ನಮ್ಮದು ಸಾಮಾಜಿಕ ಬದ್ಧತೆಯುಳ್ಳ ಸರ್ಕಾರ: ಮುಖ್ಯ ಮಂತ್ರಿ ಸಿದ್ದರಾಮಯ್ಯ

ಬೆಂಗಳೂರು : ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ  ದಲಿತ ಸಂಘಟನೆಗಳ ಮುಖಂಡರೊಂದಿಗೆ  2024- 25 ನೇ ಸಾಲಿನ ಆಯವ್ಯಯ ಪೂರ್ವಭಾವಿ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಕರ್ನಾಟಕದ ಲ್ಲಿ ಎಸ್.ಸಿ.ಎಸ್.ಪಿ/ ಟಿ. ಎಸ್.ಪಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ. 2008 ರಿಂದ 2013 ರವರೆಗೆ 22,000 ಕೋಟಿರೂ.ಗಳು ವೆಚ್ಚವಾಗಿದೆ  2013 ರಿಂದ 2018 ರವರೆ 88 ಸಾವಿರ ಕೋಟಿ ರೂ.ಗಳು  ವೆಚ್ಚವಾಗಿದೆ .

ಹೆಚ್ಚು ದುರುಪಯೋಗವಾಗುತ್ತದೆ ಎಂಬ ಕಾರಣದಿಂದ 7 ಡಿ ಯನ್ನು ತೆಗೆದುಹಾಕಿ ಆದೇಶವನ್ನು ಹೊರಡಿಸಿದೆ. ಯಾವುದೇ ಆರ್ಥಿಕ ವರ್ಷದಲ್ಲಿ ಹಣ ಖರ್ಚಾಗದಿದ್ದರೆ ಮುಂದಿನ ವರ್ಷಕ್ಕೆ ಮುಂದುವರೆಯುತ್ತದೆ. ಅಧಿಕಾರಿಗಳ ನಿರ್ಲಕ್ಷ್ಯ ದಿಂದ ದುರುಪಯೋಗವಾದರೆ ಕ್ರಿಮಿನಲ್ ಮೊಕದ್ದಮೆ ಹೂಡಬಹುದು. ಜನಸಂಖ್ಯೆಗೆ ಅನುಗುಣವಾಗಿ ಹಣವನ್ನು ಖರ್ಚು ಮಾಡಬೇಕು ಎಂದು ಆಂಧ್ರಪ್ರದೇಶ ಹಾಗೂ ಕರ್ನಾಟಕ ದಲ್ಲಿ ಕಾಯ್ದೆ ತರಲಾಗಿದೆ. ಇದು ಇಡೀ ದೇಶದಲ್ಲಿ ಆಗಬೇಕು. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಯಲ್ಲಿ ಪ್ರಮುಖ ಯೋಜನೆಯಾಗಬೇಕೆಂದು ಸೂಚಿಸಿದೆ ಎಂದರು. 

ಬಡ್ತಿಯಲ್ಲಿ  ಮೀಸಲಾತಿ ಕಾಯ್ದೆ ಮಾಡಿದ್ದು ಇಡೀ ದೇಶದಲ್ಲಿ ಕರ್ನಾಟಕ ಮಾತ್ರ. ಪಿ.ಟಿ. ಸಿ.ಎಲ್ ಕಾಯ್ದೆ ತಿದ್ದುಪಡಿ ಮಾಡಿದೆ. ಎಸ್.ಸಿ.ಎಸ್.ಟಿ ಜನಾಂಗದವರಿಗೆ ಗುತ್ತಿಗೆಯಲ್ಲಿ 1 ಕೋಟಿ ವರೆಗೆ ಮೀಸಲಾತಿ  ನೀಡಲಾಗಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬಲು ಈ ಕ್ರಮಗಳನ್ನು ಕೈಗೊಂಡಿದೆ ಎಂದರು.

7 % ಪರಿಶಿಷ್ಟ ವರ್ಗದವರಿದ್ದಾರೆ, 17.15% ಪರಿಶಿಷ್ಟ ಜಾತಿಯವರಿದ್ದಾರೆ. 21.1 % ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿ ಕೆಲಸದಲ್ಲಿ ಅನುದಾನ ನೀಡಿದೆ. ಬಿಜೆಪಿ ಸರ್ಕಾರದಲ್ಲಿ ಬಜೆಟ್ ಗಾತ್ರ ಹೆಚ್ಚಾದರೂ ಎಸ್.ಸಿ, ಎಸ್ ಪಿ / ಟಿಎಸ್ ಪಿ ಅನುದಾನ ಹೆಚ್ಚಾಗಿರಲಿಲ್ಲ. ಇದನ್ನು ಗುರುತಿಸಬೇಕು. ನಮ್ಮ ಸರ್ಕಾರ ಸಾಮಾಜಿಕ ಬದ್ಧತೆಯುಳ್ಳ ಸರ್ಕಾರ ಎಂದರು.

ಸಭೆಯಲ್ಲಿ ಹಿಂದುಳಿದ ವರ್ಗಗಳ  ಕಲ್ಯಾಣ  ಸಚಿವ  ನಾಗೇಂದ್ರ, ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹ್ಮದ್, ಮುಖ್ಯ ಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್,  ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ

 

ರಾಜೀವ್ ಗೌಡ  ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಅಮಿತ್ ಶಾ ಅವರು ಕರ್ನಾಟಕಕ್ಕೆ ಬರಿಗೈಯಲ್ಲಿ ಬಂದಿದ್ದಾರೆ

ಕೇಂದ್ರ ¸ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕಕ್ಕೆ ಬರಿಗೈಯಲ್ಲಿ ಬಂದಿದ್ದಾರೆ. ಬಡವರು, ರೈತರ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರೈತ ಸಂಘಟನೆ ಹಾಗೂ ಮುಖಂಡರುಗಳ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ  ಮಾತನಾಡಿದರು.

 ನೈತಿಕ ಹಕ್ಕಿಲ್ಲ

 

ಇಂದಿನವರೆಗೆ ಬರಗಾಲದ ಬಗ್ಗೆ ಐದು ತಿಂಗಳಾದರೂ ಒಂದು ಸಭೆಯನ್ನೂ ಅಮಿತ್ ಶಾ ಕರೆದಿಲ್ಲ. ಬರಪರಿಹಾರ ಕೊಡಲು ಇರುವ ಸಮಿತಿಗೆ ಅವರೇ ಅಧ್ಯಕ್ಷರು.  ದೇಶದ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕತೆ ಇದೆ. ರೈತರು ಬರಗಾಲದಲ್ಲಿ ಕಷ್ಟಪಡುತ್ತಿದ್ದಾರೆ. ಬರಗಾಲ ಬಂದಾಗ ಎಂ.ಎನ್. ನರೇಗಾ ಯೋಜನೆಯಡಿ  150 ಮಾನವದಿನಗಳನ್ನು ಹೆಚ್ಚಿಸುವುದು ಕಡ್ಡಾಯವಾದರೂ ಇಂದಿನವರೆಗೆ ಹೆಚ್ಚಿಸಿಲ್ಲ. ಆದರೆ ಕೇಂದ್ರ ಸರ್ಕಾರದವರು ಅನುಮತಿ ನೀಡದೇ,  2-3 ಪತ್ರ ಬರೆದಿದ್ದರೂ  ಉತ್ತರ ನೀಡಿಲ್ಲ ಎಂದರು. 

ಅನ್ಯಾಯವನ್ನೆಲ್ಲಾ ಸರಿ ಎಂದು ಹೇಳಬಾರದು

ನಿರ್ಮಲಾ ಸೀತಾರಾಮನ್  ಅವರು ತಕ್ಕ ಉತ್ತರ ನೀಡಿದ್ದಾರೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಸಂಸತ್ತಿನಲ್ಲಿ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಈಗ ಅವರು ಅವರ ಜೊತೆ ಸೇರಿದ್ದಾರೆ. ಇದೇ ದೇವೆಗೌಡರು ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಬೇಕು  ಎಂದಿದ್ದ ದೇವೇಗೌಡರು ಈಗೇನು ಹೆಳುತ್ತಿದ್ದಾರೆ.  ಅವರು  ಯಜಮಾನರು,  ಮಾಜಿ ಪ್ರಧಾನಿಗಳಾಗಿದ್ದವರು ಹೀಗೆ ಹೇಳಬಾರದು. ಬಿಜೆಪಿಯೊಂದಿಗೆ  ಮೈತ್ರಿ ಮಾಡಿಕೊಂಡಿದ್ದಾರೆ  ಎಂಬ ಕಾರಣಕ್ಕೆ ಅವರು ಮಾಡಿದ ಅನ್ಯಾಯವನ್ನೆಲ್ಲಾ ಸರಿ ಎಂದು ಹೇಳಬಾರದು ಎಂದರು.

 

ಚಾಮರಾಜನಗರ, ಮೈಸೂರು ಕ್ಷೇತ್ರ ಎರಡನ್ನೂ ಗೆಲ್ಲಲಿದೆ. ಚುನಾವಣೆ ರಣಕಹಳೆ ಮೈಸೂರಿನಿಂದಲೇ ಅಮಿತ್ ಶಾ ಮೊಳಗಿಸುತ್ತಿರುವ ಬಗ್ಗೆ  ಮಾತನಾಡಿ ಚಾಮರಾಜನಗರ, ಮೈಸೂರು ಕ್ಷೇತ್ರ ಎರಡನ್ನೂ ಕಾಂಗ್ರೆಸ್ ಗೆಲ್ಲಲಿದೆ ಎಂದು ಹೇಳಿದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top