LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
State News

ಇಂದು ಕಾ ್ಯಬಿನೆಟ್‍ನಲ್ಲಿ ಹಾಲಿನ ದರ ತೀರ್ಮಾನ!

ಬೆಂಗಳೂರು: ಹಾಲು ಉತ್ಪಾದಕರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದ್ದು,ಹಾಲಿನ ದರ ಏರಿಕೆಯಾಗುವುದು ಬಹುತೇಕ ಖಚಿತವಾಗಿದೆ. ಹಾಲಿನ ಖರೀದಿ ದರ ಅಥವಾ ಉತ್ಪಾದಕರಿಗೆ ನೀಡುವ ಪೆÇ್ರೀತ್ಸಾಹ ಧನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಈಗಾಗಲೇ 16 ಹಾಲು ಒಕ್ಕೂಟಗಳ ಪ್ರತಿನಿಧಿಗಳು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈಗಾಗಲೇ ಚರ್ಚೆ ನಡೆಸಿದ್ದಾರೆ. ಕ್ಯಾಬಿನೆಟ್‍ನಲ್ಲಿ ಚರ್ಚಿಸಿದ ಬಳಿಕ ದರ ಏರಿಕೆ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದರು, ಹೀಗಾಗಿ ನಾಳಿನ ಸಚಿವ ಸಂಪುಟ ಸಭೆಯತ್ತ ಹಾಲು ಉತ್ಪಾದಕರು ಹಾಗೂ ಹೈನುಗಾರರ ಗಮನ ನೆಟ್ಟಿದೆ. 10 ಏರಿಕೆಗೆ ಉತ್ಪಾದಕರ ಒತ್ತಾಯ: ಪ್ರಸ್ತುತ ಹಾಲು ಉತ್ಪಾದಕರು ಪ್ರತಿ ಲೀಟರ್‍ಗೆ 10ರಷ್ಟು ದರ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಆದರೆ ಉತ್ಪಾದಕರ ಬೇಡಿಕೆಯಂತೆ ಪೂರ್ಣ 10ರಷ್ಟು ಏರಿಕೆ ಮಾಡುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಸರ್ಕಾರ, ಹಾಲು ಒಕ್ಕೂಟಗಳು ಹಾಗೂ ಗ್ರಾಹಕರ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳದಂತೆ ದರ ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ, ಪ್ರತಿ ಲೀಟರ್‍ಗೆ ಸುಮಾರು 3ರಿಂದ 5ರಷ್ಟು ಹೆಚ್ಚಳ ಮಾಡುವ ಸಾಧ್ಯತೆಯ ಬಗ್ಗೆ ಚರ್ಚೆ ನಡೆಯುತ್ತಿದೆ. 10ರಷ್ಟು ಏರಿಕೆ ಮಾಡಿದರೆ ಸರ್ಕಾರದ ಮೇಲೆಯೂ ಹೆಚ್ಚಿನ ಆರ್ಥಿಕ ಹೊರೆ ಬೀಳುವ ಸಾಧ್ಯತೆ ಇದೆ. ಮತ್ತೊಂದೆಡೆ, ಗ್ರಾಹಕರಿಂದ ಹೆಚ್ಚುವರಿ ಮೊತ್ತವನ್ನು ವಸೂಲಿ ಮಾಡಿದರೆ ಹಾಲಿನ ಬೆಲೆ ಏರಿಕೆಯಾಗಿ ಜನರ ಮೇಲೂ ಹೊರೆ ಬೀಳಲಿದೆ. ಹೀಗಾಗಿ ಉತ್ಪಾದಕರು, ಹಾಲು ಒಕ್ಕೂಟಗಳು, ಸರ್ಕಾರ ಮತ್ತು ಗ್ರಾಹಕರು ಎಲ್ಲರ ಹಿತವನ್ನು ಗಮನದಲ್ಲಿಟ್ಟುಕೊಂಡು ದರ ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ. ನಾಳಿನ ಸಚಿವ ಸಂಪುಟ ಸಭೆಯ ಬಳಿಕ ನಡೆಯಲಿರುವ ಸುದ್ದಿಗೋಷ್ಠಿಯಲ್ಲಿ ಹಾಲಿನ ದರ ಅಥವಾ ಪೆÇ್ರೀತ್ಸಾಹ ಧನ ಹೆಚ್ಚಳದ ಕುರಿತು ಸರ್ಕಾರ ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆ ಇದೆ.

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ಕಾ ್ಯಬಿನೆಟ್‍ನಲ್ಲಿ ಹಾಲಿನ ದರ ತೀರ್ಮಾನ!ಬರ ಪರಿಹಾರ ನೀಡಿಲ್ಲ, ನಾವಿಟ್ಟ ಬೇಡಿಕೆ ಈಡೇರಿಸಿಲ್ಲ, ಜನತಾ ನ್ಯಾಯಾಲಯಕ್ಕೆ ಹೋಗುತ್ತೇವೆ: ಪ್ರತಿಪಕ್ಷ ನಾಯಕ ಆರ್‌.ಅಶೋಕಸದ್ಯದಲ್ಲೇ ಬಸ್ ಪ್ರಯಾಣ ದರ ಹೆಚ್ಚಳ ನಿರ್ಧಾರಕುರುಗೋಡಿನಲ್ಲಿ ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾಬರ ಪರಿಹಾರ, ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಜೆಡಿಎಸ್‌ ಪ್ರತಿಭಟನೆಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಹರಿಹಾಯ್ದ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಶಾಸಕ ರಾಘವೇಂದ್ರ ಹಿಟ್ನಾಳ್ 10 ಸಾವಿರ ಕೋಟಿ ಬಗ್ಗೆ ಶ್ವೇತ ಪತ್ರ ಹೊರಡಿಸಲಿ : ಗಣೇಶ್ ಹೊರತಟ್ನಾಳ್ ಸವಾಲ್8 ವರ್ಷದ ಬಾಲಕ: ಪೋಷಕರ ಪತ್ತೆಗೆ ಮನವಿ"ಪ್ರತಿ ಹೃದಯ ಬಡಿತವೂ ಮಹತ್ವದ್ದು” ಎಂಬ ಧ್ಯೇಯವಾಕ್ಯದೊಂದಿಗೆ ಇ.ಎಸ್.ಐ.ಸಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ವಿಶ್ವ ಹೃದಯ ದಿನಾಚರಣೆಬಸವನ ಬಾಗೇವಾಡಿಯಲ್ಲಿ ಭೂಕಂಪನ