ಐದು ಭಾಷೆಗಳಲ್ಲಿ ತಯಾರಾಗುತ್ತಿದೆ ನಾನು ಮತ್ತು ಗುಂಡ – 2  

ಪೊಯೆಮ್ ಪಿಕ್ಚರ್ಸ್ ಲಾಂಛನದಲ್ಲಿ ಎರಡು ವರ್ಷಗಳ ಹಿಂದೆ ತೆರೆಕಂಡಿದ್ದ ನಾನು ಮತ್ತು ಗುಂಡ ಚಲನಚಿತ್ರವು  ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ನಾಯಕ‌ ಹಾಗೂ ನಾಯಿಯೊಂದರ ನಡುವಿನ ಅವಿನಾಭಾವ ಸಂಬಂಧದ ಕಥೆಯನ್ನು ಹೇಳುವ ಆ ಚಿತ್ರದಲ್ಲಿ ನಟ ಶಿವರಾಜ್ ಕೆ ಆರ್ ಪೇಟೆ ಮತ್ತು ನಾಯಿಯ  ಅದ್ಭುತ ಅಭಿನಯವಿತ್ತು.  ಆ ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ರಘು ಹಾಸನ್ ಈಗ ಅದರ  ಮುಂದುವರೆದ ಭಾಗವಾಗಿ ‘ನಾನು ಮತ್ತು ಗುಂಡ -2’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಕನ್ನಡ, ತೆಲುಗು, ಹಿಂದಿ ಸೇರಿ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿರುವ ಈ ಚಿತ್ರದ  ಮೊದಲ ಪೋಸ್ಟರ್ ಇದೀಗ  ಬಿಡುಗಡೆಯಾಗಿದೆ. ಮೊದಲ ಭಾಗದಲ್ಲಿ ನಾಯಕ ಶಿವರಾಜ್ ಕೆ.ಆರ್.ಪೇಟೆ ಅವರ ಪಾತ್ರ ಮರಣ ಹೊಂದುತ್ತದೆ. ಎರಡನೇ ಭಾಗದಲ್ಲಿ ತನ್ನ ಮಾಲೀಕನನ್ನು ಕಳೆದುಕೊಂಡ ನಾಯಿ ಸಮಾಜದಲ್ಲಿ ಹೇಗೆ ಜೀವನ ನಡೆಸುತ್ತದೆ ಎಂಬುದನ್ನು ಭಾವನಾತ್ಮಕ ಕಥೆಯೊಂದಿಗೆ ಮನರಂಜನಾತ್ಮಕವಾಗಿ  ಹೇಳಲಾಗುತ್ತಿದೆ. ಈಗಾಗಲೇ ಮೈಸೂರು ನಗರದ ಸುತ್ತಮುತ್ತ ಚಿತ್ರದ ಚಿತ್ರೀಕರಣ ಭರದಿಂದ  ನಡೆಯುತ್ತಿದ್ದು, ಶೇ.50 ರಷ್ಟು ಶೂಟಿಂಗ್ ಮುಕ್ತಾಯಗೊಂಡಿದೆ. ಈ ಚಿತ್ರಕ್ಕೆ ಆರ್.ಪಿ.ಪಟ್ನಾಯಕ್   ಸಂಗೀತ ಸಂಯೋಜನೆ,  ರುತ್ವಿಕ್ ಮುರಳೀಧರ್ ಹಿನ್ನೆಲೆ ಸಂಗೀತ, ಕೆ ಎಂ ಪ್ರಕಾಶ್  ಸಂಕಲನ, ತನ್ವಿಕ್ ಜಿ  ಛಾಯಾಗ್ರಹಣ, ರೋಹಿತ್ ರಾಮನ್  ಸಂಭಾಷಣೆ, ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ.

Facebook
Twitter
LinkedIn
WhatsApp
Telegram

Leave a Comment

Your email address will not be published. Required fields are marked *

Translate »
Scroll to Top