ಗಿಡಗಳನ್ನು ನೆಟ್ಟ ನಿಮಗಾಗಿ ನಾವು ಸಂಸ್ಥೆ ಸದಸ್ಯರು

ಬಳ್ಳಾರಿ: ಸಾಮಾಜಿಕ ಕಳಕಳಿ ಹೊಂದಿರುವ ’ನಿಮಗಾಗಿ ನಾವು ಸಂಸ್ಥೆ (ನೋಂ), ಬಳ್ಳಾರಿ’ ಈಗಾಗಲೇ ಹಲವಾರು ಜನಪರ ಕಾಳಜಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಈಗ ಸತತ ಎಂಟನೇ ವರುಷದ ನಮ್ಮ ಪರಿಸರ ಯೋಜನೆ  ಮೂಲಕ ಬಳ್ಳಾರಿ ನಗರದಲ್ಲಿ ಸಸಿ ನೆಡುವ ಕೆಲಸವನ್ನು ಭಾನುವಾರ ಬೆಳಿಗ್ಗೆ 07:00 ರಿಂದ ಬೆಳಿಗ್ಗೆ 11:00 ರವರೆಗೆ 18 ಕ್ಕೂ ಹೆಚ್ಚು ಸಂಸ್ಥೆಯ ಸದಸ್ಯರು ಪಾಲ್ಗೊಂಡು 40 ಕ್ಕೂ ಹೆಚ್ಚು ಸಸಿಗಳನ್ನು ಬಳ್ಳಾರಿ ನಗರದ ಗಾಂಧಿನಗರ ಮತ್ತು ಸದಾಶಿವನಗರಗಳಲ್ಲಿ ನೆಟ್ಟರು. 

ಸಂಸ್ಥೆಯ ಅಧ್ಯಕ್ಷ ವಿನಯ್ ಮಾತನಾಡಿ ನಮ್ಮ ಪರಿಸರ ಇದು ಸಂಸ್ಥೆಯ ಸತತ ೦8 ವರ್ಷದ ಯೋಜನೆಯಾಗಿದ್ದು ಈ ಮಳೆಗಾಲ ಮುಗಿಯುವವರೆಗೆ ಸಸಿಗಳನ್ನು ನೀಡಲಿದ್ದೇವೆ ಮತ್ತು ಪ್ರತಿ ಭಾನುವಾರ ಸಸಿಗಳನ್ನು ನೆಡಲಿದ್ದೇವೆ ಆಸಕ್ತಿ ಉಳ್ಳವರು ಸಂಪರ್ಕಿಸಬಹುದೆಂದು ಎಂದು ತಿಳಿಸಿದರು. 

ಕಾರ್ಯದರ್ಶಿಗಳಾದ ಮಂಜುನಾಥ ರೆಡ್ಡಿ ಮಾತಾಡಿ ಬಿಸಿಲಿಗೆ ಹೆಸರಾದ ಬಳ್ಳಾರಿಯನ್ನು ನಮ್ಮ ಕೈಲಾದ ಮಟ್ಟಿಗೆ ಹಸಿರಾಗಿಸೋಣ ಎಲ್ಲರೂ ತಪ್ಪದೇ ಸಸಿ ನೆಡೋಣವೆಂದು ತಿಳಿಸಿದರು ಈ ಸಂಧರ್ಭದಲ್ಲಿ ಜೊತೆಯಾಗಿದ್ದ ನಿವೃತ್ತ ಪಿಎಸ್‌ಐ ಎನ್ ಮೋಹನ್ ರೆಡ್ಡಿ ಮಾತಾಡಿ ನಿಮಗಾಗಿ ನಾವು ಸಂಸ್ಥೆಯ ಈ  ನಮ್ಮ ಪರಿಸರ  ಕಾರ್ಯಕ್ರವನ್ನ ಹಮ್ಮಿಕೊಂಡಿರುವುದು ನಮಗೆ ತುಂಬಾ ಖುಷಿಯ ಮತ್ತು ಹೆಮ್ಮೆಯ ವಿಚಾರ ಈ ಕೆಲಸವೂ ಎಲ್ಲರಿಗೂ ಮಾದರಿ ಎಂದು ತಿಳಿಸಿದರು. ಕರ್ನಾಟಕ ಬ್ಯಾಂಕ್ ನೌಕರರಾದ ವೆಂಕಟ ಗುರು ಕೆ ಎನ್ ಮಾತಾಡಿ, ಬಿಡುವಿನ ವೇಳೆಯಲ್ಲಿ ಸುಖಾಸುಮ್ಮನೆ ಕಾಲ ಕಳೆಯುವ ಯುವ ಜನಾಂಗದ ನಡುವೆ ಸಸಿ ನೆಡುವ ಕೆಲಸ ಮಾಡುತ್ತಿರುವ ನಿಮಗಾಗಿ ನಾವು ಸಂಸ್ಥೆಯ ಈ ಯುವ ಪಡೆಗೆ ಧನ್ಯವಾದಗಳನ್ನು ತಿಳಿಸಿದರು ಇವರ ಈ ಕೆಲಸದಲ್ಲಿ ಎಲ್ಲರೂ ಜೊತೆಯಾಗೋಣವೆಂದು ತಿಳಿಸಿದರು 

ನಮ್ಮ ಪರಿಸರ ಕೆಲಸದಲ್ಲಿ ಕಾರ್ಯಕ್ರಮದಲ್ಲಿ ಕೆ.ಆಶಾ, ಸಾವಿತ್ರಿ , ಜೋಶ್ನಾ ಕಾಕಿ, ಸಿರಿ, ಮಾನಸ, ಪೃಥ್ವಿರಾಜ್,  ಹರೀಶ್ ರೆಡ್ಡಿ, ದಕ್ಷಿಣ ಮೂರ್ತಿ, ಮಂಜುನಾಥ, ಹೊನ್ನುರ ಸ್ವಾಮಿ, ಗುರು, ಶೇಖರ್, ಮಹಮ್ಮದ್ ಭಾಷ, ಕೃಷ, ಪಂಪಾಪತಿ, ಜಯಪ್ರಕಾಶ್ ರಾಯಚೋಟಿ ಸ್ವಾಮಿ, ರಾಹುಲ್, ಕೆಂಚಪ್ಪ  ಪಾಲ್ಗೊಂಡಿದ್ದರು.

Facebook
Twitter
LinkedIn
WhatsApp

Leave a Comment

Your email address will not be published. Required fields are marked *

Translate »
Scroll to Top