ಬೆಂಗಳೂರು: ಇಂದಿನ ಸ್ಪರ್ಧಾ ಯುಗದಲ್ಲಿ ಮಕ್ಕಳ ಸ್ಮರಣ ಶಕ್ತಿ ಹೆಚ್ಚಿಸುವ ಇಂಥ ತರಬೇತಿಗಳ ಅಗತ್ಯ ಹೆಚ್ಚಾಗಿದೆ ಎಂದು ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ ಅವರು ತಿಳಿಸಿದರು.
ಶೇಷಾದ್ರಿಪುರದ ಗೋಲ್ಡನ್ ಮೆಟ್ರೋ ಹೋಟೆಲ್ ನಲ್ಲಿ ಕರ್ನಾಟಕ ಮೆಮೊರಿ ಚಾಂಪಿಯನ್‍ಶಿಪ್ ಕಾರ್ಯಕ್ರಮವನ್ನು ಇಂದು ಉದ್ಘಾಟಿಸಿ ಅವರು ಮಾತನಾಡಿದರು. ಇಲ್ಲಿನ ಮಕ್ಕಳು ಮುಂದೆ ದೇಶ, ಅಂತರರಾಷ್ಟ್ರೀಯ ಮಟ್ಟದಲ್ಲೂ ಸ್ಪರ್ಧಿಸುವಂತಾಗಲಿ ಎಂದು ಹಾರೈಸಿದರು.
ಮಕ್ಕಳನ್ನು ಈ ಕೋರ್ಸಿಗೆ ಸೇರಿಸಿದ ಪೋಷಕರು ಅಭಿನಂದನಾರ್ಹರು ಎಂದು ಮೆಚ್ಚುಗೆ ಸೂಚಿಸಿದ ಅವರು, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ಜ್ಞಾಪಕ ಶಕ್ತಿ ಕಡೆ ಗಮನ ಕೊಡುವುದು ಅನಿವಾರ್ಯ ಎಂದು ವಿಶ್ಲೇಷಿಸಿದರು.
ಸರಕಾರಿ ಶಾಲೆಗಳ ಮಕ್ಕಳಲ್ಲಿ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಇಂಥ ತರಬೇತಿ ಬೇಕಿದೆ. ಅವರ ಕೀಳರಿಮೆ ತೊಡೆದುಹಾಕಲು ಇಂಥ ತರಬೇತಿ ಬೇಕು ಎಂದರಲ್ಲದೆ, ಇದನ್ನು ನಡೆಸುತ್ತಿರುವ ದೀಪಕ್ ಅವರನ್ನು ಅಭಿನಂದಿಸಿ ಶುಭ ಕೋರಿದರು.
ಮೊಬೈಲ್ ಯುಗದಲ್ಲಿ ನಮ್ಮ ಮನೆಯವರ ಫೋನ್, ಮೊಬೈಲ್ ಸಂಖ್ಯೆ ನೆನಪಿಲ್ಲದ ಪರಿಸ್ಥಿತಿ ಬಂದಿದೆ. ಜ್ಞಾಪಕ ಶಕ್ತಿ ಹೆಚ್ಚಳ ಹೇಗೆ ಎಂಬ ತರಬೇತಿ ಜನರಿಗೂ ಅಗತ್ಯವಾಗಿರುವ ಸ್ಥಿತಿ ಈಗ ಇದೆ ಎಂದು ನುಡಿದರು.
ಬಿಜೆಪಿ ರಾಜ್ಯ ಮಾಧ್ಯಮ ಸಹ ಸಂಚಾಲಕರಾದ ಪ್ರಶಾಂತ್ ಕೆದೆಂಜಿ, ಬಿಎಂಪಿ ಮಾಜಿ ಸದಸ್ಯರಾದ ಶ್ರೀಮತಿ ಹೇಮಲತಾ ಸತೀಶ್ ಶೇಟ್, ದೀಪಕ್ ಅವರು ಭಾಗವಹಿಸಿದ್ದರು.