ಸಚಿವ ರಾಮಲಿಂಗಾರೆಡ್ಡಿಯವರಿಗೆ ಚಾಲಕರಿಂದ ಸನ್ಮಾನ

ಬೆಂಗಳೂರು : ಚಾಲಕರ 30 ಕ್ಕೂ ಹೆಚ್ಚು ಬೇಡಿಕೆಗಳ ಪೈಕಿ 20 ಬೇಡಿಕೆಗಳನ್ನು ಈಡೇರಿಸಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದಿಂದ ಅದ್ದೂರಿಯಾಗಿ ಸನ್ಮಾನಿಸಲಾಯಿತು.

 

ರಾಮಲಿಂಗಾ ರೆಡ್ಡಿ ಅವರಿಗೆ ಚಾಲಕ ಸಂಘಟನೆಗಳು ಬೆಳ್ಳಿ ಕಿರೀಟ ತೊಡಿಸಿ, ಪುಷ್ಪವೃಷ್ಟಿಗೆರೆದು ಗೌರವಿಸಿದವು. 

ನಗರದ ಪುರಭವನದಲ್ಲಿ ನಡೆದ ಸಮಾರಂಭದಲ್ಲಿ ಹಲವು ಪ್ರಮುಖ ಬೇಡಿಕೆಗಳನ್ನು ಈಡೇರಿಸಿ ಚಾಲಕರ ಮೆಚ್ಚುಗೆಗೆ ಪಾತ್ರರಾದ ಸಚಿವರನ್ನು ಅದ್ದೂರಿಯಾಗಿ ಗೌರವಿಸಲಾಯಿತು.

 

ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್.ವಿ. ಪ್ರಸಾದ್, ಸಾರಿಗೆ ಆಯುಕ್ತ ಎ.ಎಂ. ಯೋಗೀಶ್‌, ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತರಾದ ಉಮಾಶಂಕರ್, ಮಲ್ಲಿಕಾರ್ಜುನ, ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತರಾದ ಜ್ಞಾನೇಂದ್ರ ಕುಮಾರ್, ಖಾಸಗಿ ಸಾರಿಗೆ ಸಂಘಗಳು ಒಕ್ಕೂಟದ ಅಧ್ಯಕ್ಷರಾದ ಎಸ್. ನಟರಾಜ ಶರ್ಮಾ, ರಾಷ್ಟ್ರೀಯ ಚಾಲಕರ ಒಕ್ಕೂಟದ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ, ಸಾರಿಗ ಸಂಘಟನೆಗಳ ಮುಖಂಡರಾದ ರಘು ನಾರಾಯಣಗೌಡ, ನಾರಾಯಣಸ್ವಾಮಿ, ಚಂದ್ರು, ಜಯಣ್ಣ ಮತ್ತಿತರರು ಉಪಸ್ಥಿತರಿದ್ದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top