ಆರೋಗ್ಯ, ಸಂತೋಷ ಮತ್ತು ವಿಶ್ವಶಾಂತಿಗಾಗಿ ನಗೆ ಯೋಗ ಅಗತ್ಯ – ರಂಗ ಲಕ್ಷ್ಮೀ ಶ್ರೀನಿವಾಸ್‌

ಬೆಂಗಳೂರು : ನಗೆ ಯೋಗ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಪೂರಕ ಎಂದು ನಗೆ ಯೋಗದಲ್ಲಿ ಗಿನ್ನಿಸ್‌ ದಾಖಲೆ ನಿರ್ಮಿಸಿರುವ ರಂಗ ಲಕ್ಷ್ಮಿ ಶ್ರೀನಿವಾಸ್‌ ಹೇಳಿದ್ದಾರೆ.

 

ಏಪ್ರಿಲ್‌ 1 ರ ಮುನ್ನಾ ದಿನವಾದ ಇಂದು ಶ್ರೀನಗರದಲ್ಲಿ ಕ್ಯಾಮ್ಸ್‌ ಕರ್ನಾಟಕ, ದಿ ಗ್ರೀನ್‌ ಇನೋವೇಟರ್ಸ್‌, ಬ್ರಾಹ್ಮಿ ಮಹಿಳಾ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಗೆ ಯೋಗ ಆರೋಗ್ಯಕ್ಕಾಗಿ, ಸಂತೋಷಕ್ಕಾಗಿ ಮತ್ತು ವಿಶ್ವಶಾಂತಿಗಾಗಿ ಅತ್ಯಂತ ಅಗತ್ಯವಾಗಿದೆ ಎಂದರು.

ಇಂದಿನ ಯುಗದಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳಿಂದ ಶಿಕ್ಷಕರು ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳು, ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಯಿತು.

 

ಕಾರ್ಯಕ್ರಮದಲ್ಲಿ ವಿದ್ಯಾಮಣಿ ಪುಟ್ಟಣ್ಣ, ಸಮಾಜ ಸೇವಕರಾದ ಉಮಾದೇವಿ ಅವರನ್ನು ಅಭಿನಂದಿಸಲಾಯಿತು. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Facebook
Twitter
LinkedIn
Mix
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top