರಿ ನಂತರ ಕರ್ನಾಟಕ ಭವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಉದ್ಘಾಟಿಸಲಿದ್ದಾರೆ. ರಾಜ್ಯದಿಂದ ತೆರಳುವ ಭಕ್ತರಿಗೆ ಉತ್ತಮ ವಸತಿ ಸೌಕರ್ಯ ಜೊತೆಯಲ್ಲಿ ಭಕ್ತರಿಗೆ ಶೀಘ್ರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಮಾಡಿರುವುದರಿಂದ ರಾಜ್ಯದ ಎಲ್ಲ ದೇವಸ್ಥಾನಗಳಿಗೆ ಭಕ್ತರು ಭೇಟಿ ನೀಡುತ್ತಿದ್ದಾರೆ ದೇವಸ್ಥಾನದ ಅದಾಯ ಜೊತೆಯಲ್ಲಿ ಸುತ್ತಮುತ್ತಲ ಪ್ರದೇಶದ ವ್ಯಾಪಾರ ವಹಿವಾಟುಗಳು ಚನ್ನಾಗಿ ನಡೆಯುತ್ತಿದೆ, ಆರ್ಥಿಕತೆ ಚೇತರಿಕೆ ಕಾಣುತ್ತಿದೆ ಎಂದರು.
ತಿರುಪತಿ ದೇವಸ್ಥಾನದ ಕಾರ್ಯಕಾರಿ ಸಮಿತಿ ಸದಸ್ಯ, ಶಾಸಕ ಎಸ್.ಆರ್.ವಿಶ್ವನಾಥ, ಕಂದಾಯ ಮತ್ತು ಮುಜರಾಯಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯ, ಮುಜರಾಯಿ ಇಲಾಖೆ ಆಯುಕ್ತರಾದ ಬಸವರಾಜೇಂದ್ರ, ಕರ್ನಾಟಕ ರಾಜ್ಯ ತಿರುಪತಿ, ತಿರುಮಲ ದೇವಸ್ಥಾನ ಟ್ರಸ್ಟ್ ವಿಶೇಷಾಧಿಕಾರಿ ಕೋದಂಡರಾಮ್, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕರಾದ ಎನ್.ನಾಗರಾಜು,ಕರ್ನಾಟಕ ವಸತಿ ನಿಗಮದ ಅಧಿಕಾರಿಗಳು, ಕೆಪಿಸಿಸಿ ಪ್ರಧಾನಕಾರ್ಯದರ್ಶಿ ಕೃಷ್ಣಂ ರಾಜು ಮತ್ತಿತರರು ಪಾಲ್ಗೊಂಡಿದ್ದರು.