18 ವರ್ಷದ ತರುಣ್ ಬಾಲಚಂದ್ರ ಅವರ ಅಂಗಾಂಗ ದಾನ ಮಾಡಿದ ಪಾಲಕರು

18 ವರ್ಷದ ಪುತ್ರ ತರುಣ್ ಬಾಲಚಂದ್ರ ಅವರ ಅಂಗಾಂಗ ದಾನ ಮಾಡಲು ದಿಟ್ಟ ನಿರ್ಧಾರ ಕೈಗೊಂಡ ಪಾಲಕರು

ಅಂಗಾಂಗ ದಾನದ ಬಗ್ಗೆ ಮೂಡಿದ ಭರವಸೆ

ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಪುರದಮಾತ ಗ್ರಾಮದ   18 ವರ್ಷದ ತರುಣ್ ಬಾಲಚಂದ್ರ ದುರಂತ ಅಂತ್ಯ ಕಾಣುವಂತಾಗಿದೆ. ಬೆಂಗಳೂರಿನಲ್ಲಿ ನಿರ್ಮಾಣ ಹಂತದ ನಿವೇಶನದಲ್ಲಿ ದುರದೃಷ್ಟಕರ ಘಟನೆ ಸಂಭವಿಸಿದೆ. ತರುಣ್ ಹೋಟೆಲ್ ನಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ನಿರ್ಮಾಣ ಹಂತದ ಕಟ್ಟಡದಲ್ಲಿ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಆಯತಪ್ಪಿ ಬಿದ್ದು ತಲೆಗೆ ಗಂಭೀರ ಪೆಟ್ಟು ಬಿತ್ತು.

 

ತರುಣ್ ಅವರನ್ನು ತಕ್ಷಣವೇ ಸ್ಥಳೀಯ ನಸಿರ್ಂಗ್ ಹೋಂಗೆ ದಾಖಲಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಕೆಂಗೇರಿಯ ಗ್ಲೆನಿಗಲ್ಸ್ ಆಸ್ಪತ್ರೆಗೆ ಕರೆ ತರಲಾಯಿತು. ತರುಣ್ ಅವರ ಜೀವ ಉಳಿಸಲು ಗ್ಲೆನಿಗಲ್ಸ್ ಅಸ್ಪತ್ರೆಯ ಪರಿಣಿತರ ವೈದ್ಯರ ತಂಡ ಶಸ್ತ್ರ ಚಿಕಿತ್ಸೆ ನಡೆಸಿತು. ದುರದೃಷ್ಟಕರವೆಂದರೆ ತರುಣ್ ಅವರ ಮೆದುಳು ನಿಷ್ಕ್ರೀಯವಾಯಿತು. ವೈದ್ಯಕೀಯ ತಂಡದ ಪ್ರಯತ್ನ ವಿಫಲವಾಯಿತು. ತಂದೆ ಬಾಲಚಂದ್ರ ಮತ್ತು ತಾಯಿ ಲತಾ ಹೃದಯ ವಿದ್ರಾವಕ ಪರಿಸ್ಥಿತಿಗೆ ಸಿಲುಕಿದರು.

ಇಂತಹ ಅಸಹನೀಯ ಪರಿಸ್ಥಿತಿಯಲ್ಲೂ ಬಾಲಚಂದ್ರ ಮತ್ತು ಲತಾ ಅವರು ಮಗನ ಎರಡು ಮೂತ್ರಪಿಂಡ, ಒಂದು ಯಕೃತ್ ಮತ್ತು ಹೃದಯವನ್ನು ದಾನ ಮಾಡಲು ಮುಂದಾದರು. ಮೂತ್ರಪಿಂಡವನ್ನು 39 ಮತ್ತು 33 ವರ್ಷದ ಪುರುಷ ರೋಗಿಗಳಿಗೆ ಕಸಿ ಮಾಡಲಾಯಿತು. ಯಕೃತ್ ಅನ್ನು 35 ವರ್ಷದ ಪುರುಷ ಮತ್ತು ಹೃದಯವನ್ನು 49 ವರ್ಷದ ಪುರುಷ ರೋಗಿಗೆ ಯಶಸ್ವಿಯಾಗಿ ಕಸಿ ಮಾಡಲಾಯಿತು.

ತರುಣ್ ಅವರ ತಂದೆ ಚಾಲಚಂದ್ರ ಮಾತನಾಡಿ, “ತರುಣ್ ನಮ್ಮ ಶಕ್ತಿಯ ಮೂಲವಾಗಿದ್ದ. ಅವನ ಹಠಾತ್ ನಿರ್ಗಮನ ನಮ್ಮ ಜೀವನದಲ್ಲಿ ಭರಿಸಲಾಗದ ಶೂನ್ಯ ಆವರಿಸುವಂತಾಗಿದೆ. ಮತ್ತೊಬ್ಬರಲ್ಲಿ ಮಗ ಜೀವಂತವಾಗಿರಲಿ ಎಂಬ ಕಾರಣದಿಂದ ಅಂಗಾಂಗ ದಾನ ಮಾಡಲು ತೀರ್ಮಾನಿಸಲಾಯಿತು” ಎಂದರು. ತಂದೆ ರೈತ, ತಾಯಿ ಗೃಹಿಣಿ. ತಂಗಿಯನ್ನು ತೊರೆದಿರುವ ಹಿರಿಯ ಪುತ್ರನ ಅಗಲಿಕೆಯ ದುಃಖವನ್ನು ಹೀಗೆ  ಸಕಾರಾತ್ಮಕ ಕೆಲಸದ ಮೂಲಕ ವ್ಯಕ್ತಪಡಿಸಿದರು.

ಆಸ್ಪತ್ರೆಯ ಮುಖ್ಯ ಆಪ್ತ ಸಮಾಲೋಚಕರು ಮತ್ತು ಹಿರಿಯ ಕಸಿ ವಿಭಾಗದ ಸಮನ್ವಯಕಾರರಾದ ಸರಳಾ ಅನಂತರಾಜ್ ಮಾತನಾಡಿ, “ಈ ಸಂಕಷ್ಟದ ಸಮಯದಲ್ಲಿ ನಮ್ಮ ಸಂತಾಪಗಳು ಬಾಲಚಂದ್ರರ ಕುಟುಂಬದೊಂದಿಗೆ ಇವೆ. ತರುಣ್ ಅವರ ದುರಂತ ಘಟನೆಯು ಜೀವನದ ದುರ್ಬಲತೆಯನ್ನು ಎತ್ತಿ ತೋರಿಸುತ್ತದೆ. ಅವರ ಅಂಗಾಂಗಳನ್ನು ದಾನ ಮಾಡುವ ಕುಟುಂಬದ ಧೈರ್ಯದ ನಿರ್ಧಾರ, ಆಳವಾದ ಸಹಾನುಭೂತಿಯ ಕಾರ್ಯವಾಗಿದೆ, ದುರಂತದ ನಡುವೆಯೂ ನಿರಂತರ ಮಾನವೀಯತೆಯ ಮನೋಭಾವವನ್ನು ಇದು ಸಾಕಾರಗೊಳಿಸುತ್ತದೆ. ನಾವು ಅವರೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ.” ಎಂದರು.

ತರುಣ್ ಬೆಂಗಳೂರಿನಲ್ಲಿ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದು, ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಎರಡನೇ  ಮಹಡಿಯಿಂದ ಆಯತಪಿ ಬಿದ್ದು ಗಾಯಗೊಂಡಿದ್ದರು. ತರುಣ್ ಪಾಲಕರು ಕೈಗೊಂಡ ದಿಟ್ಟ ಮತ್ತು ದಯೆಯ ತೀರ್ಮಾನ ಮಾದರಿ ಮತ್ತು ಹೃದಯಸ್ಪರ್ಶಿಯಾಗಿದೆ.

 

ಮುಖ್ಯ ಆಪ್ತ ಸಮಾಲೋಚಕರಾದ ಸರಳಾ ಅವರು ಮುಂದುವರೆದು ಮಾತನಾಡಿ, ಅಂಗಾಂಗಗಳನ್ನು ದಾನ ಮಾಡಲು ಬಾಲಚಂದ್ರ ಕುಟುಂಬದ ಆಯ್ಕೆಯು ನಮ್ಮ ಸಮುದಾಯದಲ್ಲಿ ಅಂಗಾಂಗ ದಾನದ ನಿರ್ಣಾಯಕ ಅಗತ್ಯವನ್ನು ಎತ್ತಿ ತೋರಿಸುತ್ತದೆ. “ಅಂಗಾಂಗ ಕಸಿಗಾಗಿ ಅಪಾರ ಬೇಡಿಕೆ ಇದೆ. ಬಾಲಚಂದ್ರ ಕುಟುಂಬದ ನಿಸ್ವಾರ್ಥ ಕಾರ್ಯ ಮತ್ತು ಕಟುವಾದ ಕೆಲಸಕ್ಕೆ ಉದಾಹರಣೆಯಾಗಿದೆ, ಒಂದು ಕುಟುಂಬದ ನಿರ್ಧಾರ ಅಗತ್ಯವಿರುವವರ ಜೀವನದ ಮೇಲೆ ಹೇಗೆ ಮಹತ್ವದ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಇದು ವಿವರಿಸುತ್ತದೆ.” ಎಂದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top