ಶ್ರೀ ಉಡಸಲಮ್ಮ ದೇವಿಯ ಮಹದ್ವಾರ, 65 ಅಡಿ ಎತ್ತರದ ಗೋಪುರ ಹಾಗೂ ಕಳಸಾರೋಹಣ ಮತ್ತು ಗರುಡಗಂಭ ಉದ್ಘಾಟನೆ

ಕುರುಗೋಡು : ಕುರುಗೋಡು ಸಮೀಪದ ಬಾದನಹಟ್ಟಿ ಗ್ರಾಮದ ಆರಾಧ್ಯ ದೇವತೆ ಶ್ರೀ ಉಡಸಲಮ್ಮ ದೇವಿಯ ಮಹದ್ವಾರದ 65 ಅಡಿ ಎತ್ತರದ ಗೋಪುರ ಕಳಸಾರೋಹಣ ಮತ್ತು ಗರುಡಗಂಭಗಳ ಸ್ಥಾಪನೆ ಕಾರ್ಯಕ್ರಮ ವಿಜೃಂಭಣೆಯ ಜತೆಗೆ ಶ್ರದ್ಧಾಭಕ್ತಿಯಿಂದ ಬುಧವಾರ ಜರುಗಿತು.

 

ಬುಧವಾರದಂದು ಬೆಳಿಗ್ಗೆ 3 ಗಂಟೆಯಿಂದ ಶ್ರೀ ಬಾವಿ ಆಂಜನೇಯ ದೇವಸ್ಥಾನದಿಂದ ಗಂಗೆಪೂಜೆ ಮತ್ತು ಕಳಸಗಳ ಮೆರವಣಿಗೆ ವಿವಿಧ ಕಲಾ ಪ್ರಕಾರಗಳ ಮೂಲಕ ಸಾಗಿ ಬಂದು, ನಂತರ ಶ್ರೀ ಉಡಸಲಮ್ಮ ದೇವಿಯ ಮಹದ್ವಾರದ ಗೋಪುರ ಕಳಸಾರೋಹಣ ಮತ್ತುn ಗರುಡಗಂಭಗಳ ಉದ್ಘಾಟನೆ ಅತ್ಯಂತ ಅದ್ದೂರಿಯಾಗಿ ನಡೆಯಿತು. ಈ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವೀರಗಲು ಮಹಿಳೆಯರು, ಸುಮಂಗಲಿಯರ ಕಳಸ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ರಂಗು ನೀಡುವ ಜತೆಗೆ ಶ್ರೀ ಉಡಸಲಮ್ಮ ದೇವಿಯ ಗೋಪುರ ಕಳಸಾರೋಹಣ ಮತ್ತು ಗರುಡಗಂಭಗಳ ಉದ್ಘಾಟನೆ ಕಾರ್ಯಕ್ರಮ ಸಡಗರ ಸಂಭ್ರಮಕ್ಕೆ ಸಾಕ್ಷಿಯಾಯಿತು.

ತದನಂತರ ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು. ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಠಿಯಾಗಿತ್ತು. ಫೆ.20ರಂದು ದೇವಸ್ಥಾನದಲ್ಲಿ ಪುರೋಹಿತರಾದ

ರೇಣುಕಾ ಸ್ವಾಮಿ, ಶರಣ ಬಸವಸ್ವಾಮಿ, ಬಸವರಾಜ ಸ್ವಾಮಿ, ಚನ್ನ ವೀರಣ್ಣ ಸ್ವಾಮಿ, ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ಹೋಮ ಹವನ ನೆರವೇರಿದವು.

 

ಎಮ್ಮಿಗನೂರು ಹಂಪಿ ಸಾವಿರ ದೇವರ ಮಠದ ಶ್ರೀ ವಾಮದೇವ ಮಹಾಂತ ಶಿವಾಚಾರ್ಯ ಮಹಾಸ್ವಾಮಿಯವರು ಶ್ರೀ ಉಡಸಲಮ್ಮ ದೇವಿಯ ಮಹದ್ವಾರದ ಗೋಪುರ ಕಳಸಾರೋಹಣ ಮತ್ತು ಗರುಡಗಂಭಗಳ ಉದ್ಘಾಟಿಸಿ ಮಾತನಾಡಿ, ಜೀವನದಲ್ಲಿ ಧನ, ಯೌವನ, ಮಡದಿ, ಮಕ್ಕಳು ಸ್ಥಿರವಲ್ಲ. ಪುಣ್ಯ ಕಾರ್ಯಗಳು ಮಾತ್ರ ಶಾಶ್ವತ. ಆದ್ದರಿಂದ ಧರ್ಮಮಾರ್ಗದಲ್ಲಿ ಸಾಗಬೇಕು ಎಂದರು.

ಮಾಜಿ ಶಾಸಕ ನಾರಾ ಸೂರ್ಯನಾರಾಯಣರೆಡ್ಡಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ದೇವಿಯ ದರ್ಶನ ಪಡೆದ ನಂತರ ಮಾತನಾಡಿ, ಶ್ರದ್ಧೆ, ಭಕ್ತಿಯಿಂದ ಭಗವಂತನನ್ನು ಪೂಜಿಸುವುದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ಸುಖ ಶಾಂತಿ ಲಭಿಸಲಿದೆ. ಶ್ರೀ ಉಡಸಲಮ್ಮ ದೇವಿಯ ಆರಾಧನೆ ಮಾಡಿದರೆ, ಇಷ್ಟಾರ್ಥಗಳು ಸಿದ್ಧಿಯಾಗಲಿವೆ. ಇಂತಹ ಧಾರ್ಮಿಕ ಕೈಂಕಾರ್ಯಗಳಿಂದ ಭಕ್ತರ ನೆಮ್ಮದಿ ಜೊತೆಗೆ ಗ್ರಾಮ ಅಭಿವೃದ್ಧಿಯಾಗಲಿದೆ ಎಂದರು.

 

ಈ ಸಂದರ್ಭದಲ್ಲಿ    ಕಲ್ಲಕಂಭದ ಶ್ರೀ ರುದ್ರಮನೇಶ್ವರ, ಪಕ್ಕಿರಪ್ಪತಾತ, ಮುಖಂಡರು, ಮಹಿಳೆಯರು ಹಾಗೂ ಉಡಸಲಮ್ಮ ದೇವಿಯ ಸೇವಾ ಸದ್ಭಕ್ತ ಮಂಡಳಿ ಹಾಗೂ ಬಾದನಹಟ್ಟಿ ಗ್ರಾಮಸ್ಥರು ಇದ್ದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top