ಬಳ್ಳಾರಿ: ಬಳ್ಳಾರಿಯಲ್ಲಿ ಹೊಸ ವರ್ಷದ ದಿನ ಜರುಗಿದ ಘರ್ಷಣೆಯ ಬೆನ್ನಿಗೇ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಇಬ್ಬರು ಉನ್ನತ ಅಧಿಕಾರಿಗಳನ್ನು ಬದಲಾವಣೆ ಮಾಡಲಾಗಿದೆ. ಹೊಸಬರನ್ನು ನಿಯೋಜನೆ ಮಾಡಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
ಬಳ್ಳಾರಿ ವಲಯಕ್ಕೆ 2004ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ ಪಿ.ಎಸ್ ಹರ್ಷಾ ಅವರನ್ನು ಹೊಸ ವಲಯ ಪೊಲೀಸ್ ಮಹಾನಿರೀಕ್ಷಕರನ್ನಾಗಿ ನಿಯೋಜಿಸಲಾಗಿದೆ. ಈ ಹುದ್ದೆಯಲ್ಲಿದ್ದ ವರ್ತಿಕಾ ಕಟಿಯಾರ್ ಅವರನ್ನು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಪೊಲೀಸ್ ಉಪ ಮಹಾ ನಿರೀಕ್ಷಕರಾಗಿ ವರ್ಗಾವಣೆ ಮಾಡಲಾಗಿದೆ.
ಬೆಂಗಳೂರಿನ ಗುಪ್ತವಾರ್ತೆ ವಿಭಾಗದ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸುಮನ್ ಪನ್ನೇಕರ್ ಅವರನ್ನು ಬಳ್ಳಾರಿಯ ಹೊಸ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಿಯೋಜಿಸಲಾಗಿದೆ. ಡಿ. 31ರಂದು ಹೊಸದಾಗಿ ಎಸ್‌ಪಿಯಾಗಿದ್ದ ಪವನ್ ನಿಜ್ಜೂರ್ ಅವರನ್ನು ಘರ್ಷಣೆ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿತ್ತು.
ಚಿತ್ರದುರ್ಗದ ಎಸ್‌ಪಿ ರಂಜಿತ್ ಬಂಡಾರು ಅವರನ್ನು ಉಸ್ತುವಾರಿ ಎಸ್‌ಪಿಯಾಗಿ ಮಾಡಲಾಗಿತ್ತು.



