ಮಾಸ್ಕ್ ವಿತರಿಸಿ, ಸುರಕ್ಷತೆ ಬಗ್ಗೆ ಎಚ್ಚರಿಕೆ ವಹಿಸುವಂತೆ ಕಿವಿ ಮಾತು ಹೇಳಿದ ಎಂ.ಎಸ್. ರಕ್ಷಾ ರಾಮಯ್ಯ

ದೊಡ್ಡಬಳ್ಳಾಪುರದ ಹಾರಹಳ್ಳಿ, ಗುಡಿಹಳ್ಳಿ ಓಂ ಶಕ್ತಿ ಮಾಲಾಧಾರಿಗಳಿಗೆ ಎಂ.ಎಸ್.ರಾಮಯ್ಯ ಯೂತ್ ಫೌಂಡೇಶನ್ ನಿಂದ 15 ಕ್ಕೂ ಹೆಚ್ಚು ಬಸ್ ಸೌಲಭ್ಯ

ದೊಡ್ಡಬಳ್ಳಾಪುರ :  ದೊಡ್ಡಬಳ್ಳಾಪುರ ತಾಲ್ಲೂಕಿನ ಹಾರಹಳ್ಳಿ, ಗುಡಿಹಳ್ಳಿ ಗ್ರಾಮದ ಶ್ರೀ ಓಂ ಶಕ್ತಿ ದೇವಿಯ ಮಾಲಾಧಾರಿ ಯಾತ್ರಿಗಳಿಗೆ ಎಂ.ಎಸ್.ರಾಮಯ್ಯ ಯೂತ್ ಫೌಂಡೇಶನ್ ನಿಂದ ಉಚಿತ ಬಸ್ ಸೇವೆ ಕಲ್ಪಿಸಲಾಗಿದೆ.

ಯಾತ್ರಾರ್ಥಿಗಳಿಗೆ 15 ಕ್ಕೂ ಹೆಚ್ಚು ಬಸ್ ಗಳ ವ್ಯವಸ್ಥೆ ಮಾಡಿದ್ದು, 700 ಕ್ಕೂ ಹೆಚ್ಚು ಭಕ್ತಾಧಿಗಳು ಯಾತ್ರೆಗೆ ತೆರಳಿದರು.

 

ಎಂ.ಎಸ್.ರಾಮಯ್ಯ ಯೂತ್ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಭಕ್ತರಿಗೆ ಮಾಸ್ಕ್ ವಿತರಿಸಿದರು. ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಸುರಕ್ಷತೆಗೆ ಆದ್ಯತೆ ನೀಡಬೇಕು. ದೈಹಿಕ ಅಂತರ ಕಾಯ್ದುಕೊಂಡು ಯಶಸ್ವಿಯಾಗಿ ದೇವಿಯ ದರ್ಶನ ಪಡೆಯುವಂತೆ ಕಿವಿ ಮಾತು ಹೇಳಿದರು.

 

 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಎಸ್. ರಕ್ಷಾ ರಾಮಯ್ಯ, ಶ್ರೀ ಓಂ ಶಕ್ತಿ ತಾಯಿ ನೆಲೆಸಿರುವ ಜಾಗದಲ್ಲಿ ಪುರುಷ ಹಾಗೂ ಮಹಿಳಾ ಸಿದ್ಧರು ಜೀವಂತ ಸಮಾಧಿಯಾಗಿರುವ ಪ್ರತೀತಿ ಇದೆ. ಮಹಿಳಾ ಸಿದ್ಧೆಯೊಬ್ಬರು ಇಲ್ಲಿ ಶಾಶ್ವತವಾಗಿ ನೆಲೆಸಿ ಭಕ್ತರನ್ನು ಶತಮಾನಗಳಿಂದ ನೆಲೆನಿಂತು ಪೊರೆಯುತ್ತಿರುವ ನಂಬಿಕೆ ಇದೆ. ಕರ್ನಾಟಕದಿಂದ ಅಸಂಖ್ಯಾತ ಭಕ್ತ ಸಮೂಹಕ ಪ್ರತಿ ವರ್ಷ ಡಿಸೆಂಬರ್‌ನಿಂದ ಫೆಬ್ರವರಿವರೆಗೆ ಯಾತ್ರೆ ಕೈಗೊಳ್ಳುತ್ತಾರೆ ಎಂದರು.

ವಯಸ್ಸಿನ ಭೇದ ಭಾವವಿಲ್ಲದೇ ಎಲ್ಲರೂ ಮಾಲೆ ಧರಿಸುತ್ತಿದ್ದು, ಇದರಲ್ಲಿ ಮಹಿಳೆಯರ ಸಂಖ್ಯೆಯೇ ಅಧಿಕ. ಮಹಿಳೆಯರೇ ಇಲ್ಲಿ ಅರ್ಚಕರು. ಇದು ಅತ್ಯಂತ ಪ್ರಮುಖ ಶಕ್ತಿಪೀಠವಾಗಿದ್ದು, ಎಂ.ಎಸ್.ರಾಮಯ್ಯ ಯೂತ್ ಫೌಂಡೇಶನ್ ನಿಂದ ಈ ವರ್ಷವು ಸಹ ಧಾರ್ಮಿಕ ಸೇವೆ ಸಲ್ಲಿಸಲು ತಮಗೆ ಇದೊಂದು ಸದಾವಕಾಶ ದೊರೆತಿದೆ  ಎಂದು ಹೇಳಿದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top