ಬಳ್ಳಾರಿ : ತಾಲ್ಲೂಕಿನ ಸುಪ್ರಸಿದ್ದ ಪುಣ್ಯಕ್ಷೇತ್ರವಾಗಿರುವ ಚೇಳ್ಳಗುರ್ಕಿಯಲ್ಲಿ ಶ್ರೀ ರ‍್ರಿಸ್ವಾಮಿಗಳವರಿಗೆ ಮುತ್ತಿನ ಪಲ್ಲಕ್ಕಿ ಉತ್ಸವದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ಪ್ರತಿ ವರ್ಷದಂತೆಯೇ ಈ ವರ್ಷವೂ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿAದ ನಡೆ ಯಲಿವೆ.
ನಾಳೆ ನ.18 ರಿಂದ ನ.20ರವರೆಗೆ ಶ್ರೀ ರ‍್ರಿಸ್ವಾಮಿಗಳವರಿಗೆ ಮಹಾನ್ಯಾಸ ಪೂರ್ವಕ ಅಷ್ಟೋತ್ತರ ಶಂಖಾಭಿಷೇಕ ಪೂಜೆ, ಪಂಚಕಲಶ, ದಶ ದಿಕ್ಪಾಲಕರ ಕಲಶ , ಅಣಿಮಾದಿ ಅಷ್ಠಸಿದ್ದಿ ಕಲಶ, ಏಕಾದಶ ರುದ್ರಕಲಶ, ನವಗ್ರಹಗಳ ಸ್ಥಾಪನಾಪೂರ್ವಕವಾಗಿ, ಶ್ರೀ ರ‍್ರಿಸ್ವಾಮಿ ಜೀವ ಸಮಾಧಿ ಸದ್ಭಕ್ತರ ಶ್ರೇಯೋಭಿವೃದ್ಧಿಗಾಗಿ ಮಹಾ ಪೂಜೆಗಳನ್ನು ನಡೆಸಲಾಗುವುದು ಎಂದು ಶ್ರೀ ರ‍್ರಿಸ್ವಾಮಿ ಜೀವ ಸಮಾಧಿ ಟ್ರಸ್ಟ್ ಹಾಗೂ ಶ್ರೀ ರ‍್ರಿಸ್ವಾಮಿ ದಾಸೋಹ ಸೇವಾ ಸಂಘ ಮತ್ತು ಸಕಲ ಸದ್ಭಕ್ತರು ತಿಳಿಸಿದ್ದಾರೆ. ನ.20ರಂದು ಗುರುವಾರ ಸಂಜೆ 7 ಗಂಟೆಗೆ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಲಿದೆ. ಬಳ್ಳಾರಿ ಜಿಲ್ಲೆಯೂ ಸೇರಿದಂತೆ ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯಗಳ ವಿವಿಧೆಡೆಗಳಿಂದ ಶ್ರೀ ರ‍್ರಿಸ್ವಾಮಿಯವರ ಸಹಸ್ರಾರು ಜನ ಭಕ್ತಾದಿಗಳು ಚೇಳ್ಳಗುರ್ಕಿಗೆ ಆಗಮಿಸಲಿದ್ದಾರೆ ಎಂದು ಹೇಳಲಾಗಿದೆ.
ಕಾರಣ ಸಕಲ ಸದ್‌ಭಕ್ತಾದಿಗಳೆಲ್ಲರೂ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ರ‍್ರಿಸ್ವಾಮಿಗಳವರ ಕೃಪಾರ್ಶೀವಾದ ಪಡೆಯುವಂತೆ ಟ್ರಸ್ಟ್ನ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ.20ರಂದು ಚೇಳ್ಳಗುರ್ಕಿ ಶ್ರೀ ರ‍್ರಿಸ್ವಾಮಿಗಳ ಮುತ್ತಿನ ಪಲ್ಲಕ್ಕಿ ಉತ್ಸವ



