ಪ್ರಧಾನಮಂತ್ರಿ ಗ್ರಾಮ ಸಡಕ ಯೋಜನೆ ಡಾಂಬರಿಕರಣ ರಸ್ತೆ ಸಂಪೂರ್ಣ ಕಳಪೆ ಕಾಮಗಾರಿ

ಕೊಪ್ಪಳ: ಮಾನ್ಯ ಸಂಸದ ಸಂಗಣ್ಣ ಕರಡಿಯವರೇ ನೋಡ ಬನ್ನಿ ನಿಮ್ಮ ಪ್ರಧಾನಮಂತ್ರಿ ಗ್ರಾಮ ಸಡಕ ಯೋಜನೆ ಡಾಂಬರಿಕರಣ ರಸ್ತೆಯನ್ನ ಸಂಪೂರ್ಣ ಕಳಪೆ ಕಾಮಗಾರಿ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜನದರ್ಶನ ವೇದಿಕೆ ಆಗ್ರಹ. ಮಾನ್ಯ ಸಂಸದ ಸಂಗಣ್ಣ ಕರಡಿಯವರೇ ನೋಡಬನ್ನಿ ನಿಮ್ಮ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಯರಗೇರಾದಿಂದ ಗೋರಬಿಹಾಳ ಗ್ರಾಮದ ರಸ್ತೆಯ ವರಗೆ ಪ್ರಧಾನಮಂತ್ರಿ ಗ್ರಾಮ ಸಡಕ ಯೋಜನೆಯ 429.27 ಲಕ್ಷದ ಡಾಂಬರಿಕರಣ ರಸ್ತೆ ಸಂಪೂರ್ಣ ಕಳೆಪೆಯಾಗಿದೆ ಸರಕಾರದ ರೊಕ್ಕ ಅಧಿಕಾರಿಗಳ ರೊಕ್ಕ ಅಲ್ಲ ಮತ್ತೆ ಗುತ್ತಿಗೆದಾರರ ರೊಕ್ಕವೇನು ಇದು ಸಾರ್ವಜನಿಕರ ಟ್ಯಾಕ್ಸ್ ಕಟ್ಟಿದ ರೊಕ್ಕ ಇದು ಯಾರ ಸ್ವತ್ತು ತಿಳಿಸಿ ಇಲ್ಲ ಮತ್ತೆ ಮರಳಿ ಕಾಮಗಾರಿ ಮಾಡಿಸಿ ಎಂದು ಜನದರ್ಶನ ವೇದಿಕೆ ರಾಜ್ಯಾಧ್ಯಕ್ಷ ದೇವಪ್ಪ ಮೇಣಸಗಿ ಹಾಗೂ ಕಾರ್ಯಕರ್ತರು ಆರೋಪಿಸಿದ್ದಾರೆ.

ಈ ಕಾಮಗಾರಿ ಮಾಡಿ ಇನ್ನು ಆರು ತಿಂಗಳು ಕೂಡ ಇನ್ನು ಗತಿಸಿಲ್ಲ ಈಗಾಗಲೇ ಕೈ ಹಿಡಿದು ಕಿತ್ತಿದ್ದರೆ ಕಿತ್ತು ಹೋಗುತ್ತಿದೆ ಇದು ಎಂತಹ ಕಾಮಗಾರಿ ಸಂಸದರೆ ತಿಳಿಸ ಬನ್ನಿ ಈ ಕಳಪೆ ಕಾಮಗಾರಿ ಬಗ್ಗೆ ಎಂದು ಜನದರ್ಶನ ವೇದಿಕೆ ಕಾರ್ಯಕ್ರಕರ್ತರು ಸಂಸದ ಸಂಗಣ್ಣ ಕರಡಿಯವರಿಗೆ ಮತ್ತು PWD ಜಿಲ್ಲಾಧಿಕಾರಿಗಳಿಗೆ ಪ್ರಶ್ನೆ ಮಾಡಿದ್ದಾರೆ.ಅಧಿಕಾರಿಗಳು ಮತ್ತು ಗುತ್ತಿಗೆದಾರರು ಮಾಡಿದ ಎಡವಟ್ಟಿನಿಂದ ಸಂಸದ ಸಂಗಣ್ಣ ಕರಡಿ ಮುಜುಗರ ಪಡುವಂತಾಗಿದೆ ಎನ್ನುತ್ತಾರೆ ಜನದರ್ಶನ ವೇದಿಕೆ ರಾಜ್ಯಾಧ್ಯಕ್ಷ ದೇವಪ್ಪ ಮೇಣಸಗಿ.

ಮಾನ್ಯ ಜಿಲ್ಲಾ ಲೋಕೋಪಯೋಗಿ ಅಧಿಕಾರಿಗಳೇ ಸಂಸದರೆ ಈ ಸಂಪೂರ್ಣವಾಗಿ ಕಳಪೆಯಾಗಿರುವ ಈ ಕಾಮಗಾರಿಯನ್ನು ಪುನ ಮಾಡದೇ ಹೋದರೆ ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಕೊಪ್ಪಳ ಜಿಲ್ಲಾ ಲೋಕೋಪಯೋಗಿ ಇಲಾಖೆ ಮುಂದೆ ಟೆಂಟ್ ಹಾಕಿ ಉಗ್ರ ಪ್ರತಿಭಟನೆ ನೆಡೆಸಲಾಗುವದು ಎಂದು ಆಗ್ರಹಿಸಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top