ರಾಯಚೂರು: ಹೊಸ ವರ್ಷದ ಮೊದಲನೇ ದಿನವಾದ ಗುರುವಾರದಂದು ಮಂತ್ರಾಲಯ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠಕ್ಕೆ ಭಕ್ತರ ದಂಡೇ ಆಗಮಿಸಿದ್ದು, ರಾಯರ ದರ್ಶನಕ್ಕೆ ಮುಗಿ ಬಿದ್ದಿದ್ದಾರೆ.
ಗುರುವಾರವೇ 2026ನೇ ವರ್ಷದ ಮೊದಲ ದಿನ ಗುರುವಾರ ಬಂದ ಹಿನ್ನೆಲೆಯಲ್ಲಿ ಪ್ರತಿ ವರ್ಷಕ್ಕಿಂತಲೂ ಈ ವರ್ಷ ಎರಡುಪಟ್ಟು ಭಕ್ತರಿಂದ ರಾಯರ ಮಠ ತುಂಬಿ ತುಳುಕುತ್ತಿದೆ.
ಬೆಳಿಗ್ಗೆ ಐದು ಗಂಟೆಯಿಂದಲೇ ರಾಯರ ವೃಂದಾವನ ದರ್ಶನಕ್ಕೆ ಅನುವು ಮಾಡಿಕೊಡಲಾಗಿ ದೆ. ಮಠದ ಎಲ್ಲಾ ದ್ವಾರಗಳ ಮೂಲಕ ಭಕ್ತರಿಗೆ ಒಳಬರಲು ಅವಕಾಶ ನೀಡಲಾಗಿದೆ.
ಹೊಸ ವರ್ಷದ ಮೊದಲದಿನವಾಗಿದ್ದರಿಂದ ಭಕ್ತರು ತಮ್ಮೆಲ ಕಷ್ಟಗಳನ್ನು ದೂರ ಮಾಡಿ ಸುಖ,ಶಾಂತಿ,ನೆಮ್ಮದಿ ನೀಡುವಂತೆ ಶ್ರೀ ಗುರುರಾಯರಲ್ಲಿ ಭಕ್ತಿಯಿಂದ ಬೇಡಿಕೊಂಡರು.
ಮಂತ್ರಾಲಯ ಮಠದ ಆವರಣದಲ್ಲಿ ಲಕ್ಷಾಂತರ ಭಕ್ತರು ದೇಶದ ವಿವಿಧ ಕಡೆ ಮೂಲೆ ಮೂಲೆಯಿಂದ ಲಕ್ಷಾಂತರ ಭಕ್ತರ ದಂಡು ಹರಿದು ಬಂದಿತ್ತು.
ಭಕ್ತರ ಸಂಖ್ಯೆ ಹೆಚ್ಚಳ ವಾಗಿದ್ದರಿಂದ ಪ್ರಸಾದ ವಿತರಣೆಯಲ್ಲಿ ವ್ಯತಯವುಂಟಾಗಿತ್ತು.
ವರ್ಷದ ಮೊದಲನೇ ದಿನ ರಾಯರ ಮಠಕ್ಕೆ ಹರಿದು ಬಂದ ಭಕ್ತ ಸಾಗರ



