ಸೌಹಾರ್ದದ ಜೊತೆಗೆ ಮಹಮ್ಮದ್ ಫೈಗಂಬರ್ ತತ್ವಗಳು ಮುಖ್ಯ

ಕುಷ್ಟಗಿ : ಸೌಹಾರ್ದದ ಜೊತೆಗೆ ಮಹಮ್ಮದ್ ಫೈಗಂಬರ್ ತತ್ವಗಳು ಮಹಳ ಮುಖ್ಯವಾಗಿದ್ದು ಮುಸ್ಲಿಂ ಮರು ೩೦ ದಿನಗಳ ಕಾಲ ಉಪವಾಸ ವ್ರತ ಮಾಡಿದಿದಕ್ಕು ಸ್ವಾರ್ಥಕತೆ ಬರುತ್ತದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು. ಪಟ್ಟಣದ ಜನತೆಯ ಶಿರಡಿ ಸಾಯಿಬಾಬಾ ದೇವಸ್ಥಾನ ಹತ್ತಿರ ಇರುವ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಸಾಮೂಹಿಕ ಮುಸ್ಲಿಂ ಸಮಾಜದವರು ಪ್ರಾರ್ಥನೆ ಸಲ್ಲಿಸಿದ ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ರಂಜಾನ್ ಹಬ್ಬವು ಬಹಳ ಉಪವಾಸ ವ್ರತವನ್ನು ಮಾಡುವ ಮೂಲಕ ಮನುಷ್ಯ ಮಾಡಿದ ಪಾಪ ಕಳೆದು ಇವತ್ತಿನ ದಿನ ಪುಣ್ಯ ದೊರೆಯುವಂತೆ ಮಾಡುತ್ತದೆ ಅಂತಹ ಪುಣ್ಯದ ಪ್ರಾಪ್ತಿಯನ್ನು ಮಾಡಿದ ಮಾಹಾತ್ವ ಮಹಮ್ಮದ್ ಫೈಗಂಬರ್ ಆಗಿದ್ದಾರೆ ಅವರ ತತ್ವಗಳನ್ನು ನಾವುಗಳು ಅಳವಡಿಸಿಕೊಳ್ಳಬೇಕು ಅಂದಾಗ ಮಾತ್ರ ಜನ್ಮ ಸ್ವಾರ್ಥಕವಾಗುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಶರಣಪ್ಪ ವಕೀಲರು, ಮಾಜಿ ಶಾಸಕ ಹಸನಸಾಬ ದೋಟಿಹಾಳ, ಪುರಸಭೆ ಅಧ್ಯಕ್ಷ ಜಿ.ಕೆ ಹಿರೇಮಠ ಮಾತನಾಡಿದರು. ಈ ಸಂದರ್ಭದಲ್ಲಿ ಸಿ.ಪಿ.ಐ ನಿಂಗಪ್ಪ ರುದ್ರಕೊಳ್ಳ, ಪುರಸಭೆ ಮೈನುದ್ಧಿನ್ ಮುಲ್ಲಾ, ಅಲ್ಪ ಸಂಖ್ಯಾತರ ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷ ಅಮನುದ್ದೀನ್ ಮುಲ್ಲಾ, ರಾಜ್ಯ ದಾಳಿಂಬೆ ಬೆಳೆಗಾರರ ಸಾಲ ಮನ್ನಾ ಹೋರಾಟ ಅಧ್ಯಕ್ಷ ನಹೀಂಸಾಬ, ನಬಿದಾಬ ಕುಷ್ಟಗಿ, ಪುರಸಭೆ ಸದಸ್ಯರಾದ ಮೈಬುಸಾಬ ಕಮ್ಮಾರ ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top