ಮಂತ್ರಾಲಯ ಗುರು ರಾಯರ ವೈಭವೋತ್ಸವ
ಬಳ್ಳಾರಿ :ಶ್ರೀರಾಘವೇಂದ್ರ ಗುರುಸಾರ್ವಭೌಮರ 403ನೇ ಪಟ್ಟಾಭಿಷೇಕ ಮಹೋತ್ಸವ ಹಾಗೂ 429 ವರ್ಧಂತಿ ಉತ್ಸವದ ಅಂಗವಾಗಿ ಮಾರ್ಚ್ 11ರಿಂದ ಇಂದಿನವರೆಗೂ ರಾಯರ ಮಠದಲ್ಲಿ ರಾಘವೇಂದ್ರ ಗುರು ವೈಭವೋತ್ಸವ ಕಾರ್ಯಕ್ರಮ ನಡೆಯಿತ್ತೀದ್ದು ಬಿಜೆಪಿ ಬಳ್ಳಾರಿ ಲೋಕಸಭಾ ಅಭ್ಯರ್ಥಿ ಬಿ.ಶ್ರೀರಾಮುಲು ಅವರು ಭೇಟಿ ನೀಡಿದರು.
ಬಳ್ಳಾರಿ ನಗರದ ಸತ್ಯನಾರಾಯಣ ಪೇಟೆ ಹಾಗೂ ತೇರು ಬೀದಿಯ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದರು. ಬೆಳ್ಳಿಗ್ಗೆಯಿಂದ ಎರಡು ಮಠದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಭಕ್ತರ ಪಾಲಿನ ಕಾಮಧೇನು ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ಹಾಗೂ ವರ್ಧಂತಿಯ ಗುರು ಭಕ್ತಿ ಉತ್ಸವ ಸಂಪನ್ನಗೊಂಡಿತು. ನಗರದ ಮೂಲೆ ಮೂಲೆಗಳಿಂದ ಬಂದ ಭಕ್ತರು ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಧನ್ಯತೆ ಅನುಭವಿಸಿದರು.
ವರ್ಧಂತಿ ಮಹೋತ್ಸವ ಎಂಬ ಸಂಸ್ಕೃತ ಪದದ ಅರ್ಥ ಹುಟ್ಟುಹಬ್ಬ. ಹೀಗಾಗಿ ಮಂತ್ರಾಲಯ ಮಠದಲ್ಲೂ ರಾಯರ ಹುಟ್ಟು ಹಬ್ಬವನ್ನು ವರ್ಧಂತಿ ಉತ್ಸವವನ್ನಾಗಿ ಆಚರಿಸಲಾಯ್ತು. ಶ್ರೀ ಮಠದಲ್ಲಿ ಹಲವು ಕಾರ್ಯಕ್ರಮಗಳು ಜರುಗಿದವು.ಮೊದಲಿಂದಲೂ ನಾನು ರಾಯರ ಭಕ್ತ ಹೀಗಾಗಿ ರಾಯರ ವರ್ಧಂತಿ ಮಹೋತ್ಸವದಲ್ಲಿ ಭಾಗಿಯಾಗಿದ್ದಾಗಿ ಬಿ.ಶ್ರೀರಾಮುಲು ಅವರು ಹೇಳಿದರು.
ರಾಯರ 429 ನೇ ಹುಟ್ಟುಹಬ್ಬ ನಿಮಿತ್ತ ಮಠದಲ್ಲಿ ವಿಶೇಷ ಕಾರ್ಯಕ್ರಮ ಜರುಗಿದವು.ಎಂದಿನಂತೆ ರಾಘವೇಂದ್ರ ಸ್ವಾಮಿಗಳ ಮೂಲ ವೃಂದಾಂವನಕ್ಕೆ ವಿಶೇಷ ಪೂಜೆ, ಪಂಚಾಮೃತಾಭಿಷೇಕ ಮಾಡಲಾಯಿತು. ಒಟ್ಟಾರೆ ಭಕ್ತರ ಪಾಲಿನ ಕಾಮಧೇನು ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ಹಾಗೂ ವರ್ಧಂತಿಯ ಗುರು ಭಕ್ತಿ ಉತ್ಸವ ಸಂಪನ್ನಗೊಂಡಿತು.
ಈ ಸಂಧರ್ಭದಲ್ಲಿ ಮಾಜಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಾಲಣ್ಣ ಉದ್ಯಮಿ ತಿಮ್ಮಪ್ಪ ಸೇರಿದಂತೆ ಹಲವಾರು ಭಾಗಿಯಾಗಿದ್ದರು.