ಬಳ್ಳಾರಿ: ಬಳ್ಳಾರಿ ನಗರದ ಕೌಲ್ ಬಜಾರ್ ಪ್ರದೇಶದಲ್ಲಿ ಮಾರು ವೇಷದಲ್ಲಿ ಪ್ರಂಬರ್ ಕೆಲಸ ಮಾಡುತ್ತಿದ್ದ ನಿಷೇಧಿತ ಪಿಎಫ್ ಐ ಸಂಘಟನೆಯ ಮಾಸ್ಟರ್ ಮೈಂಡ್, ವೆಪನ್ ಟ್ರೈನರ್ 33 ವರ್ಷದ ಮೊಹಮ್ಮದ್ ಯೂನಸ್ ಎಂಬಾತನನ್ನು ಎನ್‍ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಬುಧವಾರದಂದು ನಡೆದ NIA ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಪ್ಲಂಬರ್ ಹಾಗೂ ದಿನ ಕೂಲಿ ಕಾರ್ಮಿಕನಂತೆ ಕೆಲಸ ಮಾಡುತ್ತಿದ್ದ PFI ಮಾಸ್ಟರ್ ಮೈಂಡ್, ವಿದ್ವಂಸಕ ಕೃತ್ಯಕ್ಕೆ ಟ್ರೈನಿಂಗ್ ಕೊಡ್ತಿದ್ದ ಎಂದು ತಿಳಿದು ಬಂದಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ NIA, 33 ವರ್ಷದ ಮೊಹಮ್ಮದ್ ಯೂನಸ್ ಮೂಲತಃ ಆಂದ್ರದವನಾಗಿದ್ದು, ಯೂನಸ್ ತಲೆ ಮರೆಸಿಕೊಂಡು ಕೆಲವು ದಿನಗಳಿಂದ ಪತ್ನಿ ಹಾಗೂ ಇಬ್ಬರು ಮಕ್ಕಳ ಸಮೇತ ಬಳ್ಳಾರಿಯ ಕೌಲ್ ಬಜಾರ್ ಪ್ರದೇಶದಲ್ಲಿ ಬಂದು ವಾಸುತ್ತಿದ್ದನು.
ಪಿಎಫ್‍ಐ ಉಗ್ರನು ವಾಸಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಳೆದ ಹಲವು ದಿನಗಳಿಂದ ಬಳ್ಳಾರಿಯ ಮೇಲೆ ನಿಗಾ ಇರಿಸಿದ್ದ NIA ಅಧಿಕಾರಿಗಳು ಕೊನೆಗೆ ಉಗ್ರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಆಡಳಿತದ ಅವಧಿಯಲ್ಲಿ PFI ಸಂಘಟನೆಯನ್ನು ಬ್ಯಾನ್ ಮಾಡಲಾಗಿತ್ತು. ದೇಶ ದ್ರೋಹದ ಕಾರ್ಯ ಚಟುವಟಿಯಲ್ಲಿ ಭಾಗಿಯಾಗಿರುವ ಹಲವಾರು ಪ್ರಮುಖ ಅಂಶಗಳನ್ನು ಗಮನಿಸಿ ಬ್ಯಾನ್ ಮಾಡಲಾಗಿತ್ತು ಎಂದು ಅಂದಿನ ಬಿಜೆಪಿ ಸರ್ಕಾರ ಘೋಷಿಸಿಕೊಂಡಿತ್ತು ಎನ್ನುವುದನ್ನು ಸ್ಮರಿಸಬಹುದು.