ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಮುದ್ದಲಗುಂದಿ ಗ್ರಾಮದ ನಾಗರಾಜ. ಚಿತ್ರಕಲಾವಿದರಾದ ಇವರು ಹಲವು ವರ್ಷಗಳಿಂದ ಚಿತ್ರ ಬರೆಯುವ ಹವ್ಯಾಸ ಮೂಡಿಸಿಕೊಂಡು ಇಂದು ಅದನ್ನೆ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಮುಲತ ಬಡತನ ಕುಟುಂಬದಲ್ಲಿ ಅರಳಿದ ಕಲಾವಿದ ನಾಗರಾಜ.ತಂದೆ ದೊಡ್ಡಪ್ಪ ತಾಯಿ ಹೊಳೆಯಮ್ಮ ಇವರ 4ನೇ ಮಗ ನಾಗರಾಜ ಶಿಕ್ಷಣ ಪಡೆದು, ವೃತ್ತಿ ಜೀವನದಲ್ಲಿ ಬೆಂಗಳೂರಲ್ಲಿ ನೆಲೆಸಿದ್ದಾರೆ.

ಇವರಿಗೆ 2017-18ನೇ ಸಾಲಿನಲ್ಲಿ ಸೋಶಿಯಲ್ ಮೀಡಿಯಾದ ಶೇರ್ಚಾಟ್ ಚಾಂಪಿಯನ್ ಪ್ರಶಸ್ತಿ ಲಭಿಸಿತ್ತು. ಹಾಗೂ ಹೈಬ್ರಿಡ್ ನ್ಯೂಸ್ ಕನ್ನಡ ಸುದ್ದಿ ವಾಹಿನಿ ಕಡೆಯಿಂದ ಹೆಮ್ಮೆಯ ಕನ್ನಡಿಗ ಪ್ರಶಸ್ತಿ- 2021(ಚಿತ್ರಕಲೆ ) ಪಡೆದ ಹೆಮ್ಮೆಯ ಕಲಾವಿದ. ಮೊಬೈಲ್ ಫೋಟೋಗ್ರಫಿ ಮೂಲಕ ಗಮನ ಸೆಳೆದ ಇವರು ಇಂದು ದೆಹಲಿಯಲ್ಲಿ ನಡೆಯಲಿರುವ ದೆಹಲಿ ಕನ್ನಡ ಕಲಾ ಸಮ್ಮೇಳನಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.ಇವರು ಬಿಡಿಸಿದ ಜಾನಪದ ಶೈಲಿಯ ಡೊಳ್ಳು ಬಾರಿಸುವ ಚಿತ್ರವು ರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗೊಂಡು ನ್ಯಾಶನಲ್ ಐಕಾನಿಕ್ ಅವಾರ್ಡ ಪಡೆಯುತ್ತಿರುವುದು ಸಂತಸದ ವಿಷಯ.ಇದೆ ಮಾ.೨೦ ರಂದು ದೆಹಲಿಯಲ್ಲಿ ಹೈಬ್ರೀಡ್ ನ್ಯೂಸ್ ಹಾಗೂ ಕಲಾಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿದ ದೆಹಲಿ ಕನ್ನಡ ಸಮ್ಮೇಳನದಲ್ಲಿ ಚಿತ್ರ ಕಲಾವಿದರಾದ ನಾಗರಾಜ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಡ್ರಾಯಿಂಗ್ ,ಪೇಂಟಿಂಗ್ ಇವರ ಹವ್ಯಾಸವಾಗಿದೆ ಡಿಪ್ಲೋಮ (civil engineer )ಇಳಕಲ್ನಲ್ಲಿ ವ್ಯಾಸಂಗ ಮುಗಿಸಿದ್ದಾರೆ. ಸುದ್ದಿ ತಿಳಿದ ಕುಟುಂಬಸ್ಥರು ಹಾಗೂ ಸ್ನೇಹ ಬಳಗ ಹರ್ಷ ವ್ಯಕ್ತ ಪಡಿಸಿದ್ದಾರೆ.
