LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
Local News

ಕೆಐಎಡಿಬಿ: ಕೋಟ್ಯಾಂತರ ರೂ. ವಂಚನೆ ಪ್ರಕರಣ ಶೀಘ್ರವೇ ಸಿಐಡಿ ತನಿಖೆ?

ಬಳ್ಳಾರಿ: ಬಳ್ಳಾರಿಯ ಕೆಐಎಡಿಬಿ ವಲಯ ಕಛೇರಿಯಲ್ಲಿ ನಡೆದಿರುವ 16.17 ಕೋಟಿ ರೂಗಳ ವಂಚನೆ ಪ್ರಕರಣದ ತನಿಖೆಯನ್ನು ಅತಿ ಶೀಘ್ರದಲ್ಲಿಯೇ ಸಿಐಡಿಗೆ ವರ್ಗಾಯಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೆಐಎಡಿಬಿ ಕಛೇರಿಯಲ್ಲಿ ಜರುಗಿರುವ ಕೋಟ್ಯಾಂತರ ರೂಗಳ ಅವ್ಯವಹಾರ (ವಂಚನೆ) ಪ್ರಕರಣದಲ್ಲಿ ಪ್ರಮುಖ ಆರೋಪಿ ಸಂತೋಷ್‌ನನ್ನು ಈಗಾಗಲೇ ಬಂಧಿಸಿರುವ ಬಳ್ಳಾರಿಯ ಎಪಿಎಂಸಿ ಪೊಲೀಸರು ಹಾಗೂ ಸಮಗ್ರ ತನಿಖೆ ನಡೆಸಿರುವ ಹಿರಿಯ ಪೊಲೀಸ್ ಅಧಿಕಾರಿಗಳು ಆರೋಪಿಯಿಂದ 1.30ಕೋಟಿ ರೂಗಳ ವಿವಿಧ ಕಂಪನಿಗಳ 8 ಕಾರುಗಳು, 5 ಮೋಟಾರ್ ಬೈಕ್‌ಗಳು, 4 ವಿವಿಧ ಕಂಪನಿಗಳ ಮೊಬೈಲ್‌ಗಳು ಹಾಗೂ ಬಂಗಾರದ ಒಡವೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಅಂತೆಯೇ ವಂಚನೆಗೆ
ಸಂಬ0ಧಿಸಿದ0ತೆ, ವಿವಿಧ ಬ್ಯಾಂಕ್ ಖಾತೆಗಳಲ್ಲಿರುವ ಅಂದಾಜು 30 ಲಕ್ಷ ರೂಗಳ ಹಣವನ್ನು ಫ್ರೀಜ್ ಮಾಡಿಸಲಾಗಿರುತ್ತದೆ ಎಂದು ಎಸ್‌ಪಿ ಡಾ|| ಸುಮನ್ ಡಿ ಪನ್ನೇಕರ್ ಹೇಳಿದ್ದಾರೆ. ಈ ವಂಚನೆಯ ಪ್ರಕರಣದಲ್ಲಿನ ಮೊತ್ತವು 15 ಕೋಟಿ ರೂಗಳಿಗೂ ಅಧಿಕ ಇರುವುದರಿಂದ, ಪೊಲೀಸ್ ಪ್ರಧಾನ ಕಛೇರಿಯ ನಿಯಮಗಳ ಅನುಸಾರ ಪ್ರಕರಣವನ್ನು ಸಿಐಡಿ ತನಿಖೆಗೆ ವರ್ಗಾವಣೆ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಅತಿ ಶೀಘ್ರದಲ್ಲಿಯೇ ಈ ಪ್ರಕರಣವನ್ನು ಸಿಐಡಿ ಬೆಂಗಳೂರು ಘಟಕಕ್ಕೆೆ ವರ್ಗಾಯಿಸಲಾಗುತ್ತದೆ ಎಂದು ತಿಳಿಸಿದ್ದಾರೆ.ಹೊರಗುತ್ತಿಗೆ ನೌಕರನಾಗಿ ಕೆಲಸಕ್ಕೆ ಸೇರಿದ್ದ ಆರೋಪಿ ಸಂತೋಷ್‌ಕುಮಾರ್ ಹಂತ-ಹAತವಾಗಿ ತನ್ನ ಕೈಚಳಕ ತೋರಿ, ನಕಲಿ ಸಹಿಗಳನ್ನು ಮಾಡಿ ಕೋಟ್ಯಾಂತರ ರೂಗಳ ಹಣವನ್ನು ವಿವಿಧ ಖಾತೆಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ವಿವರಿಸಿದ್ದಾರೆ.

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳ: ಒಂದೇ ದಿನದಲ್ಲಿ 4 ಟಿಎಂಸಿ ನೀರು ಸೇರ್ಪಡೆರಾಜಕೀಯಕ್ಕಿಂತ ರಾಜ್ಯದ ಹಿತವೇ ಮೊದಲ ಆದ್ಯತೆ: ಕಾವೇರಿ ಹೋರಾಟದಲ್ಲಿ ಒಂದಾದ ಸರ್ವಪಕ್ಷಗಳು, ಡಿಕೆಶಿ ಸಂದೇಶಬಳ್ಳಾರಿಗೆ ಒಲಿದ ಮಂತ್ರಿಗಿರಿ: ಸಂಪುಟ ವಿಸ್ತರಣೆಯಲ್ಲಿ ಬಿ. ನಾಗೇಂದ್ರ ರೀ-ಎಂಟ್ರಿ!ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಶರಣ್ ಸಿಂಗ್‌ಗೆ ರಿಲೀಫ್ಇಂದು ಸಂಪುಟ ವಿಸ್ತರಣೆಗೆ ಕ್ಷಣಗಣನೆ, ಮಂತ್ರಿ ಸ್ಥಾನ ಭಾಗ್ಯ ಯಾರಿಗೆ ಉಂಟು.. ಯಾರಿಗೆ ಇಲ್ಲ..!ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಸಾವು: ಎಸ್‌ಪಿ ಜಾಹ್ನವಿ ಭೇಟಿ, ತನಿಖೆ ಆರಂಭಕತ್ತೆಬೆನ್ನೂರು ಬಳಿ ಬೋನಿಗೆ ಬಿದ್ದ ಚಿರತೆ; ದರೋಜಿ ಅರಣ್ಯಕ್ಕೆ ಸ್ಥಳಾಂತರಆಗಸ್ಟ್ 8ಕ್ಕೆ ‘ಟಾಕ್ಸಿಕ್’ ಟ್ರೇಲರ್; ಖಡಕ್ ಪೋಸ್ಟರ್‌ನಿಂದಲೇ ಹೈಪ್ ಹೆಚ್ಚಿಸಿದ ಯಶ್ಎಚ್ಚರ! ವಾಟ್ಸಾಪ್‌ಗೆ ಬರುತ್ತಿದೆ ‘ನಕಲಿ ಇನ್‌ಕಮ್ ಟ್ಯಾಕ್ಸ್ ನೋಟಿಸ್’; ಒಂದೇ ಕ್ಲಿಕ್‌ಗೆ ಖಾತೆ ಖಾಲಿಯಾಗಬಹುದುಇಂದು ಮೋದಿ ಮೈಸೂರಿಗೆ ! ವಿವೇಕ ಸ್ಮಾರಕ ಲೋಕಾರ್ಪಣೆ