ಈ ವರ್ಷ 68 ಮಂದಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಬೆಂಗಳೂರು:  ಇಸ್ರೋ ಮುಖ್ಯಸ್ಥ ಸೋಮನಾಥ್ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡಲೇಖಕಿ ಕೆ. ಷರೀಫಾ, ಗಾಲ್ಫ್ ಆಟಗಾರ್ತಿ ಆದಿತಿ ಅಶೋಕ್ ಸೇರಿದಂತೆ 68 ಮಂದಿಗೆ ಈ ಬಾರಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಯ್ಕೆಯಲ್ಲಿ ಎಲ್ಲ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಲಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 68 ಸಾಧಕರು ಹಾಗೂ ಕರ್ನಾಟಕ ಸಂಭ್ರಮ-50ರ ಪ್ರಯುಕ್ತ ವಿಶೇಷವಾಗಿ 10 ಸಂಸ್ಥೆಗಳಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯನ್ನು ಸರ್ಕಾರ ಘೋಷಿಸಿದೆ.

 

100 ವರ್ಷ ದಾಟಿದ ಇಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಒಬ್ಬರು ದಾವಣಗೆರೆ ಹಾಗೂ ಒಬ್ಬರು ಉತ್ತರ ಕನ್ನಡ ಜಿಲ್ಲೆಯವರು. 13 ಮಹಿಳೆಯರು ಮತ್ತು 54 ಪುರುಷರು ಹಾಗೂ ಒಬ್ಬರು ಮಂಗಳಮುಖಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಗೆ ಆಯ್ಕೆಯಾದವರಿಗೆ ರೂ. ಲಕ್ಷ ನಗದು ಹಾಗೂ 25 ಗ್ರಾಂ ಚಿನ್ನದ ಪದಕ ವಿತರಿಸಲಾಗುವುದು ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.

ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪತ್ರಿಕಾ ವಿತರಕರನ್ನೂ ರಾಜ್ಯೋತ್ಸವ ಪ್ರಶಸ್ತಿಗಾಗಿ ಪರಿಗಣಿಸಿ ಗೌರವಿಸಲಾಗಿದೆ. ಮಾಧ್ಯಮ ಕ್ಷೇತ್ರದ ಅವಿಭಾಜ್ಯ ಅಂಗವಾಗಿರುವ ಪತ್ರಿಕಾ ವಿತರಕಾ ಸಮುದಾಯದ ಪ್ರತಿನಿಧಿಮೈಸೂರಿನ ಜವರಪ್ಪ ಅವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡಿವಿತರಕ ಸಮುದಾಯವನ್ನುಈ ಸಮುದಾಯದ ಕಾರ್ಯಕ್ಷಮತೆ ಮತ್ತು ಶ್ರಮವನ್ನು ರಾಜ್ಯ ಸರ್ಕಾರ ಮತ್ತು ಆಯ್ಕೆ ಸಮಿತಿ ಗುರುತಿಸಿಗೌರವಿಸಿದೆ ಎಂದರು.

ರಂಗಭೂಮಿಯಲ್ಲಿ ಚಿದಂಬರರಾವ್ ಜಂಬೆಯಕ್ಷಗಾನದಲ್ಲಿ ಕೆ.ಲೀಲಾವತಿ ಬೈಪಾಡಿತ್ತಾಯಸಿನಿಮಾ ಕ್ಷೇತ್ರದಲ್ಲಿ ಡಿಂಗ್ರಿ ನಾಗರಾಜ್ ಹಾಗೂ ಬ್ಯಾಂಕ್ ಜನಾರ್ಧನಸಾಹಿತ್ಯ ಕ್ಷೇತ್ರದಲ್ಲಿ ಪ್ರೊ. ಸಿ.ನಾಗಣ್ಣಸುಬ್ಬು ಹೊಲೆಯಾರ್ಪತ್ರಿಕೋದ್ಯಮದಲ್ಲಿ ದಿನೇಶ್ ಅಮೀನ್‌ಮಟ್ಟುಮಾಯಾ ಶರ್ಮ ಸೇರಿದಂತೆ 68 ಸಾಧಕರಿಗೆ ಪ್ರಶಸ್ತಿ ಪ್ರಕಟಿಸಲಾಗಿದೆ.

ಸರ್ಕಾರಿ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಎರಡು ಎಕರೆ ಭೂಮಿ ದಾನ ನೀಡಿದ್ದ ತಾಲ್ಲೂಕಿನ ಕುಣಿಕೇರಿ ಗ್ರಾಮದ ಹುಚ್ಚಮ್ಮ ಬಸಪ್ಪ ಚೌದ್ರಿ ಅವರಿಗೆ ಅರ್ಜಿ ಹಾಕದಿದ್ದರೂ ಸರ್ಕಾರ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ.

 

ಶಿವಮೊಗ್ಗದ ಕರ್ನಾಟಕ ಸಂಘಬೆಂಗಳೂರಿನ ಮಿಥಿಕ್ ಸೊಸೈಟಿದಾವಣಗೆರೆಯ ಮೌಲಾನಾ ಆಜಾದ್ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘ ಸೇರಿದಂತೆ ಹತ್ತು ಸಂಸ್ಥೆಗಳಿಗೆ ಪ್ರಶಸ್ತಿ ಘೋಷಣೆಯಾಗಿದೆ.

ಪ್ರಶಸ್ತಿ ಪಟ್ಟಿ:
ಸಂಗೀತ/ನೃತ್ಯ ಕ್ಷೇತ್ರ: ಡಾ. ನಯನ ಎಸ್ ಮೋರೆನೀಲಾ ಎಂ ಕೊಡ್ಲಿಶಬ್ಬೀರ್ ಅಹಮದ್ಡಾ. ಎಸ್ ಬಾಳೇಶ ಭಜ್ರಂತಿ ಅವರಿಗೆ ಪ್ರಶಸ್ತಿ ಲಭಿಸಿದೆ.

ಚಲನಚಿತ್ರ ಕ್ಷೇತ್ರ: ಡಿಂಗ್ರಿ ನಾಗರಾಜಬಿ. ಜನಾರ್ದನ (ಬ್ಯಾಂಕ್ ಜನಾರ್ದನ).

ರಂಗಭೂಮಿ ಕ್ಷೇತ್ರ: ಎಜಿ ಚಿದಂಬರ ರಾವ್ ಜಂಬೆಪಿ ಗಂಗಾಧರ ಸ್ವಾಮಿಹೆಚ್‌ಬಿ ಸರೋಜಮ್ಮತಯ್ಯಬಖಾನ್ ಎಂ ಇನಾಮದಾರವಿಶ್ವನಾಥ್ ವಂಶಾಕೃತ ಮಠಪಿ ತಿಪ್ಪೇಸ್ವಾಮಿ.

ಶಿಲ್ಪಕಲೆ/ ಚಿತ್ರಕಲೆ/ ಕರಕುಶಲ ಕ್ಷೇತ್ರ: ಟಿ ಶಿವಶಂಕರ್ಕಾಳಪ್ಪ ವಿಶ್ವಕರ್ಮಮಾರ್ಥಾ ಜಾಕಿಮೋವಿಚ್ ಮತ್ತು ಪಿ ಗೌರಯ್ಯ.

ಯಕ್ಷಗಾನ/ಬಯಲಾಟ ಕ್ಷೇತ್ರ: ಅರ್ಗೋಡು ಮೋಹನದಾಸ್ ಶೆಣೈಕೆ ಲೀಲಾವತಿ ಬೈಪಾಡಿತ್ತಾಯಕೇಶಪ್ಪ ಶಿಳ್ಳಿಕ್ಯಾತರದಳವಾಯಿ ಸಿದ್ದಪ್ಪ (ಹಂದಿಜೋಗಿ).

ಜಾನಪದ ಕ್ಷೇತ್ರ: ಹುಸೇನಬಿ ಬುಡೆನ್ ಸಾಬ್ ಸಿದ್ದಿಶಿವಂಗಿ ಶಣ್ಮರಿಮಹದೇವುನರಸಪ್ಪಾಶಕುಂತಲಾ ದೇವಲಾನಾಯಕಹೆಚ್‌ಕೆ ಕಾರಮಂಚಪ್ಪಶಂಭು ಬಳಿಗಾರವಿಭೂತಿ ಗುಂಡಪ್ಪಚೌಡಮ್ಮ.

ಸಮಾಜಸೇವೆ ಕ್ಷೇತ್ರ: ಹುಚ್ಚಮ್ಮ ಬಸಪ್ಪ ಚೌದ್ರಿಚಾರ್ಮಾಡಿ ಹಸನಬ್ಬರೂಪಾ ನಾಯಕ್ನಿಜಗುಣಾನಂದ ಮಹಾಸ್ವಾಮಿಗಳುನಾಗರಾಜು ಜಿ.

ಆಡಳಿತ ಕ್ಷೇತ್ರ: ಜಿವಿ ಬಲರಾಮ್

ವೈದ್ಯಕೀಯ ಕ್ಷೇತ್ರ: ಡಾ. ಸಿ ರಾಮಚಂದ್ರಡಾ. ಪ್ರಶಾಂತ್ ಶೆಟ್ಟಿ.

ಸಾಹಿತ್ಯ ಕ್ಷೇತ್ರ: ಪ್ರೊ. ಸಿ ನಾಗಣ್ಣಸುಬ್ಬು ಹೊಲೆಯಾರ್ (ಹೆಚ್‌ಕೆ ಸುಬ್ಬಯ್ಯ)ಸತೀಶ್ ಕುಲಕರ್ಣಿಲಕ್ಷ್ಮಿಪತಿ ಕೋಲಾರಪರಪ್ಪ ಗುರುಪಾದಪ್ಪ ಸಿದ್ದಾಪುರಡಾ. ಕೆ ಷರೀಫಾ.

ಶಿಕ್ಷಣ ಕ್ಷೇತ್ರ: ರಾಮಪ್ಪ (ರಾಮಣ್ಣ) ಹವಳೆಕೆ ಚಂದ್ರಶೇಖರ್ಕೆಟಿ ಚಂದು.

ಕ್ರೀಡಾ ಕ್ಷೇತ್ರ: ದಿವ್ಯ ಟಿಎಸ್ಅದಿತಿ ಅಶೋಕ್ಅಶೋಕ್ ಗದಿಗೆಪ್ಪ ಏಣಗಿ.

ನ್ಯಾಯಾಂಗ ಕ್ಷೇತ್ರ: ವಿ ಗೋಪಾಲಗೌಡ.

ಕೃಷಿ-ಪರಿಸರ ಕ್ಷೇತ್ರ: ಸೋಮನಾಥರೆಡ್ಡಿ ಪೂರ್ಮಾದ್ಯಾವನಗೌಡ ಟಿ. ಪಾಟೀಲಶಿವರೆಡ್ಡಿ ಹನುಮರೆಡ್ಡಿ ವಾಸನ.

ಸಂಕೀರ್ಣ ಕ್ಷೇತ್ರ: ಎಎಂ ಮದರಿಹಾಜಿ ಅಬ್ದುಲ್ಲಾ ಪರ್ಕಳಮಿಮಿಕ್ರಿ ದಯಾನಂದ್ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ಕೊಡನ ಪೂವಯ್ಯ ಕಾರ್ಯಪ್ಪ.

ಮಾಧ್ಯಮ ಕ್ಷೇತ್ರ: ದಿನೇಶ ಅಮೀನ್‌ಮಟ್ಟುಜವರಪ್ಪಮಾಯಾ ಶರ್ಮರಫೀ ಭಂಡಾರ.

ವಿಜ್ಞಾನ/ ತಂತ್ರಜ್ಞಾನ ಕ್ಷೇತ್ರ: ಎಸ್. ಸೋಮನಾಥ್ ಶ್ರೀಧರ್ ಪನಿಕರ್ಪ್ರೊ. ಗೋಪಾಲನ್ ಜಗದೀಶ್

ಹೊರನಾಡು/ ಹೊರದೇಶ ಕ್ಷೇತ್ರ: ಸೀತಾರಾಮ ಅಯ್ಯಂಗಾರ್ದೀಪಕ್ ಶೆಟ್ಟಿಶಶಿಕಿರಣ್ ಶೆಟ್ಟಿ.

ಸ್ವಾತಂತ್ರ್ಯ ಹೋರಾಟಗಾರ ಕ್ಷೇತ್ರ: ಪುಟ್ಟಸ್ವಾಮಿ ಗೌಡ.

 

10 ಸಂಘ ಸಂಸ್ಥೆಗಳಿಗೆ ಪ್ರಶಸ್ತಿ:
1. ಕರ್ನಾಟಕ ಸಂಘ
2. 
ಬಿಎನ್ ಶ್ರೀರಾಮ ಪುಸ್ತಕ ಪ್ರಕಾಶನ
3. 
ಮಿಥಿಕ್ ಸೊಸೈಟಿ
4. 
ಕನಾಟಕ ಸಾಹಿತ್ಯ ಸಂಘ
5. 
ಮೌಲಾನಾ ಅಜಾದ್ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘ(ರಿ)
6. 
ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ
7. 
ಸ್ನೇಹರಂಗ ಹವ್ಯಾಸಿ ಕಲಾ ಸಂಸ್ಥೆ
8. 
ಚಿಣ್ಣರ ಬಿಂಬ
9. 
ಮಾರುತಿ ಜನಸೇವಾ ಸಂಘ
10. 
ವಿದ್ಯಾದಾನ ಸಮಿತಿ

Facebook
Twitter
LinkedIn
WhatsApp
Email
Print
Telegram
Tumblr

Leave a Comment

Your email address will not be published. Required fields are marked *

Translate »
Scroll to Top