ಉಟಕನೂರು ವಲಯಕ್ಕೆ ನೂತನ ಪ್ರಭಾರಿ ಸಿ ಆರ್ಪಿಯಾಗಿ ಲಕ್ಷ್ಮೀ ಕಾಂತ್ ಆಯ್ಕೆ

ಮಾನ್ವಿ: ತಾಲ್ಲೂಕಿನ ಉಟಕನೂರು ವಲಯಕ್ಕೆ ನೂತನ ಪ್ರಭಾರಿ ಸಿಆರ್ಪಿಯಾಗಿ ಲಕ್ಷ್ಮೀಕಾಂತ್ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ನೂತನ ಪ್ರಭಾರಿ ಬಿಆರ್ಪಿಯಾಗಿ ಆಯ್ಕೆಯಾಗಿರುವ ಸಿದ್ದಲಿಂಗಯ್ಯ ಸ್ವಾಮಿ ಮಾತನಾಡಿ ಉಟಕನೂರು ವಲಯಕ್ಕೆ ಮೊದಲು ನಾನು ಸಿಆರ್ಪಿಯಾಗಿದ್ದೆ, ಆ ಸಂದರ್ಭದಲ್ಲಿ ಎಲ್ಲಾ ಸಹ ಶಿಕ್ಷಕರು ಮತ್ತು ಎಲ್ಲಾ ಮುಖ್ಯಗುರುಗಳು ಸಹಕಾರ ಮಾಡಿದ್ದಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು ತಿಳಿಸಿದ್ದಲ್ಲದೇ ಹೊಸದಾಗಿ ನೇಮಕವಾಗಿರುವ ಪ್ರಭಾರಿ ಸಿಆರ್ಪಿಯಾಗಿ ಆಯ್ಕೆಯಾಗಿರುವ ಲಕ್ಷ್ಮೀಕಾಂತ ಸರ್ ರವರಿಗೂ ಇಲಾಖೆಯ ಎಲ್ಲಾ ಕೆಲಸಗಳನ್ನು ತ್ವರಿತ ಗತಿಯಲ್ಲಿ ಮುಗಿಸಿ ಸಹಕಾರ ಮಾಡಬೇಕೆಂದು ಕೋರಿದರು.

ಈ ಸಂದರ್ಭದಲ್ಲಿ ಉಟಕನೂರು ವಲಯದ ತಡಕಲ್, ದೋತರಬಂಡಿ, ಉಟಕನೂರು, ಬೆಳವಾಟ,ಮರಕಂದನ್ನಿ, ಹಾಗೂ ಸುಂಕನೂರು ಶಾಲೆಯ ಮುಖ್ಯಗರುಗಳು ಸೇರಿಕೊಂಡು ನೂತನವಾಗಿ ಆಯ್ಕೆಯಾಗಿರುವ ಪ್ರಭಾರಿ ಬಿಆರ್ಪಿ, ಹಾಗೂ ಪ್ರಭಾರಿ ಸಿಆರ್ಪಿಯಾಗಿ ಆಯ್ಕೆಯಾಗಿರುವ ಸಿದ್ದಲಿಂಗಯ್ಯ ಸ್ವಾಮಿ ಹಾಗೂ ಲಕ್ಷ್ಮೀ ಕಾಂತ್ ಇವರಿಗೆ ಅಭಿನಂದನೆಗಳನ್ನು ಸನ್ಮಾನ ಮಾಡುವುದರ ಮೂಲಕ ಅಭಿನಂದಿಸಿದರು. ಈ ಸಂದರ್ಭದಲ್ಲಿ ತಡಕಲ್ ಮುಖ್ಯಗುರುಗಳಾದ ನೀಲಕಂಠ, ಸುಂಕನೂರು ಮುಖ್ಯಗುರುಗಳಾದ ಪ್ರದೀಪ್ ತಡಕಲ್ ಉಧ್ಬಾಳ್ ಮುಖ್ಯಗುರುಗಳಾದ ಗಣೇಶ, ಸೇರಿದಂತೆ ಅನೇಕರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top