ಜೂ.17: ಬಿಐಟಿಎಂ ಕಾಲೇಜಲ್ಲಿ ತಾಂತ್ರಿಕ ಚರ್ಚಾ ಕಾರ್ಯಕ್ರಮ

ಬಳ್ಳಾರಿ: ಎಫ್ಪಿಜಿಎ ಆಧಾರಿತ ಯಂತ್ರ ಕಲಿಕೆಯನ್ನು ಹೆಚ್ಚಿಸುವುದು: ಅತ್ಯುತ್ತಮ ಕಾರ್ಯಕ್ಷಮತೆಗಾಗಿ ಸವಾಲುಗಳನ್ನು ಮೀರುವುದು (Enhancing FPGA based Machine Learning: Overcoming Challenges for Optimal Performance) ಎಂಬ ವಿಷಯದ ಕುರಿತು ತಾಂತ್ರಿಕ ಚರ್ಚೆಯನ್ನು ನಡೆಸಲು ಡಾ. ಲುಕಾ ಡಿ ನುಂಜಿಯೊ, ಪ್ರೊಫೆಸರ್, ರೋಮ್ ವಿಶ್ವವಿದ್ಯಾಲಯ ಟೊರ್ ವೆರ್ಗಾಟಾ, ರೋಮ್ ಇಟಲಿ ಮತ್ತು ಡಾ. ಪರಮೇಶಾಚಾರಿ ಬಿ ಡಿ, ಎಸ್ ಎ ಸಿ ಸಹ-ಅಧ್ಯಕ್ಷ, ಐ ಇ ಇ ಇ ಬೆಂಗಳೂರು ವಿಭಾಗ ಇವರು ಬಳ್ಳಾರಿಯ ಬಿಐಟಿಎಂಗೆ ಶನಿವಾರ 17ನೇ ಜೂನ್ 2023 ರಂದು ಆಗಮಿಸುತ್ತಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯರಾದ ಡಾ. ಯಡವಳ್ಳಿ ಬಸವರಾಜ ತಿಳಿಸಿದ್ದಾರೆ

ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಹೊಸ ಸಹಯೋಗಗಳನ್ನು ಸ್ಥಾಪಿಸಲು ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದ ವಿವಿಧ ಕ್ಷೇತ್ರಗಳಲ್ಲಿನ ಇತ್ತೀಚಿನ ಪ್ರಗತಿಗಳು ಮತ್ತು ಆವಿಷ್ಕಾರಗಳ ಕುರಿತು ಜ್ಞಾನ ಮತ್ತು ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳಲು ಪ್ರಪಂಚದಾದ್ಯಂತದ ಸಂಶೋಧಕರು, ಎಂಜಿನಿಯರ್‍ಗಳು, ಶಿಕ್ಷಣ ತಜ್ಞರು ಮತ್ತು ಉದ್ಯಮ ವೃತ್ತಿಪರರನ್ನು ಒಟ್ಟುಗೂಡಿಸುವುದು ಈ ಭಾಷಣದ ಮೂಲಕ ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಹೆಚ್ಚಿಸುವ ತಾಂತ್ರಿಕ ಸಂವಾಹನ ನಡೆಸುವ ಉದ್ದೇಶವಾಗಿದೆ.

 ಬಿಐಟಿಎಂ, ಉಪ-ಪ್ರಾಂಶುಪಾಲರು, ಡೀನ್ಗಳು (ಎಸ್ಎ ಮತ್ತು ಎಫ್ಎ, ಆರ್ & ಡಿ), ಎಲ್ಲಾ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರುಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯರಾದ ಡಾ. ಯಡವಳ್ಳಿ ಬಸವರಾಜ ತಿಳಿಸಿದ್ದಾರೆ.

Facebook
Twitter
LinkedIn
WhatsApp

Leave a Comment

Your email address will not be published. Required fields are marked *

Translate »
Scroll to Top