ಮೋದಿ, ಅಮಿತ್ ಶಾ, ನಡ್ಡಾ ನೆರವಿನಿಂದ ಪ್ರಜ್ವಲ್ ವಿದೇಶಕ್ಕೆ ಪಲಾಯನ: ಸುಪ್ರಿಯಾ ಶ್ರಿನೇಟ್

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ಪಲಾಯನವಾಗಲು ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸಹಾಯ ಮಾಡಿದ್ದಾರೆ ಎಂದು ಎಐಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥೆ ಸುಪ್ರಿಯಾ ಶ್ರೀನೇಟ್ ಅವರು ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ದೇಶದ ಮಹಿಳೆಯರ ಮೇಲೆ ಆಗಿರುವ ದರ‍್ಜನ್ಯದ ಕುರಿತು ಪ್ರಧಾನಿ ನರೇಂದ್ರ ಮೋದಿ ವಿರೋಧ ವ್ಯಕ್ತಪಡಿಸಿಲ್ಲ ಬದಲಾಗಿ ಅಂತಹವರ ನೆರವಿಗೆ ನಿಂತ ಉದಾಹರಣೆಗಳು ಹೆಚ್ಚಿವೆ. ಬಿಲ್ಕಿಸ್ ಬಾನು ಪ್ರಕಣದಲ್ಲಿ ಅಪರಾಧಿಗಳ ಬಿಡುಗಡೆ, ಅತ್ರಾಸ್, ಮಣಿಪುರದಲ್ಲಿ ಅತ್ಯಾಚಾರ ಪ್ರಕರಣದ ಬಗ್ಗೆ ತುಟಿ ಬಿಚ್ಚಲಿಲ್ಲ. ಇದೀಗ ಹಾಸನದ ಸಂಸದ ಪ್ರಜ್ವಲ ರೇವಣ್ಣನ ಬಹುದ ದೊಡ್ಡ ಅತ್ಯಾಚಾರದ ಪ್ರಕರಣದ ಬಗ್ಗೆ ಮಾತನಾಡುತ್ತಿಲ್ಲ. ಬದಲಾಗಿ ಇವನ ರಾಕ್ಷಸಿ ಕೃತ್ಯ ಗೊತ್ತಿದ್ದರೂ ಸಾವಿರಾರು ಕಿ.ಮೀ ದೂರದಿಂದ ಬಂದು ಅವನ ಪರವಾಗಿ ಮತಯಾಚನೆ ಮಾಡಿರುವುದು ನರ‍್ಲಜ್ಜತನ ಎಂದು ತೀವ್ರವಾಗಿ ಟೀಕಿಸಿದರು.

ಪ್ರಜ್ವಲ್ ನೂರಾರು ಮಹಿಳೆಯರ ಮೇಲೆ ಲೈಂಗಿಕ ದರ‍್ಜನ್ಯ ಎಸಗಿದ್ದಾರೆಂದು ತಿಳಿದಿದ್ದರೂ ಬಿಜೆಪಿ ಹೈಕಮಾಂಡ್ ಅವರನ್ನು ಬೆಂಬಲಿಸಿದೆ. ವಿಪಕ್ಷಗಳ ನಾಯಕರಿಗೆ ಇತರೆ ಪ್ರಕರಮಗಳಲ್ಲಿ ನೋಟಿಸ್ ಜಾರಿ ಮಾಡುವ ರಾಷ್ಟ್ರೀಯ ಮಹಿಳಾ ಆಯೋಗ ಇದೀಗ ಧರ‍್ಯವಿದ್ದರೆ ಈ ಮೂವರು ನಾಯಕರಿಗೆ ನೋಟಿಸ್ ಜಾರಿ ಮಾಡಲಿ ಎಂದು ಸವಾಲು ಹಾಕಿದರು.

ಪ್ರಕರಣ ಸಂಬಂಧ ರಾಜ್ಯ ರ‍್ಕಾರ ಎಸ್ಐಟಿ ರಚನೆ ಮಾಡುತ್ತಿರುವುದಾಗಲೇ ಆರೋಪಿ ವಿದೇಶಕ್ಕೆ ಪಲಾಯನವಾಗಿದ್ದಾನೆ. ಪ್ರಿಯಾಂಕಾ ಗಾಂಧಿ ತಮ್ಮ ಮಗಳನ್ನು ಯಾವಾಗ ನೋಡಲು ಹೋಗುತ್ತಾರೆ ಎಂಬುದು ಗೃಹ ಸಚಿವ ಅಮಿತ್ ಶಾ ಅವರಿಗೆ ತಿಳಿದಿರುತ್ತದೆ. ಆದರೆ ಇಂತಹ ಆರೋಪಿ ತಪ್ಪಿಸಿಕೊಳ್ಳುತ್ತಿರುವುದು ಅವರಿಗೆ ತಿಳಿದಿರುವುದಿಲ್ಲವೇ? ಬಿಜೆಪಿ ನಾಯಕ ದೇವರಾಜೇಗೌಡ ಅವರು ೨೦೨೩ರ ಡಿಸೆಂಬರ್‌ನಲ್ಲಿ ಮೋದಿ, ಜೆಪಿ ನಡ್ಡಾ ಮತ್ತು ಅಮಿತ್ ಶಾ ಅವರಿಗೆ ಇಮೇಲ್ ಕಳುಹಿಸಿದ್ದರಿಂದ ಪ್ರಜ್ವಲ್ ಮಾಡಿದ ದುಷ್ಕೃತ್ಯಗಳ ಬಗ್ಗೆ ಪ್ರಧಾನಿ ಮೋದಿಯವರಿಗೆ ಮೊದಲೇ ತಿಳಿದಿತ್ತು. ಇದೆಲ್ಲ ಗೊತ್ತಿದ್ದರೂ ಮೈಸೂರಿನ ಸರ‍್ವಜನಿಕ ಸಭೆಯಲ್ಲಿ ಮೋದಿ ಪ್ರಜ್ವಲ್ ಅವರ ಕೈ ಹಿಡಿದಿದ್ದರು. ದೊಡ್ಡ ಮಟ್ಟದಲ್ಲಿ ಅಪರಾಧ ಕೃತ್ಯ ಎಸಗಿರುವ ಪ್ರಜ್ವಲ್ ರೇವಣ್ಣ ‘ಮೋದಿ ಪರಿವಾರ’ ಎಂದು ಹೇಳಿದ್ದರು.

ಸಾವಿರಾರು ಮಹಿಳೆಯರ ಮೇಲೆ ದರ‍್ಜನ್ಯ ಎಸಗುತ್ತಿರುವುದನ್ನು ಸ್ವತಃ ವಿಡಿಯೋ ಮಾಡಿರುವುದನ್ನು ನೋಡಿದರೆ ಆಘಾತವಾಗುತ್ತದೆ. ಇದು ಲೈಂಗಿಕ ಹಗರಣವಲ್ಲ. ದೇಶದ ಅತಿದೊಡ್ಡ ಅತ್ಯಾಚಾರ ಪ್ರಕರಣವಾಗಿದೆ ಎಂದು ತಿಳಿಸಿದರು.

 

ಇದೇ ವೇಳೆ ಪ್ರಜ್ವಲ್ ಅವರ ಚಾಲಕ ಕಾಂಗ್ರೆಸ್ ನಾಯಕರೊಂದಿಗೆ ಅಶ್ಲೀಲ ವೀಡಿಯೊ ಇರುವ ಪೆನ್ ಡ್ರೈವ್ ಅನ್ನು ಹಂಚಿಕೊಂಡಿದ್ದಾರೆ ಎಂಬ ಆರೋಪವನ್ನು ತಿರಸ್ಕರಿಸಿದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top