ಬಿಐಇಸಿಯಲ್ಲಿ 3 ದಿನಗಳ 4ನೇ ಅಂತರಾಷ್ಟ್ರೀಯ ಹಸಿರು ಎಲೆಕ್ಟ್ರಿಕ್‌ ವಾಹನಗಳ ಮೇಳ

ಬೆಂಗಳೂರು: ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಇಂದಿನಿಂದ ಮೂರು ದಿನಗಳ ಅಂತರರಾಷ್ಟ್ರೀಯ ಗ್ರೀನ್ ಎನರ್ಜಿ ಎಕ್ಸ್‌ ಪೋ ಆರಂಭವಾಗಿದ್ದು, ದೇಶ ವಿದೇಶಗಳ 138 ಕಂಪೆನಿಗಳು ಭಾಗವಹಿಸಿವೆ. ಪರಿಸರ ಸ್ನೇಹಿ, ಇಂಧನ ಮಿತವ್ಯಯಕಾರಿ ವಾಹನಗಳ ಲೋಕ ಅನಾವರಣಗೊಂಡಿದೆ.

ಎಲೆಕ್ಟ್ರಿಕ್ ಬಸ್ ಗಳು, ಸಣ್ಣ ಕಾರುಗಳು, ಸರಕು ಸಾಗಾಣೆ ವಾಹನಗಳು, ಎಲೆಕ್ಟ್ರಿಕ್ ಬೈಸಿಕಲ್ ಗಳು ಹೀಗೆ ನಾನಾ ನಮೂನೆಯ ವಾಹನಗಳು ಕೇವಲ ನೋಡಲಷ್ಟೇ ಅಲ್ಲದೇ ಟೆಸ್ಟ್ ಡ್ರೈವ್ ಗೂ ಲಭ್ಯವಿದೆ. ಇದಲ್ಲದೇ ಸ್ಥಳದಲ್ಲಿ ವಾಹನಗಳನ್ನು ಮುಂಗಡ ಕಾಯ್ದಿರಿಸಿದರೆ ರಿಯಾಯಿತಿ ಸೌಲಭ್ಯ ಕೂಡ ಕಲ್ಪಿಸಲಾಗಿದೆ. ಈ ಮೇಳವನ್ನು ಕರ್ನಾಟಕ ನವೀಕೃತ ಇಂಧನ ಉತ್ಪಾದಕರ ಸಂಘ – ಕ್ರೇಷ್ಮಾ ಮತ್ತು ಭಾರತದ ಪರಿಸರ ಸಂಶೋಧನಾ ಸಂಸ್ಥೆ ಪೆರ್ರಿ ಸಂಸ್ಥೆಯ ಸಹಯೋಗದಲ್ಲಿ ಏರ್ಪಡಿಸಲಾಗಿದೆ.

ಗ್ರೀನ್ ಎನರ್ಜಿ ಎಕ್ಸ್‌ ಪೋಗೆ ಕ್ರೇಷ್ಮಾ ಅಧ್ಯಕ್ಷ ಕೆ.ಆರ್. ಸುರೇಂದ್ರ ಕುಮಾರ್, ಪೆರ್ರಿ ಸಂಸ್ಥೆ ಅಧ್ಯಕ್ಷ ರಮೇಶ್ ಶಿವಣ್ಣ ಹಾಗೂ ಮೀಡಿಯಾ ಡೇ ಮಾರ್ಕೆಂಟಿಂಗ್ ವಿಭಾಗದ ನಿರ್ದೇಶಕ ಮೊಹಮದ್ ಮುದಸಿರ್ ವಾಹನ ಮೇಳಕ್ಕೆ ಚಾಲನೆ ನೀಡಿದರು.

 

 

ಬಳಿಕ ಮಾತನಾಡಿದ ಕೆ.ಆರ್. ಸುರೇಂದ್ರ ಕುಮಾರ್, ಹವಾಮಾನ ಬದಲಾವಣೆ ಗುರಿಗಳನ್ನು ಸಾಧಿಸಲು ಪರಿಸರ ಸ್ನೇಹಿ ವಾಹನಗಳ ಉತ್ಪಾದನೆಗೆ ಸರ್ಕಾರ ಆದ್ಯತೆ ನೀಡಿದ್ದು, ಇದಕ್ಕೆ ಪೂರಕವಾಗಿ ಮೇಳ ಆಯೋಜಿಸಲಾಗಿದೆ. ಎಲೆಕ್ಟ್ರಿಕ್ ವಾಹನಗಳು ಸಾಗಾಣೆ ವ್ಯವಸ್ಥೆಯ ಭವಿಷ್ಯವಾಗಿದ್ದು, ಬೆಂಗಳೂರು ಜಾಗತಿಕ ವಿದ್ಯುನ್ಮಾನ ವಾನಗಳ ತಾಣವಾಗಿ ಬೆಳೆಯುತ್ತಿದೆ. ಪರಿಸರ ಸ್ನೇಹಿ ವಾಹನಗಳ ಬಳಕೆಗೆ ಜನ ಮುಂದಾಗಬೇಕು ಎಂದರು.

ಮೇಳದಲ್ಲಿ ರಾಯಚೂರು ಜಿಲ್ಲೆಯ ಲಿಂಗಸಗೂರಿನ ಟಾಸರ್ ಸ್ಕೂಟರ್ ಗಳು, ಕೆಕೆಎಲ್ ಹೈಟೆಕ್ ಸಂಸ್ಥೆಯ ನ್ಯಾನೋ ಗಿಂತ ಸಣ್ಣ ಕಾರುಗಳು, ಸೂಪರ್ ಬೈಕ್ ಗಳು, ಬಗೆ ಬಗೆಯ ಸರಕು ಸಾಗಾಣೆ ವಾಹನಗಳು ಮೇಳದಲ್ಲಿವೆ. ಸರಕು ಸಾಗಾಣೆ ವಾಹನಗಳು ವ್ಯಾಪಾರ, ಕೃಷಿ ಹೀಗೆ ವಿವಿಧ ವಲಯಗಳಲ್ಲಿ ತೊಡಗಿರುವವರಿಗೆ ಸಹಕಾರಿಯಾಗಿದೆ. ಇಎಸ್ಎಸ್ಇಎಲ್ ಸಂಸ್ಥೆಯ ಎಲೆಕ್ಟ್ರಿಕ್ ಸೈಕಲ್ ಗಳು ವಾಹನ ಪ್ರಿಯರ ಸಣ್ಮನ ಸೆಳೆಯುತ್ತಿದೆ. ಇದಕ್ಕೆ ಸಾರಿಗೆ ಇಲಾಖೆಯಲ್ಲಿ ನೋಂದಣಿ ಮತ್ತು ವಿಮೆ ಅಗತ್ಯವಿಲ್ಲ. ಹೀಗೆ ಮೇಳ ಹತ್ತು ಹಲವು ಕೌತುಗಳನ್ನು ಮೇಳ ಒಳಗೊಂಡಿದೆ.

 

 

ಇದೇ ಸಂದರ್ಭದಲ್ಲಿ ಭಾರತ್ ನ್ಯೂ ಎಜರ್ನಿ ಸಂಸ್ಥೆಯ ಎಸ್ 110 ಎಲೆಕ್ಟ್ರಿಕ್ ಮೋಟಾರ್ ಸೈಕಲ್, ಫರ್ಪೆಟ್ಟೋ, ಬಾಸ್ ಎಸ್150 ಫರ್ಮಾರ್ಮೆನ್ಸ್ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಗಳನ್ನು ಅನಾವರಣಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಬಿಎನ್ ಸಿ ಸಂಸ್ಥೆಯೊಂದಿಗೆ ಜಪಾನಿನ ಹೆಸರಾಂತ ವಾಹನ ಬಿಡಿ ಭಾಗಗಳ ತಯಾರಕರಾದ ಮುಸಾಶಿ ಸೆಮಿಟ್ಸು ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.

Facebook
Twitter
LinkedIn
WhatsApp

Leave a Comment

Your email address will not be published. Required fields are marked *

Translate »
Scroll to Top