ಹೊಸಪೇಟೆ : ಪ್ರಧಾನಿ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರದ ಸುಧಾರಣಾ ಕ್ರಮಗಳಿಂದಾಗಿ ಭಾರತ ಆರ್ಥಿಕ ಪ್ರಗತಿಯಲ್ಲಿ ವಿಶ್ವದ 4ನೇ ಸ್ಥಾನಕ್ಕೆ ತಲುಪಿದೆ. ಚಿದಂಬರಂ ಹೇಳಿದ್ದಕ್ಕಿಂತ 20 ವರ್ಷ ಮುನ್ನವೇ ಗುರಿಗೆ ಹತ್ತಿರವಾಗಿದೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2047ರ ವೇಳೆ ಭಾರತ ಜಗತ್ತಿನ ಪ್ರಬಲ ರಾಷ್ಟ್ರಗಳ ಪೈಕಿ 3ನೇ ಸ್ಥಾನದಲ್ಲಿರಲಿದೆ ಎಂದು ಯುಪಿಎ ಸರ್ಕಾರದಲ್ಲಿ ಹಿಂದೆ ವಿತ್ತ ಸಚಿವರಾಗಿದ್ದ ಪಿ.ಚಿದಂಬರಂ ಹೇಳಿದ್ದರು. ಆದರೆ, ಎನ್‍ಡಿಎ ಸರ್ಕಾರದ ಸುಧಾರಣಾ ಕ್ರಮಗಳಿಂದಾಗಿ ಭಾರತ ಆರ್ಥಿಕ ಪ್ರಗತಿಯಲ್ಲಿ ವಿಶ್ವದ 4ನೇ ಸ್ಥಾನಕ್ಕೆ ತಲುಪಿದೆ. ಚಿದಂಬರಂ ಹೇಳಿದ್ದಕ್ಕಿಂತ 20 ವರ್ಷ ಮುನ್ನವೇ ಗುರಿಗೆ ಹತ್ತಿರವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಒಂದು ದಶಕದಲ್ಲಿ ನಿರೀಕ್ಷೆಗೂ ಮೀರಿ ಸಾಧನೆ ತೋರುತ್ತಿದೆ. ಜನಪರ ಕಾಳಜಿಯೊಂದಿಗೆ ರೂಪಿಸಿರುವ ಅನೇಕ ಕಾರ್ಯಕ್ರಮಗ ಳು ದೇಶದ ಪ್ರಗತಿಯನ್ನು ಉತ್ತೇಜಿಸಿವೆ. 2047ರ ವೇಳೆಗೆ ಭಾರತ ನಂ.1 ಸ್ಥಾನದಲ್ಲಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ವರ್ಷದ ಬಜೆಟ್‍ನಲ್ಲಿ ಜನರ ಆದಾಯ ತೆರಿಗೆ ವಿನಾಯ್ತಿಯನ್ನು 12 ಲಕ್ಷ ರೂ. ವರೆಗೆ ವಿಸ್ತರಿಸಿತ್ತು. ಈ ಬಾರಿ ಹೊಸಪೇಟೆ ಸೇರಿದಂತೆ ದೇಶದ 60 ರೈಲು ನಿಲ್ದಾಣಗಳನ್ನು ಮೇಲ್ದಜೇಗೇರಿಸಲು 7,748 ಕೋಟಿ ರೂ. ಮೀಸಲಿಟ್ಟಿದೆ. ಪರಿಣಾಮ ಪ್ರವಾಸೋದ್ಯಮ ಸೇರಿದಂತೆ ಎಂದು ತಿಳಿಸಿದರು.
ಮಹಿಳೆಯರ ಖರೀದಿ ಸಾಮಥ್ರ್ಯವನ್ನು ಬೂಸ್ಟ್ ಮಾಡಲು ವಿವಿಧ ಮಾಲ್ ಮಾದರಿಯಲ್ಲಿ ದೇಶದ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಶ್ರೀ ಮಾಲ್ ಆರಂಬಿಸುವುದಾಗಿ ಘೊಷಿಸಿದ್ದು, ಅದಕ್ಕಾಗಿ ತಲಾ 20 ಲಕ್ಷ ರೂ. ಮೀಸಲಿಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರು ಈ ಬಾರಿಯೂ ಜನಪರ ಹಾಗೂ ದೇಶದ ಅಭಿವೃದ್ಧಿಯ ಗತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜನರಪರವಾದ ಬಜೆಟ್ ಮಂಡಿಸಿರುವುದು ಅಭಿನಂದನೀಯ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಎಸ್‍ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ್ ರೆಡ್ಡಿ, ಜಿಲ್ಲಾ ವಕ್ತಾರ ಅಶೋಕ್ ಜಿರೆ, ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ಮಂಡಲ ಅಧ್ಯಕ್ಷರಾದ ಶಂಕರ್ ಮೇಟಿ, ಪ್ರಮುಖರಾದ ಜಗದೀಶ್ ಕಮಟಗಿ, ಮಧುಸೂಧನ್ ಉಪಸ್ಥಿತರಿದ್ದರು.