LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
State News | Politics News

ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಹರಿಹಾಯ್ದ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ 

ಶಿಕಾರಿಪುರ: ಬಿಜೆಪಿ ರಾಜ್ಯಾಧ್ಯಕ್ಷರು ನಮ್ಮ ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಕಾರ್ಯಕ್ರಮದ ಬಗ್ಗೆ ಟೀಕಿಸುತ್ತ ತಾಲ್ಲೂಕಿನ ಅಭಿವೃದ್ಧಿಯನ್ನು ವೀಕ್ಷಿಸಲು ಕರೆ ನೀಡಿದ್ದಾರೆ. ತಾಲ್ಲೂಕಿನ ಅಭಿವೃದ್ಧಿಗಿಂತ ಬಿಎಸ್ವೈರವರ ಕುಟುಂಬದವರು ಅಭಿವೃದ್ಧಿಯಾಗಿದ್ದಾರೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಹರಿಪ್ರಸಾದ್ ಬಿವೈವಿ ವಿರುದ್ಧ ಹರಿಹಾಯ್ದರು.

 ಪಟ್ಟಣದ ಹೊಸ ಸಂತೆ ಮೈದಾನದಲ್ಲಿ ಬುಧವಾರ ರಾಹುಲ್ ಗಾಂಧಿರವರ ಕನಸಿನ ಯಾತ್ರೆಯಾದ  ಭಾರತ್ ಜೋಡೋ 2 0ಯ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯು ಸಾಮಾಜಿಕ ನ್ಯಾಯ ನೀಡಿದ ಕಡಿದಾಳ್ ಮಂಜಪ್ಪ, ಎಸ್ ಬಂಗಾರಪ್ಪರವರು ಜೆ ಎಚ್ ಪಟೇಲ್ ರವರನ್ನೊಳಗೊಂಡಂತೆ ಜ್ಞಾನಪೀಠ ಪ್ರಶಸ್ತಿ ಪಡೆದಂತಹ ಕುವೆಂಪುರವರು ರೈತರ ಪರವಾಗಿ ಆಂದೋಲನ ನಡೆಸಿದ ಗೋಪಾಲ್ ಗೌಡ್ರರವರಂಥಾ ಮಹನೀಯರನ್ನು ಕೊಟ್ಟ ಜಿಲ್ಲೆಯಾಗಿದೆ. ಇಂತಹ ಜಿಲ್ಲೆ ಹಾಗೂ ಶಿಕಾರಿಪುರ ಕ್ಷೇತ್ರದಲ್ಲಿ ಜೂನಿಯರ್ ಯಡಿಯೂರಪ್ಪರವರೆಂದು ಕರೆಸಿಕೊಳ್ಳುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರರವರು ನಮ್ಮ ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಕಾರ್ಯಕ್ರಮದ ಬಗ್ಗೆ ಟೀಕಿಸುತ್ತ ತಾಲ್ಲೂಕಿನ ಅಭಿವೃದ್ಧಿಯನ್ನು ವೀಕ್ಷಿಸಲು ಕರೆ ನೀಡಿದ್ದಾರೆ. ಇವರ ಅಭಿವೃದ್ಧಿ ಕಾರ್ಯವೇನೆಂದರೆ ಕೆರೆಕಟ್ಟೆಗಳ ಅಭಿವೃದ್ಧಿ ನೆಪದಲ್ಲಿ ವಿವೇಕಾನಂದ ವಿದ್ಯಾಸಂಸ್ಥೆ , ಕುಮುದ್ವತಿ ರೆಸಿಡೆನ್ಸಿಯಲ್ ಸ್ಕೂಲ್ ಮತ್ತು ಕಾಲೇಜುಗಳ ನಿರ್ಮಾಣ, ಹೊನ್ನಾಳಿ ರಸ್ತೆಯಲ್ಲಿರುವ ಅರಣ್ಯ ಭೂಮಿ ಒತ್ತುವರಿ ಮಾಡಿ, ತೋಟ ನಿರ್ಮಿಸಿಕೊಂಡು ಸನ್ಯಾಸಿಕೊಪ್ಪ ಏತ ನೀರಾವರಿ ಮೂಲಕ ತೋಟಕ್ಕೆ ನೀರು ಹಾಯಿಸಿಕೊಳ್ಳುವುದು ಇವರ ಅಭಿವೃದ್ಧಿಯಾಗಿದೆ. ಭ್ರಷ್ಟಾಚಾರದ ವಿರುದ್ಧ  ಲಿಂಗಸೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದ ನೀವು ಆರ್‌ಟಿಜಿಎಸ್ ಮೂಲಕ ಹಣ ಪಡೆದು ಭ್ರಷ್ಟಾಚಾರದ ಪಿತಾಮಹರಾಗಿದ್ದೀರಿ. ಮಾಜಿ ಸಚಿವ ವೆಂಕಟಪ್ಪರವರ ಪತ್ನಿ 3ಸಾವಿರ ರೇಷ್ಮೆ ಸೀರೆ ಉಟ್ಟುಕೊಂಡಿದ್ದಕ್ಕೆ ಭ್ರಷ್ಟಾಚಾರದ ಹಣವೆಂದು ಪ್ರತಿಭಟನೆ ನಡೆಸಿದ ನೀವು ನಿಮ್ಮ ತಂದೆ ಮುಖ್ಯಮಂತ್ರಿಯಾಗಿರುವ ಮುನ್ನ ರಾಜ್ಯದ ಅನೇಕ ಶಾಸಕರನ್ನು 25 ರಿಂದ 30 ಕೋಟಿ ಹಣ ನೀಡಿ ಅಧಿಕಾರಕ್ಕೆ ಬಂದು ಅಭಿವೃದ್ಧಿ ನೆಪದಲ್ಲಿ ತಾಲ್ಲೂಕಿನಲ್ಲಿ, ಜಿಲ್ಲೆಯಲ್ಲಿ ನಿಮ್ಮದು ಆಸ್ತಿ ಮಾಡಿದ್ದೀರಿ ಈ ಆಸ್ತಿ ಯಾವ ಹಣದಿಂದ ಬಂತು ಎಂದು ಬಹಿರಂಗಪಡಿಸುತ್ತೀರಾ ಎಂದು ಸವಾಲೆಸಿದರು.

 
ಭಾರತ್ ಜೋಡೊ ಪಾದಯಾತ್ರೆ ರಾಹುಲ್ ಗಾಂಧಿರವರ ಯಾತ್ರೆಯಾಗಿದ್ದು, ಇಂತಹ ಯಾತ್ರೆಯಲ್ಲಿ ಸಹಸ್ರಾರು ಜನ ಸಮೂಹ ಸೇರಿರುವುದರಿಂದ  ರಾಹುಲ್ ಗಾಂಧಿಯವರ ಬಗ್ಗೆ ಜನಪ್ರಿಯ ಎಷ್ಟಿದೆ ಎಂಬುದನ್ನು ತಿಳಿಯಬಹುದು. ಸೆ30 2022ರಲ್ಲಿ ಭಾರತ್ ಜೋಡೋ ಕಾರ್ಯಕ್ರಮ ಹಮ್ಮಿಕೊಂಡಾಗ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುಮಾರು 6ಸಾವಿರ ಕಿ ಮೀ ಮಣಿಪುರದಿಂದ ಮುಂಬೈಯವರೆಗೆ 4ಸಾವಿರ ಕಿ ಮೀ ಪಾದಯಾತ್ರೆ ಸುಮಾರು 10ಸಾವಿರ ಕಿ ಮೀ ಪಾದಯಾತ್ರೆ ಮಾಡುವುದರ ಮೂಲಕ ದೇಶದ ಜನರನ್ನು ಒಗ್ಗರೆಡಿಸುವ ಮೂಲಕ ಭಾರತವನ್ನು ತಿಳಿಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಪಾದಯಾತ್ರೆ ಮಾಡುವಾಗ ಬಡವರು ಕೂಲಿಕಾರ್ಮಿಕರ ಸಮಸ್ಯೆಗಳನ್ನ ಹತ್ತಿರದಿಂದ ಗಮನಿಸಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ರಾಹುಲ್ ಗಾಂಧಿಯವರ ನಡೆಯನ್ನು ವೀಕ್ಷಿಸಿದ ದೇಶದ ಪ್ರಧಾನಿ ಮುಂದೆ ತಾವು ಅಧಿಕಾರಕ್ಕೆ ಬರುವುದಿಲ್ಲ ಎಂಬ ಭಯದಿಂದ ಎಸ್ಐಆರ್ ನೆಪವಡ್ಡಿ ಚುನಾವಣಾ ಆಯೋಗವನ್ನು ಬಳಸಿಕೊಂಡು ಕೋಟಿ ಕೋಟಿ ಮತದಾರರನ್ನು ಕೈಬಿಡುವ ಹುನ್ನಾರ ನಡೆಸಿದ್ದಾರೆ. ಆಯೋಗವನ್ನ ದುರುಪಯೋಗ ಮಾಡಿದ ಚುನಾವಣಾ ಮುಖ್ಯಸ್ಥರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ರಾಹುಲ್ ಗಾಂಧಿಯವರು 2022ರ ಸೆಪ್ಟೆಂಬರ್ 9ರಂದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಭಾರತ್ ಜೋಡೋ ಪಾದಯಾತ್ರೆ ಹಮ್ಮಿಕೊಂಡಿದ್ದರು. ದ್ವೇಶದ ರಾಜಕಾರಣದಿಂದ ರಾಹುಲ್ ಗಾಂಧಿರವರು ಅಜ್ಜಿ ಇಂದಿರಾ ಗಾಂಧಿರವರನ್ನು ರಾಜೀವ್ ಗಾಂಧಿರವರನ್ನು ಕಳೆದುಕೊಂಡರಲ್ಲದೇ ದೇಶದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಪಕ್ಷದ ಅನೇಕ ಮಹನೀಯರು ಹೋರಾಟ ನಡೆಸಿ ತಮ್ಮ ಪ್ರಾಣ ಬಲಿದಾನ ಮಾಡಿದ್ದಾರೆ ಆದರೆ ಬಿಜೆಪಿಯವರು ಯಾವುದೇ ಹೋರಾಟ ನಡೆಸಿರುವುದೆ ಜಾತಿ ಜಾತಿ ಮದ್ದೇ ದ್ವೇಷತ್ತೊಂದು ಈಗ ದೇಶವನ್ನು ಆಳುತ್ತಿದ್ದಾರೆ ಎಂದರು.

ತಾಲ್ಲೂಕಿನಲ್ಲಿ ವಿರೋಧ ಪಕ್ಷದವರು ನಮ್ಮನ್ನು ಒಡೆದಾಳುವ ನೀತಿ ನಡೆಸುತ್ತಿದ್ದು, ಪಕ್ಷದ ಮುಖಂಡರು ಕಾರ್ಯಕರ್ತರು ಒಗ್ಗಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಸಲಹೆ ನೀಡಿದ ಅವರು ತಾಲ್ಲೂಕಿನಲ್ಲಿ ಅನೇಕ  ರೈತರಿಗೆ ಬಗರ್ ಹುಕ್ಕುಂ ಪತ್ರ ನೀಡಬೇಕಿದೆ ಅದಕ್ಕಾಗಿ ಬೇರೆ ವೇದಿಕೆಯಲ್ಲಿ ಸೇರೋಣ. 2028ರ ವಿಧಾನಸಭಾ ಚುನಾವಣೆಗೆ ಶಿಕಾರಿಪುರದಿಂದಲೇ ಶಿಕಾರಿ ಆರಂಭವಾಗಿದ್ದು ಶಿಕಾರಿಪುರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವುದು ನಿಶ್ಚಿತವಾಗಿದೆ ಈ ನಿಟ್ಟಿನಲ್ಲಿ ಕಾರ್ಯಕರ್ತರು ಒಗ್ಗೂಡಿ ತಾಲ್ಲೂಕಿನಲ್ಲಿ  ಕಾಂಗ್ರೆಸ್ ಕಟ್ಟುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು. 

ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಬಿಜೆಪಿ ಪಕ್ಷವು ಸಮಾಜದಲ್ಲಿ ಜಾತಿ ಜಾತಿಯಲ್ಲಿ ಬಿನ್ನಾಭಿಪ್ರಾಯ ತರುವ ಕೋಮುವಾದಿ ಪಕ್ಷವಾಗಿದೆ. ಜನರಲ್ಲಿ ದ್ವೇಶವನ್ನ ಹುಟ್ಟು ಹಾಕುವ ಮೂಲಕ ಚುನಾವಣೆಯಲ್ಲಿ ಗೆಲ್ಲುವ ಕುತಂತ್ರ ನಡೆಸುತ್ತಿದ್ದಾರೆ. ಎಸ್ಐಆರ್ ನೆಪವಡ್ಡಿ ದೇಶದಲ್ಲಿ 13ಕೋಟಿ 30ಲಕ್ಷ ಮತದಾರರನ್ನು ಕೈಬಿಡಲಾಗಿದೆ. ಕರ್ನಾಟಕದಲ್ಲಿ ಅಲ್ಪಸಂಖ್ಯಾತರ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರನ್ನು ಸೇರಿದಂತೆ ಒಂದು ಕೋಟಿಗೂ ಹೆಚ್ಚಿನ ಮತದಾರರನ್ನು ಕೈ ಬಿಡಲಾಗಿದೆ ಈ ಬಗ್ಗೆ ಚುನಾವಣಾ ಆಯೋಗದ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು. ಕಾಂಗ್ರೆಸ್ ಪಕ್ಷವು ದೇಶದ ರಾಜ್ಯದ ಎಲ್ಲರನ್ನು ಒಗ್ಗೂಡಿಸಿಕೊಂಡು ಸಂವಿಧಾನಾತ್ಮಕವಾಗಿ ಆಡಳಿತ ನಡೆಸುತ್ತಿತ್ತು. ಆದರೀಗ ದೇಶದಲ್ಲಿ ಅಕ್ರಮ ಮತದಾನ ಮಾಡಿದವರು ಆಡಳಿತ ನಡೆಸುತ್ತಿದ್ದಾರೆ. ಪ್ರಜಾಪ್ರಭುತ್ವದ ಶಕ್ತಿ ಏನು ತೋರಿಸಬೇಕಾದರೆ ಬಿಜೆಪಿಯನ್ನು ಸೋಲಿಸಬೇಕಾಗಿದೆ ಎಂದರು.

 ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಸಾಗರ ಹೊಸನಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷರು ಬಳ್ಳಾರಿಗೆ ಭ್ರಷ್ಟಾಚಾರದ ವಿರುದ್ಧ ಪಾದಯಾತ್ರೆಮಾಡಿದ್ದರು ಆದರೆ ಅವರ ತಂದೆಯೇ ಭ್ರಷ್ಟಾಚಾರದ ಪಿತಾಮಹರಾಗಿದ್ದಾರೆ. ಬಿಜೆಪಿ ಅಧಿಕಾರಾವದಿಯಲ್ಲಿ ಛೋಟಾ ಸಹಿ ಮಾಡುವುದರೊಂದಿಗೆ ತಂದೆಯನ್ನೇ ಜೈಲಿಗಟ್ಟಿದ್ದ ಪುತ್ರರೆಂದರೆ ಅದು ಬಿ ವೈ ವಿಜಯೇಂದ್ರ. 


ಅವರು ಬಳ್ಳಾರಿಗೆ ನಡೆಸಿದ ಪಾದಯಾತ್ರೆ ಮೂರುವರೆ ವರ್ಷ ಜೈಲಲ್ಲಿದ್ದ ರೆಡ್ಡಿ ಮತ್ತು ಶ್ರೀರಾಮುಲುರವರಿಗೆ ಮತ್ತೊಮ್ಮೆ ಜೈಲಿಗೆ ಕಳಿಸುವ ವ್ಯವಸ್ಥೆಯೊಂದಿಗೆ ಬಿಜೆಪಿಯಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪಾದಯಾತ್ರೆ ನಡೆಸಿದ್ದಾರೆ. ಬಿವೈಆರ್ ಮತ್ತು ಬಿವೈವಿರವರು ನಮ್ಮ ಸಚಿವರಾದ ಮಧು ಬಂಗಾರಪ್ಪ ರವರ ಬಗ್ಗೆ  ಏಕವಚನದಲ್ಲಿ ಮಾತನಾಡಿ ಸೊರಬ ಕ್ಷೇತ್ರದಲ್ಲಿ ಮಧು ಬಂಗಾರಪ್ಪನವರರನ್ನ ಮತ್ತೊಮ್ಮೆ ಗೆದ್ದುಬರಲು ಸವಾಲು ಹಾಕಿದ್ದಾರೆ ನಿಮ್ಮ ಕ್ಷೇತ್ರದಲ್ಲಿ ನೀವು ಗೆಲ್ಲುವುದು ಅನುಮಾನವಾಗಿದೆ ಎಂದು ವ್ಯಂಗ್ಯವಾಡಿದರು. 

ಕಾರ್ಯಕ್ರಮದಲ್ಲಿ ಸಚಿವರಾದ ಬಸವಂತಪ್ಪ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಗೋಪಿನಾಥ್ ಪಳನಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ, ಪ್ರಚಾರ ಸಮಿತಿಯ ಅಧ್ಯಕ್ಷ ವಿನಯ್ ಕುಮಾರ್ ಸೊರಕಿ, ಅಲೆಮಾರಿ ನಿಗಮದ ರಾಜ್ಯಾಧ್ಯಕ್ಷ ಪಲ್ಲವಿ, ಶಾಸಕರಾದ ರುದ್ರಪ್ಪ ಲಂಬಾಣಿ ಸಂಗಮೇಶ್ ಶಾಂತನಗೌಡ, ಯು ಬಿ ಬಣಕಾರ್,  ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಯೋಗೇಶ್, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗರಾಜ್ ಗೌಡ, ಸದಸ್ಯರಾದ ಗೋಣಿ ಮಾಲತೇಶ್, ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್‌ಎಂ ಮಂಜುನಾಥ್ ಗೌಡ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭಂಡಾರಿ ಮಾಲತೇಶ್, ಮಾಜಿ ಪುರಸಭಾ ಸದಸ್ಯರಾದ ಉಳ್ಳಿ ದರ್ಶನ್ ಪಾಲಾಕ್ಷಪ್ಪ ಜಿಲ್ಲಾ ಕೆಡಿಪಿ ಸದಸ್ಯ ಉಮೇಶ್ ಮಾರವಳ್ಳ, ತಾಲ್ಲೂಕು ಕೆಡಿಪಿ ಸದಸ್ಯ ರಾಘವೇಂದ್ರ ನಾಯ್ಕ್ ಸೇರಿದಂತೆ ಅನೇಕ ಮುಖಂಡರು ಪಕ್ಷದ ಕಾರ್ಯಕರ್ತರು ಹಾಜರಿದ್ದರು.

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ಕಾ ್ಯಬಿನೆಟ್‍ನಲ್ಲಿ ಹಾಲಿನ ದರ ತೀರ್ಮಾನ!ಬರ ಪರಿಹಾರ ನೀಡಿಲ್ಲ, ನಾವಿಟ್ಟ ಬೇಡಿಕೆ ಈಡೇರಿಸಿಲ್ಲ, ಜನತಾ ನ್ಯಾಯಾಲಯಕ್ಕೆ ಹೋಗುತ್ತೇವೆ: ಪ್ರತಿಪಕ್ಷ ನಾಯಕ ಆರ್‌.ಅಶೋಕಸದ್ಯದಲ್ಲೇ ಬಸ್ ಪ್ರಯಾಣ ದರ ಹೆಚ್ಚಳ ನಿರ್ಧಾರಕುರುಗೋಡಿನಲ್ಲಿ ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾಬರ ಪರಿಹಾರ, ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಜೆಡಿಎಸ್‌ ಪ್ರತಿಭಟನೆಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಹರಿಹಾಯ್ದ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಶಾಸಕ ರಾಘವೇಂದ್ರ ಹಿಟ್ನಾಳ್ 10 ಸಾವಿರ ಕೋಟಿ ಬಗ್ಗೆ ಶ್ವೇತ ಪತ್ರ ಹೊರಡಿಸಲಿ : ಗಣೇಶ್ ಹೊರತಟ್ನಾಳ್ ಸವಾಲ್8 ವರ್ಷದ ಬಾಲಕ: ಪೋಷಕರ ಪತ್ತೆಗೆ ಮನವಿ"ಪ್ರತಿ ಹೃದಯ ಬಡಿತವೂ ಮಹತ್ವದ್ದು” ಎಂಬ ಧ್ಯೇಯವಾಕ್ಯದೊಂದಿಗೆ ಇ.ಎಸ್.ಐ.ಸಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ವಿಶ್ವ ಹೃದಯ ದಿನಾಚರಣೆಬಸವನ ಬಾಗೇವಾಡಿಯಲ್ಲಿ ಭೂಕಂಪನ