ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿಯನ್ನು ಹೆಚ್ಚಿಸಲು ಹಾಗೂ ಶಾಲೆಗಳಿಗೆ ಗೈರು ಹಾಜರಾಗುವ ವಿದ್ಯಾರ್ಥಿಗಳಿಗೆ ಬಿಸಿ ಮುಟ್ಟಿಸಲು ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಮುಂದಾಗಿದ್ದು, ಬರುವ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಎಐ ಆಧಾರಿತ ಮುಖ ಚಹರೆ ಹಾಜರಾತಿ ವ್ಯವಸ್ಥೆಯನ್ನು ಜಾರಿ ಮಾಡಲು ನಿರ್ಧರಿಸಿದೆ.
ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ರಾಜ್ಯದ ಶಾಲಾ ಮತ್ತು ಸಾಕ್ಷರತಾ ಇಲಾಖೆ ಎಐ ಆಧಾ ರಿತ ವಿದ್ಯಾರ್ಥಿಗಳ ಮುಖ ಚಹರೆ ಹಾಜರಾತಿ ವ್ಯವಸ್ಥೆಯನ್ನು ಮೊಬೈಲ್ ಅಪ್ಲಿಕೇಷನ್ ಮೂಲಕ ದಾಖಲಿಸುವ ನಿರಂತರ ಕಾರ್ಯಕ್ರಮವನ್ನು ಇ- ಆಡಳಿತ ಮೂಲಕ ಅನುಷ್ಠಾನ ಕುರಿತು ಸುತ್ತೋಲೆ ಹೊರಡಿಸಿದೆ.
ಈ ನಿರಂತರ ಕಾರ್ಯಕ್ರಮದ ಜಾರಿ ಬಗ್ಗೆ ಕಳೆದ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದ್ದು, ಈ ನಿರಂತರ ಕಾರ್ಯಕ್ರಮದಡಿ ಮುಖ ಚಹರೆ ಪತ್ತೆ ಹಚ್ಚುವ ತಂತ್ರಜ್ಞಾನದ ಮೂಲಕ ಮಕ್ಕಳ ಹಾಜರಾತಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ವಿದ್ಯಾರ್ಥಿಗಳ ಜತೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಖಾಯಂ ಶಿಕ್ಷಕರು, ಮುಖ್ಯ ಶಿಕ್ಷಕರು, ಉಪನ್ಯಾಸಕರು ಪ್ರಾಚಾರ್ಯರು ಹಾಗೂ ಅಧಿಕಾರಿಗಳು ಎಲ್ಲ ಕಚೇರಿಗಳಲ್ಲಿರುವ ಖಾಯಂ ಬೋಧಕೇತರ ಸಿಬ್ಬಂದಿ ಅಧಿಕಾರಿಗಳ ಹಾಜರಾತಿಗೂ ಮೊಬೈಲ್ ಅಪ್ಲಿಕೇಷನ್ ಬಳಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಸುತ್ತೋಲೆಯಲ್ಲಿ ಹೇಳಲಾಗಿದ್ದು, ಈ ವ್ಯವಸ್ಥೆಯಲಿಂದ ಹೇಳದೆ ಕೇಳದೆ ಶಾಲೆಗೆ ಚಕ್ಕರ್ ಹಾಕುವ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಚಾಳಿಗೆ ಕಡಿವಾಣ ಬೀಳಲಿದೆ.
ಈ ಹೊಸ ವ್ಯವಸ್ಥೆಯಿಂದ ಶಾಲೆಗೆ ಗೈರು ಹಾಜರಾಗುವ ವಿದ್ಯಾರ್ಥಿಗಳ ಪತ್ತೆ ಸುಲಭವಾಗಲಿದ್ದು, ವಿದ್ಯಾರ್ಥಿಗಳ ಗೈರು ಹಾಜರಿ ಬಗ್ಗೆ ಮಾಹಿತಿಗಳು ಪೋಷಕರಿಗೆ ತಲುಪಲಿವೆ.
ಈ ಹೊಸ ವ್ಯವಸ್ಥೆ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿಯಾಗಲಿದೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಈ ಮುಖ ಚಹರೆ ಹಾಜರಾತಿ ವ್ಯವಸ್ಥೆ ಜಾರಿಗೆ ಬರಲಿದೆ.
ಕೋವಿಡ್ ಸಮಯದಲ್ಲಿ ಮಕ್ಕಳಿಗೆ ಶಾಲೆ ಹಾಜರಾತಿಯಲ್ಲಿ ವಿನಾಯಿತಿ ನೀಡಿತ್ತು ಶಿಕ್ಷಣ ಇಲಾಖೆ. ಇದನ್ನೇ ಅಭ್ಯಾಸ ಮಾಡಿಕೊಂಡಿದ್ದ ಕೆಲ ವಿದ್ಯಾರ್ಥಿಗಳು ಶಾಲೆಗೆ ಚಕ್ಕರ್ ಹೊಡೆದು ಕ್ಲಾಸ್ ಗೆ ಬರುತ್ತಿರಲಿಲ್ಲ..ಈಗ ಇಂತಹ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಮಕ್ಕಳ ಹಾಜರಾತಿ ಗೆ ಎಐ ತಂತ್ರಜ್ಞಾನದ ಮೂಲಕ ಫೇಸಿಯಲ್ ಅಟೆಂಡೆನ್ಸ್ ಜಾರಿಗೆ ತರಲು ಮುಂದಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಮಕ್ಕಳ ಹಾಜರಾತಿಯನ್ನು ಮೊಬೈಲ್ ತಂತ್ರಜ್ಞಾನದ ಮೂಲಕ ಪೋಟೋ ತೆಗೆದು ಹಾಜರಾತಿಯನ್ನು ಖಚಿತ ಪಡಿಸಿ.ನೇರವಾಗಿ ಇಲಾಖೆಯ ಸ್ಟೇಟ್ಸ್ ಗೆ ಹಾಗೂ ಪೋಷಕರ ಮೊಬೈಲ್‌ಗೆ ಅಪ್ ಡೆಟ್ ಅಗುತ್ತೆ..ಈ ಮೂಲಕ ನಿತ್ಯ ಶಾಲೆಯಲ್ಲಿ ಎಷ್ಟು ಮಕ್ಕಳು ಹಾಜರಿದ್ದರು ಎಂಬ ಮಾಹಿತಿ ಶಿಕ್ಷಣ ಇಲಾಖೆಗೆ ಮಾಹಿತಿ ಸಿಗಲಿದೆ ..ಇತ್ತ ಪೋಷಕರ ಮೊಬೈಲ್ ಗೂ ಕೂಡ ಮಕ್ಕಳ ಹಾಜರಾತಿ ಮೇಸೆಜ್ ಮೂಲಕ ಮಾಹಿತಿ ಲಭ್ಯವಾಗುತ್ತದೆ.. ಇನ್ನೂ ಕಡ್ಡಾಯ ಹಾಜರಾತಿ ಯಿಂದ ಕಡಿಮೆ ಹಾಜರಾತಿ ಇರುವ ಮಕ್ಕಳಿಗೆ ಪರೀಕ್ಷೆ ವಿನಾಯಿತಿ ಬಗ್ಗೆಯೂ ಚಿಂತನೆ ನಡೆಸಿದೆ ಶಿಕ್ಷಣ ಇಲಾಖೆ..
ಇನ್ನೂ 2026-27 ನೇ ಶೈಕ್ಷಣಿಕ ಸಾಲಿನಲ್ಲಿ ಮುಖ ಗುರುತು ತಂತ್ರಜ್ಞಾನದ ಮೂಲಕ ಅನುದಾನಿತ ಹಾಗೂ ಸರ್ಕಾರಿ ಶಾಲೆಗಳಲ್ಲಿ ಈ ಯೋಜನೆ ಜಾರಿಯಾಗುತ್ತೆ. ಒಟ್ಟು 2.16 ಕೋಟಿ ವೆಚ್ಚದಲ್ಲಿ ಈ ಯೋಜನೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಅಳವಡಿಕೆ ಮಾಡಲು ಸರ್ಕಾರ ಮುಂದಾಗಿದು. ಸ್ಥಳೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿ .ಇದೆ ಮೇ ತಿಂಗಳ ಅಂತ್ಯದೋಳಗೆ ಎಐ ಮೊಬೈಲ್ ಹಾಜರಾತಿ ಆಪ್ ಅನುಷ್ಠಾನಕ್ಕೆ ಸೂಚಿಸಿದೆ. ಇನ್ನೂ ಶಾಲಾ ಮಕ್ಕಳಿಗೆ ಅಲ್ಲದೆ ಶಿಕ್ಷಕರಿಗೂ ಈ ಫೇಸಿಯಲ್ ಎಐ ತಂತ್ರಜ್ಞಾನದ ಮೂಲಕ ಹಾಜರಾತಿ ಕಡ್ಡಾಯ ಮಾಡಿದು.ಕಳ್ಳಾಟ ಆಡುವ ಶಿಕ್ಷಕರಿಗೂ ಈ ಯೋಜನೆ ವಿಸ್ತರಣೆ ಮಾಡಿ. ಮಕ್ಕಳಂತೆ ಶಿಕ್ಷಕರು ಕೂಡ ಫೇಸಿಯಲ್ ಅಟೆಂಡೆನ್ಸ್ ಪಾಲಿಸಬೇಕು ಅಂತು ಶಿಕ್ಷಣ ಇಲಾಖೆ ಸೂಚಿಸಿದೆ.