ದೇಶಿಯ ಕ್ರೀಡೆಗಳಿಗೆ ಮಹತ್ವ ಕೊಡುವುದು ಮುಖ್ಯ

ಕೊಪ್ಪಳ : ನಮ್ಮ ದೇಶಿಯ ಕ್ರೀಡೆಗಳು ಇವತ್ತಿನ ದಿನಮಾನದಲ್ಲಿ ಮರಿಚಿಕೆಯಾಗುತ್ತಿದ್ದು ಇಂತಹ ಗಡ್ಡಿ ಬಂಡಿ ಕ್ರೀಡೆಗಳು ನೆಡೆಯುವಂತದ್ದು ಬಹಳ ಕಡಿಮೆ ಇಂತಹ ಕ್ರೀಡೆಗಳಿಗೆ ಮಹತ್ವ ಕೊಟ್ಟು ಉಳಿಸಿ ಬೆಳಿಸಬೇಕಾಗಿದೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹಾಗೂ ಕೊಪ್ಪಳ ಜಿಲ್ಲೆ ಬಿಜೆಪಿ ಪಕ್ಷದ ಅಧ್ಯಕ್ಷ ದೊಡ್ಡನಗೌಡ ಪಾಟೀಲ ಹೇಳಿದರು. ಇಲ್ಲಿನ ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದ ಶಾಖಾಪೂರ ರಸ್ತೆಯ ಶ್ರೀ ಅಡವಿರಾಯ ದೇವಸ್ಥಾನ ಹತ್ತಿರ ಹೊರ ಹೊಲದಲ್ಲಿ ಶ್ರೀ ಭಕ್ತಿ ಭಂಡಾರ ಬಸವೇಶ್ವರ ಜಯಂತಿ ಅಂಗವಾಗಿ ಕುಷ್ಟಗಿ ರೈತ ಮಿತ್ರ ಗೆಳೆಯರ ಬಳಗದಿಂದ ಇದೇ ಪ್ರಥಮ ಬಾರಿಗೆ ಏರ್ಪಡಿಸಲಾಗಿದ್ದ ಗಡ್ಡಿ ಬಂಡಿ ಓಟದ ಓಡಿಸುವ ಸ್ಪರ್ಧೆ ಕಾರ್ಯಕ್ರಮದ ಬಹುಮಾನ ವಿತರಣೆ ಮಾಡಿ ಮಾತನಾಡಿದ ಅವರು ನಮ್ಮ ದೇಶ ಸಂಸ್ಕೃತ ದೇಶ ನಮ್ಮಲ್ಲಿ ಹಿರಿಯರು ಅನೇಕ ಆರೋಗ್ಯ ವೃದ್ಧಿಯಾಗುವಂತೆ ಕ್ರೀಡೆಗಳನ್ನು ಹಾಡುತ್ತಿದ್ದು ಆದರೆ ಇವತ್ತು ನಮ್ಮ ದೇಶೀಯ ಕ್ರೀಡೆಗಳು ಮರಿಚಿಕೆಯಾಗಿದ್ದು ಇಂತಹ ಕ್ರೀಡೆಯನ್ನು ಉಳಿಸಿ ಬೆಳೆಸುವಲ್ಲಿ ಯುವಕ ಮಿತ್ರರು ಮುಂದಾಗಿರುವದು ಶ್ಲಾಘನೀಯ ಎಂದರು.

ಇದೇ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರ ಮಂಜುನಾಥ ನಾಲಗಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ವೇದಮೂರ್ತಿಗಳಾದ ಶಿವಾನಂದಯ್ಯ ಗುರುವಿನ್ ಕೊರಡಕೇರಾ ಹಾಗೂ ಉದ್ಯಮಿ ಶರಣಪ್ಪ ಕತ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಂಜುನಾಥ ತಳುಗೇರಿ, ಅಮರೇಶ ನಿರೋಳ್ಳಿ, ಸಣ್ಣ ಶಂಕ್ರಪ್ಪ ಟಕ್ಕಳಕಿ, ಜಮೀರ್ ಬಂಗಾಳಿ, ನೀಲಪ್ಪ ಜಗಲಿ, ಶರಣಪ್ಪ, ಬಸವರಾಜ, ಸುರೇಶ ಗದ್ದಿ, ಬಸವರಾಜ ಮೇಣಸಗೇರಿ, ಬಸಣ್ಣ ಕಂಚಿ ಸೇರಿದಂತೆ ಅನೇಕರು ಕಾರ್ಯಕ್ರಮ ಆಯೋಜನೆ ಮಾಡಿದರು. ಈ ಒಂದು ಓಟದ ಸ್ಪರ್ಧೆಯಲ್ಲಿ ೪೦ ಕ್ಕು ಹೆಚ್ಚು ಗಡ್ಡಿ ಬಂಡಿ ಎತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು, ಇದರಲ್ಲಿ ಪ್ರಥಮ ಸ್ಥಾನ ದುರ್ಗಾದೇವಿ ಪ್ರಸನ್ ಲೋಕಾಪುರ್ 1650 ಫೀಟ್ ಪ್ರಥಮ ಭವನ್ ಮಾನ 51000, ದ್ವಿತೀಯ ಬಹುಮಾನ ಮಂಜುನಾಥ ಅಂದಪ್ಪ ಊರು ತುಂಬಾ 1475.10 ಫೀಟ್ ಬಹುಮಾನ 31000,ತೃತೀಯ ಬಹುಮಾನ ಬೀರಲಿಂಗೇಶ್ವರ ಕುಷ್ಟಗಿ ತಾಲೂಕು ಬೆಂಚಮಟ್ಟಿ 1472 ಫೀಟ್ ಬಹುಮಾನ 21000, ಚತುರ್ ಸ್ಥಾನ ಬಸವರಾಜ್ ಕಂಚಿ ಸಾಕಿನ್ ಕುಷ್ಟಗಿ 1150 ಫೀಟ್ ಬಹುಮಾನ 11000, ಪಂಚಮ ಸ್ಥಾನ ಶ್ರೀ ಗುರು ಶಂಕರ ಬೀರಲಿಂಗೇಶ್ವರ ಸಾಕಿನ್ ಮನ್ನಾಪುರ ಕುಷ್ಟಗಿ ತಾಲೂಕು 1111ಫೀಟ್ ಬಹುಮಾನ 5100, ಆರನೇ ಸ್ಥಾನ ಸಾಕಿನ್ ವಾರಿಕಲ್ 1408 ಫೀಟ್ ಬಹುಮಾನ ಇತ್ತಳೆ ಸರಪಳಿ ಬಹುಮಾನವನ್ನು ತಮ್ಮದಾಗಿಸಿಕೊಂಡವು. ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶರಣಪ್ಪ ವಡಗೇರಿ,ರಾಮಣ್ಣ ಭಜೇಂತ್ರಿ ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top