ಲಾಲ್ ಭಾಗ್ ನಲ್ಲಿ ವಾಕರ್ಸ್ ಬಳಿ ಲೋಕಸಭಾ ಅಭ್ಯರ್ಥಿ  ಸೌಮ್ಯರೆಡ್ಡಿ ಮತಯಾಚನೆ

ಬೆಂಗಳೂರು : ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸೌಮ್ಯರೆಡ್ಡಿರವರು ಲಾಲ್ ಭಾಗ್ ಅವರಣದಲ್ಲಿ ಮತಯಾಚನೆ ಮಾಡಿದರು, ಇದೇ ಸಂದರ್ಭದಲ್ಲಿ ಬಿಜೆಪಿ ಮಹಿಳಾ ತೇಜಸ್ವಿನಿ ಆನಂತ್ ಕುಮಾರ್ ರವರು ಮುಖಾಮುಖಿಯಾದರು

ಆಡಳಿತ ಪಕ್ಷದ ಮಾಜಿ ನಾಯಕ ಎನ್.ನಾಗರಾಜು ಮತ್ತು ಮಮತಾ ದೇವರಾಜ್ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು

ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಂವಿಧಾನ ಪ್ರತಿಯೊಬ್ಬ ನಾಗರಿಕರಿಗೆ ಮತದಾನದ ಹಕ್ಕು ನೀಡಿದೆ. ಚುನಾವಣೆ ಹಬ್ಬದಲ್ಲಿ ಮತದಾನ ಮಾಡುವ ಪವಿತ್ರ ಕಾರ್ಯದಲ್ಲಿ ಪ್ರತಿಯೊಬ್ಬ ಮತದಾರರು ತಪ್ಪದೆ ಮತದಾನ ಮಾಡಬೇಕು. ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ ನೀಡಿದ್ದ 5 ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತಂದಿದೆ. ಶಕ್ತಿ ಯೋಜನೆಯಿಂದ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ, ಮನೆಯ ಯಾಜಮಾನಿಗೆ 2000ಸಾವಿರ ಸಹಾಯಧನ ಮತ್ತು ಅನ್ನಭಾಗ್ಯ , 200ಯೂನಿಟ್ ವಿದ್ಯುತ್ ಉಚಿತ, ಯುವನಿಧಿ ನಿರುದ್ಯೋಗ ಯುವ ಸಮೂಹಕ್ಕೆ ಸಹಾಯಧನ. ರಾಜ್ಯದ ಪ್ರತಿ ಕುಟಂಬಕ್ಕೆ ಗ್ಯಾರಂಟಿ ಯೋಜನೆ ತಲುಪಿದೆ. ಅಭಿವೃದ್ದಿಯೆ ಸಂಕೇತವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಮತಯಾಚನೆ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸೌಮ್ಯರೆಡ್ಡಿರವರು ಹೇಳಿದರು

Facebook
Twitter
LinkedIn
Telegram
Email
Print
WhatsApp

Leave a Comment

Your email address will not be published. Required fields are marked *

Translate »
Scroll to Top