ಸದಾಶಿವ ಆಯೋಗ ವರದಿ ಜಾರಿಗೆ ವಿವಿಧ ದಲಿತಪರ ಸಂಘಟನೆಗಳಿಂದ ಫ್ರೀಡಂ ಪಾರ್ಕ್‌ ನಲ್ಲಿ ಬೃಹತ್‌ ಪ್ರತಿಭಟನೆ

ಬೆಂಗಳೂರು: ಪರಿಶಿಷ್ಟರ ಒಳಮೀಸಲಾತಿ ಕುರಿತ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಪ್ರಸಕ್ತ ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ವಿವಿಧ ದಲಿತಪರ ಸಂಘಟನೆಗಳು ಫ್ರೀಡಂ ಪಾರ್ಕ್‌ ನಲ್ಲಿ ನಲ್ಲಿ ಪ್ರತಿಭಟನೆ ನಡೆಸಿದವು.

 

ಅಧಿವೇಶನದಲ್ಲಿ ನಿರ್ಣಯಕೈಗೊಂಡು ಕೇಂದ್ರ ಸರ್ಕಾರಕ್ಕೆ ವರದಿ ಜಾರಿಗಾಗಿ ಶಿಫಾರಸ್ಸು ಮಾಡಬೇಕು. ಚುನಾವಣೆಗೆ ಮುನ್ನ ನೀಡಿದ್ದ ಭರವಸೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದವು.  

ಸರ್ಕಾರ ಸಾಧನೆಯನ್ನು ಕೋಟ್ಯಾಂತರ ಜನತೆಗೆ ತಲುಪಿಸುವಲ್ಲಿ ಯಶಸ್ವಿಯಾಗಿರುವುದು ಸ್ವಾಗತಾರ್ಹ. ಇದೇ ರೀತಿ ಮೀಸಲಾತಿ ಗ್ಯಾರೆಂಟಿಯನ್ನು ಜಾರಿಗೊಳಿಸಬೇಕು. ಸರ್ಕಾರ ಬಿಡುವಿಲ್ಲದ ಕಾರ್ಯಚಟುವಟಿಕೆಗಳನ್ನು ಸಮುದಾಯ ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳುವ ಸಂವೇದನೆ ಹೊಂದಿವೆ. ಒಂದೂವರೆ ಕೋಟಿ ಜನಸಂಖ್ಯೆಯುಳ್ಳ ಪರಿಶಿಷ್ಟ ಜಾತಿಗಳ ಬಹುದಿನಗಳ ಪ್ರಮುಖ ಬೇಡಿಕೆಯಾದ ” ಒಳಮೀಸಲಾತಿ ಗ್ಯಾರಂಟಿ:ಯನ್ನು ಮುಂದಿನ ಅಧಿವೇಶನದಲ್ಲಿ ಖಾತರಿಪಡಿಸಿ ನುಡಿದಂತೆ ನಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದವು.

ಪ್ರತಿಭಟನಯಲ್ಲಿ ಹಿರಿಯೂರಿನ ಕೋಡಿಹಳ್ಳಿ ಬೃಹನ್ಮಠದ ಷಡಕ್ಷರಿಮುನಿ ಸ್ವಾಮೀಜಿ, ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ, ಹಿರಿಯ ನ್ಯಾಯವಾದಿ ಸಿ.ಎಚ್‌. ದ್ವಾರಕನಾಥ್, ಸಾಮಾಜಿಕ ಕಾರ್ಯಕರ್ತರಾದ ಎಸ್.ಸಿ. ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ಗುರುರಾಜ್‌ ಬೀಡಿಕ‌, ಮುಡನೂರು ಚಿನ್ನಸ್ವಾಮಿ, ಬಿ. ಗೋಪಾಲ್‌, ಮಾರಸಂದ್ರ ಮುನಿಯಪ್ಪ, ಡಾ| ಎನ್. ಮೂರ್ತಿ, ಎನ್. ವೆಂಕಟೇಶ್, ಕೆ. ರಾಮಯ್ಯ, ಕೆ.ದೊರೆರಾಜು, ಎನ್.ಮುನಿಸ್ವಾಮಿ, ಸಿ.ಎಮ್. ಮುನಿಯಪ್ಪ, ರುದ್ರಸ್ವಾಮಿ, ಇಂಧೂದರ ಹೊನ್ನಾಪುರ, ಮಾಮುನಿರಾಜು, ಪ್ರೊಗೊವಿಂದಯ್ಯ, ವೀರಸಂಗಯ್ಯ, ಎ.  ವೇಣುಮೌರ್ಯ ಮತ್ತಿತರರು ಪಾಲ್ಗೊಂಡಿದ್ದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top