ಅವಕಾಶ ವಂಚಿತರನ್ನು ಮುಖ್ಯ ವಾಹಿನಿಗೆ ತರುವುದು ನಮ್ಮ ಮುಖ್ಯ ಗುರಿ

ಉಡುಪಿ : ಧ್ವನಿ ಇಲ್ಲದವರಿಗೆ, ಅವಕಾಶ ವಂಚಿತರನ್ನು ಮುಖ್ಯ ವಾಹಿನಿಗೆ ತರುವುದು ನಮ್ಮ ಮುಖ್ಯ ಗುರಿ. ಸ್ವಾಭಿಮಾನದ ಬದುಕು ಬದುಕಲು ಎಲ್ಲರಿಗೂ ಹಕ್ಕಿದೆ ಎನ್ನುವುದನ್ನು ಭಾ.ಜ.ಪ ನಮಗೆ ಸ್ಪಷ್ಟವಾಗಿ ಹೇಳಿಕೊಟ್ಟಿದೆ. ಅದನ್ನೇ ನಮ್ಮ ಕಾರ್ಯಕ್ರಮದಲ್ಲಿ ಅಳವಡಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಸೋಮವಾರ ಸಂಜೆ ಉಡುಪಿಯ ಭಾರತೀಯ ಜನತಾ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜ್ಯೋತಿಬಾ ಫುಲೆಯವರ ಜನ್ಮದಿನಾಚಾರಣೆ ಹಾಗೂ ವಿವಿಧ ಸಮುದಾಯಗಳ ಮುಖಂಡರ ಜತೆಗಿನ ಸಂವಾದ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಹಿಂದುಳಿದ ವರ್ಗಗಳಿಗೆ ಕಾಯಕಲ್ಪ :
ಭಾರತ ದೇಶದಲ್ಲಿ ಸಮಾನತೆ ತರಲು ವಿವಿಧ ಯೋಜನೆಗಳನ್ನು ರೂಪಿಸಿದ್ದಾರೆ. ಹಲವಾರು ವರ್ಷಗಳಿಂದ ಹಿಂದುಳಿದ ವರ್ಗಗಳಿಂದ ಇದಕ್ಕೆ ಕಾಯಕಲ್ಪ ಕೊಟ್ಟಿಲ್ಲ. ಹಿಂದುಳಿದ ವರ್ಗಗಳ ನಿಗಮಗಳಲ್ಲಿ ನೂರಾರು ಕೋಟಿ ರೂ.ಗಳಿವೆ. ಅವುಗಳನ್ನು ಸಮರ್ಪಕವಾಗಿ ನಿರ್ವಹಿಸಲು ಅವಕಾಶವಿರಲಿಲ್ಲ. ಎಲ್ಲರಿಗೂ ಯೋಜನೆಗಳನ್ನು ತಲುಪಿಸಲು ಕ್ರಮ ವಹಿಸಲಾಗಿದೆ. ಗಂಗಾ ಕಲ್ಯಾಣ ಯೋಜನೆಯಡಿ ಎಲ್ಲಾ ವರ್ಗದ ಜನರಿಗೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಪೂರಕ ಬಜೆಟ್ ನಲ್ಲಿ 200 ಕೋಟಿ ರೂ.ಗಳನ್ನು ಒದಗಿಸಲಾಗಿದೆ. 208 ಸಮುದಾಯಗಳಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ಕ್ರಮ ವಹಿಸಿದೆ. 112 ಕೋಟಿ ರೂ.ಗಳನ್ನು ಸಾಮಾಜಿಕ ಕೆಲಸ.ಮಾಡುತ್ತಿರುವ ವಿವಿಧ ಹಿಂದುಳಿದ ವರ್ಗಗಳ ಮಠಗಳಿಗೆ ಒದಗಿಸಲಾಗಿದೆ. . ಬರುವ ದಿನಗಳಲ್ಲಿ ದೊಡ್ಡ ಪ್ರಮಾಣದ ಅಭಿವೃದ್ಧಿಯನ್ನು ಹಲವಾರು ಸಣ್ಣಪುಟ್ಟ ಸಮುದಾಯಗಳಿಗೆ ಹಣ ಒದಗಿಸುವ ಯೋಜನೆಗಳನ್ನು ರೂಪಿಸಿ ಎಲ್ಲರನ್ನು ಸಮನಾಗಿ ಕಾಣುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಹಿಂದುಳಿದವರಿಗೆ ವಿದ್ಯಾರ್ಥಿನಿಲಯ
ಮಂಗಳೂರು, ಮೈಸೂರು, ಬೆಂಗಳೂರು,ಹುಬ್ಬಳ್ಳಿ, ಧಾರವಾಡ, ಕಲಬುರಗಿ ಜಿಲ್ಲೆಗಳಿಂದ ವಿದ್ಯಾರ್ಥಿ ಗಳಿಗೆ ವಿದ್ಯಾರ್ಥಿನಿಲಯಗಳ ಕೊರತೆ ಇದೆ. ಈ ಬಾರಿ ದೀನ್ ದಯಾಳ್ ಉಪಾಧ್ಯಾಯ ಅವರ ಹೆಸರಿನಲ್ಲಿ 1000 ವಿದ್ಯಾರ್ಥಿಗಳಿಗೆ ಒಂದು ವಸತಿ ನಿಲಯ ಸ್ಥಾಪನೆಗೆ ಅನುದಾನ ನೀಡಲಾಗಿದೆ.ಎಲ್ಲಾ ಜಿಲ್ಲೆಗಳಿಗೆ ಇದನ್ನು ವಿಸ್ತರಿಸಲಾಗುವುದು. ಶಿಕ್ಷಣ, ಉದ್ಯೋಗ, ಸಬಲೀಕರಣ ದ ತಳಹದಿಯ ಮೇಲೆ ನಮ್ಮ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಕರಾವಳಿ ಪ್ರದೇಶದ ಸಾಮಾಜಿಕ ಸ್ಥಿತಿಗತಿ ಬಗ್ಗೆ ತಿಳಿದಿದೆ. ಕಾಯಕಾಧಾರಿತ ಸಮುದಾಯಗಳಿವೆ. ವಿದ್ಯೆ, ಉದ್ಯೋಗದಲ್ಲಿ ಅವರು ತೊಡಗಿಕೊಂಡು ಅವಕಾಶಗಳನ್ನು ನೀಡಲು ಸಂಪೂರ್ಣ ಬೆಂಬಲ ನೀಡಲಾಗುತ್ತಿದೆ. ರಾಜ್ಯದ ತಲಾವಾರು ಆದಾಯವನ್ನು ಹೆಚ್ಚಿಸಲು ಎಲ್ಲಾ ವರ್ಗದವರನ್ನು ತೊಡಗಿಸಿಕೊಳ್ಳಬೇಕು. ಆರ್ಥಿಕತೆಯನ್ನು ಜನರ ಶ್ರಮದಿಂದ ಅಳೆಯಬೇಕು. ಜನರನ್ನು ನೋಡಿಕೊಂಡರೆ ಅವರೂ ಮೇಲೆ ಬಂದು ರಾಜ್ಯದ ಆದಾಯ ಹೆಚ್ಚುತ್ತದೆ. ದುಡಿಮೆಯೇ ದೊಡ್ಡಪ್ಪ ಎನ್ನುವ ನೀತಿಯಿಂದ ಕೆಲಸ ಮಾಡುತ್ತಿದ್ದೇವೆ. ಕರಾವಳಿ ಭಾಗದಲ್ಲಿ ಜನರು ಭಾ.ಜ.ಪ ಜೊತೆಗೆ ಗಟ್ಟಿಯಾಗಿ ನಿಂತಿದೆ ಎಂದರು.

ಸಮಾಜ ಪರಿವರ್ತನೆಗಾಗಿ ದುಡಿದವರನ್ನು ಭಾ.ಜ.ಪ ಗುರುತಿಸುತ್ತದೆ
ಜ್ಯೋತಿ ಬಾ ಫುಲೆಯವರ ಜನ್ಮದಿನಾಚಾರಣೆ ಯನ್ನು ಭಾ.ಜ.ಪ ವತಿಯಿಂದ ಆಚರಿಸಲಾಗುತ್ತಿದೆ. ಭಾ.ಜ. ಯಾವಾಗಲೂ ಸಮಾಜದ ಏಳಿಗೆಗಾಗಿ , ಸಮಾಜ ಪರಿವರ್ತನೆಗಾಗಿ ದುಡಿದವರನ್ನು ಗುರುತಿಸುತ್ತದೆ. ಇದುವರೆಗೂ. ಜ್ಯೋತಿ ಬಾ ಫುಲೆಯವರ ಹೆಸರನ್ನು ಬಹಳ ಸಂಘಟನೆಗಳು ಹೇಳುತ್ತವೆ. ಆದರೆ ಅವರ ಆದರ್ಶಗಳನ್ನು ಎಲ್ಲಿಯೂ ಪರಿಪಾಲನೆ ಮಾಡುವುದಿಲ್ಲ. ತ್ಯಾಗಮಯ ಜೀವಿ, ರಾಜಸತ್ವವನ್ನು ಬಿಟ್ಟು ಸಮಾಜದಲ್ಲಿ ನಿಜವಾಗಿಯೂ ಪರಿವರ್ತನೆ ಮಾಡಬೇಕು. ವಿಶೇಷವಾಗಿ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ, ಅಸ್ಪೃಶ್ಯತೆ ವಿರುದ್ಧ ಅತ್ಯಂತ ಯಶಸ್ವಿಯಾಗಿ ತಾತ್ವಿಕ ಹೋರಾಟ ವನ್ನು ಪ್ರಾರಂಭ ಮಾಡಿದ್ದೇ ಜ್ಯೋತಿ ಬಾ ಫುಲೆ ಯವರು. ಮಹಾರಾಷ್ಟ್ರ ದಲ್ಲಿ ಹುಟ್ಟಿದ್ದರೂ ದೇಶವ್ಯಾಪಿ ಯಾಗಿ ಅವರ ವಿಚಾರಧಾರೆಗಳು ಹಮ್ಮಿದೆ. ಕರ್ನಾಟಕದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಪ್ರಭಾವ ಆಗಿದೆ. ಈ ವರ್ಷ ನಮ್ಮ ಬಜೆಟ್ ನಲ್ಲಿ ಉತ್ತಮ ಶಿಕ್ಷಕ, ಶಿಕ್ಷಕಿಯರಿಗೆ ಜ್ಯೋತಿ ಬಾ ಫುಲೆ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ. ಶೈಕ್ಷಣಿಕ ಕ್ರಾಂತಿಯಲ್ಲಿ ಅವರದ್ದು ಪ್ರಮುಖ ಪಾತ್ರ ಎಂದರು.

ಭಾ.ಜ.ಪ ಸರ್ವಸ್ಪರ್ಶಿ, ಸರ್ವವ್ಯಾಪಿ
ಭಾ.ಜ.ಪ ಸರ್ವಸ್ಪರ್ಶಿ, ಸರ್ವವ್ಯಾಪಿ ಪಕ್ಷ. ಇದರ ಧ್ಯೇಯ ಉದ್ದೇಶವೇ ಅದು . ಒಬ್ಬ ಸಾಮಾನ್ಯ ಕಾರ್ಯಕರ್ತ ಯಾವುದಾದರೂ ಸ್ಥಾನ ಮುಟ್ಟಲು ಸಾಧ್ಯವಿದ್ದರೆ ಅದು ಬಾ.ಜ.ಪದಲ್ಲಿ ಮಾತ್ರ. ಇಲ್ಲಿ ಜಾತಿ, ಮತ ಪಂಥಕ್ಕಿಂತ ಅವನ ಬದ್ದತೆ, ಕಾರ್ಯಕ್ಷಮತೆಯನ್ನು ಗುರುತಿಸಲಾಗುತ್ತದೆ. ಎಲ್ಲಾ ಸಮುದಾಯಗಳನ್ನು ಸಮಾನಾಗಿ ನೋಡಿಕೊಂಡು ಎಲ್ಲರ ಅಭಿವೃದ್ಧಿ ಯಲ್ಲಿ ದೇಶದ ಅಭಿವೃದ್ಧಿ ಇದೆ ಎನ್ನುವುದರಲ್ಲಿ ನಮಗೆ ನಂಬಿಕೆ ಇದೆ. ಹಲವಾರು ಸಮುದಾಯಗಳಿರುವ, ಭಾಷೆಗಳಿರುವ ಈ ರಾಷ್ಟ್ರ ಇತರೆ ರಾಷ್ಟ್ರಗಳಿಗಿಂತ ವಿಭಿನ್ನ. ತನ್ನಡೆಯಾದ ಸಂಸ್ಕೃತಿ, ಸಂಸ್ಕಾರ ಹೊಂದಿರುವ ಈ ರಾಷ್ಟ್ರ ತನ್ನದೇ ಸಮಸ್ಯೆಗಳನ್ನೂ ಹೊಂದಿದೆ. ಇವುಗಳನ್ನು ಪರಿಹರಿಸಲು ಸ್ಪಷ್ಟವಾದ ವಿಚಾರ, ದಿಟ್ಟ ನಾಯಕತ್ವದ ಅವಶ್ಯಕತೆ ಇದೆ. ಅದನ್ನು ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಡುತ್ತಿದ್ದಾರೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುವ ಧ್ಯೇಯ ಎಲ್ಲರನ್ನು ಒಳಗೊಂಡ ಅಭಿವೃದ್ಧಿ ಯಾದಾಗ ಇಡೀ ದೇಶದ ಅಭಿವೃದ್ಧಿ ಯಾಗುತ್ತದೆ ಎಂದರು. ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ ಸಹ ಸೇರಿದೆ. ಹಂತ ಹಂತವಾಗಿ ಈ ಸಮುದಾಯವನ್ನು ದೇಶದ ಮುಖ್ಯವಾಹಿನಿಗೆ ತಂದು ಅವರ ಶ್ರಮಕ್ಕೆ ಯೋಗ್ಯ ಬೆಲೆ ಕೊಡುವ ಮೂಲಕ ದೊಡ್ಡ ಪರಿವರ್ತನೆಯನ್ನು ತಂದು, ಸಾಮಾಜಿಕ ಪರಿವರ್ತನೆ ಆರ್ಥಿಕ ಪರಿವರ್ತನೆಗೆ ನಾಂದಿಯಾಗಬೇಕು ಎನ್ನುವ ದೂರ ದೃಷ್ಟಿ ಪ್ರಧಾನಮಂತ್ರಿಯವರದ್ದು. ಅವರೂ ಹಿಂದುಳಿದ ವರ್ಗದಿಂದ ಬಂದು ಅಪಮಾನಕ್ಕೆ ಈಡಾದವರು. ಹಲವಾರು ಸಂದರ್ಭಗಳಲ್ಲಿ ನೋವನ್ನು ಉಂಡದವರು . ಈ ಎಲ್ಲಾ ನೋವನ್ನು ಸಮಾಜದ ಪರಿವರ್ತನೆಗಾಗಿ ಬಳಸುತ್ತಿದ್ದಾರ ಎಂದರು.

ಮನೆ ಮನೆಗೆ ಕುಡಿಯುವ ನೀರು
ಮನೆ ಮನೆಗೆ ಕುಡಿಯುವ ನೀರನ್ನು ಒದಗಿಸುತ್ತೇವೆ ಎಂದು ಹೇಳುವ ಸಾಹಸವನ್ನು ಯಾವ ಪ್ರಧಾನ ಮಂತ್ರಿಯೂ ಮಾಡಲಿಲ್ಲ. ಏಕೆಂದರೆ ಅದು ಸುಲಭದ ಮಾತಲ್ಲ. ಆದರೆ ಪ್ರಥಮ ಬಾರಿಗೆ ನಮ್ಮ ಪ್ರಧಾನಿಗಳು ಅದನ್ನು ಘೋಷಿಸಿದರು. ಕುಡಿಯುವ ನೀರು ಮೂಲಭೂತ ಸೌಕರ್ಯ. ಸಾಮಾಜಿಕವಾಗಿ ಎಲ್ಲರನ್ನೂ ಆಮಾನವಾಗಿಬಿತೆಗೆದುಕೊಂಡು ಹೋಗಲು ದ್ಯೋತಕ. ಹಳ್ಳಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಗಳನ್ನು ತಲವರ್ಗದವರಿಗೆ ಮಾಡಲು ಸಾಧ್ಯವಾಗಿಲ್ಲ. ಸಾಮಾಜಿಕ ವ್ಯವಸ್ಥೆ ಅದಕ್ಕೆ ಅವಕಾಶ ನೀಡುವುದಿಲ್ಲ. ಆಡಈ ಮನೆ ಮನೆಗೆ ನೀರು ನೀಡಿದರೆ ಸಾಮಾಜಿಕ ಪಿಡುಗು ದೂರವಾಗುತ್ತದೆ. ಎಲ್ಲರ ಮನೆಗೂ ದೀನ್ ದಯಾಳ್ ಉಪಾಧ್ಯಾಯ ಅವರ ಹೆಸರಿನಲ್ಲಿ ನೀಡಿದರು. ಕೆಲವೇ ಜನ ವಿದ್ಯುತ್ತಿನ ಲಾಭ ಪಡೆದರೆ , ಒಂದು ಕುಟುಂಬಕ್ಕೆ ಆಗುವ ಮಾನಸಿಕ ಹಿಂಸೆಯನ್ನು ದೂರ ಮಾಡಲಾಗುತ್ತಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಭಾರತದಲ್ಲಿ ಸಮಾನತೆ ತರಲು ದೊಡ್ಡ ಯೋಜನೆಗಳನ್ನು ರೂಪಿಸಲಾಗಿದೆ. ಮೂಲಭೂತ ಸೌಕರ್ಯಗಳ ಜೊತೆಗೆ ಅವಕಾಶಗಳನ್ನು ನೀಡಿ ಮುಖ್ಯ ವಾಹಿನಿಗೆ ತರಲಾಗುತ್ತಿದೆ. ಅವರ ಯೋಜನೆಗಳನ್ನು ರಾಜ್ಯದಲ್ಲಿ ಕಾರ್ಯಗತ ಮಾಡಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಒಟ್ಟಿಗೆ ಯೋಜನೆಗಳನ್ನು ಫಲಪ್ರದಗೊಳಿಸುತ್ತಿದ್ದೇವೆ ಎಂದರು.

Leave a Comment

Your email address will not be published. Required fields are marked *

Translate »
Scroll to Top