ಬಿಮ್ಸ್ ಖಾಲಿ ವೈದ್ಯರ ಹುದ್ದೆಗಳ ಭರ್ತಿ ಮಾಡಿ ಅಧಿವೇಶನದಲ್ಲಿ ವೈ.ಎಂ. ಸತೀಶ್ ಆಗ್ರಹ

Kannada Nadu
ಬಿಮ್ಸ್ ಖಾಲಿ ವೈದ್ಯರ ಹುದ್ದೆಗಳ ಭರ್ತಿ ಮಾಡಿ ಅಧಿವೇಶನದಲ್ಲಿ ವೈ.ಎಂ. ಸತೀಶ್ ಆಗ್ರಹ

ಬೆಳಗಾವಿ/ಬಳ್ಳಾರಿ : ಬಳ್ಳಾರಿ ವೈದ್ಯ ಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ (ಬಿಮ್ಸ್)ನಲ್ಲಿ 288 ತಜ್ಞ ವೈದ್ಯರ ಹುದ್ದೆಗಳು, 858 ಸಿಬ್ಬಂ ದಿಗಳು ಮತ್ತು ದಂತ ಕಾಲೇಜಿನಲ್ಲಿ 23 ವೈದ್ಯರ ಹುದ್ದೆಗಳು ಖಾಲಿ ಇವೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ರಾದ ಡಾ. ಶರಣ ಪ್ರಕಾಶ್ ಆರ್. ಪಾಟೀಲ್ ಅವರು ತಿಳಿಸಿದ್ದಾರೆ.
ಬಳ್ಳಾರಿ – ವಿಜಯನಗರ ಸ್ಥಳೀಯ ಸಂಸ್ಥೆ ಗಳ ಪ್ರತಿನಿಧಿ, ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು, ಸಾರ್ವಜನಿಕರಿಗೆ ಉತ್ತಮ ಆರೋಗ್ಯ ನೀಡಲು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕೋರಿ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ.
ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ (ಬಿಮ್ಸ್)ಕ್ಕೆ ಒಟ್ಟು 450 ತಜ್ಞ ವೈದ್ಯರ ಹುದ್ದೆಗಳು ಮಂಜೂರಾಗಿದ್ದು, ಕೇವಲ 162 ಹುದ್ದೆಗಳು ಮಾತ್ರ ಭರ್ತಿಯಾಗಿವೆ. 1071 ಇತರೆ ಸಿಬ್ಬಂದಿಯ ಹುದ್ದೆಗಳು ಮಂಜೂ ರಾಗಿದ್ದು 213 ಮಾತ್ರ ನೇಮಕಗೊಂಡಿವೆ. ಮುಂದಿನ ಐದು ವರ್ಷಗಳಲ್ಲಿ 32 ತಜ್ಞ ವೈದ್ಯರು, 31 ಇತರೆ ಸಿಬ್ಬಂದಿ ಸೇವಾ ನಿವೃತ್ತಿ ಹೊಂದಲಿದ್ದಾರೆ. ಡೆಂಟಲ್ ಕಾಲೇಜಿನಲ್ಲಿ 47 ವೈದ್ಯರ ಹುದ್ದೆಗಳು ಮಂಜೂರಾಗಿದ್ದು, 24 ಮಾತ್ರ ನೇಮಕಗೊಂಡಿವೆ ಎಂದರು.
ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ (ಬಿಮ್ಸ್)ನಲ್ಲಿ ಎನ್‍ಎಂಸಿಮತ್ತು ಡೆಂಟಲ್ ಕಾಲೇಜಿನಲ್ಲಿ ಡಿಸಿ (ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ) ನಿಯಮಗಳ ಪ್ರಕಾರ ಒಳ ಮೀಸಲಾತಿ ವಿವಾದ ಇತ್ಯರ್ಥವಾದ ನಂತರ ವೈದ್ಯರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ಉತ್ತರಿಸಿದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";