ಅತಿಥಿ ಶಿಕ್ಷಕರ ಬೇಡಿಕೆ ಈಡೇರದಿದ್ದರೆ ನಾಳೆ ವಿಧಾನಸೌಧಕ್ಕೆಮುತ್ತಿಗೆ

ಕುಷ್ಟಗಿ:- ಕೊಪ್ಪಳ ಜಿಲ್ಲೆ ಕುಷ್ಟಗಿ ಸರಕಾರಿ ಪ್ರಥಮ ದರ್ಜೆ ಕಾಲೇಜ ವಿದ್ಯಾರ್ಥಿಗಳು ಅತಿಥಿ ಶಿಕ್ಷಕರನ್ನು ಖಾಯಂಗೊಳಿಸಿ ಇಲ್ಲ ಖಾಯಂ ನೌಕರರನ್ನು ಕೊಡಿ ಈಗಾಗಲೇ ತರಗತಿ ಪಾಠಗಳು ಬಹಳ ಹಿಂದೆ ಬಿದ್ದಿದ್ದು ಮುಂದಿನ ದಿನದಲ್ಲಿ ನಾವುಗಳು ಹೇಗೆ ಪರೀಕ್ಷೆ ಎದುರಿಸಬೇಕು ಮತ್ತು ನಾವುಗಳು ಹೇಗೆ ಪಾಠ ಕಲಿಯಬೇಕು ಶಿಕ್ಷಕರು ಇಲ್ಲದ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹೇಗೆ ಇರಬೇಕು ಎಂಬ ಚಿಂತೆ ನಮ್ಮ ವಿದ್ಯಾರ್ಥಿಗಳಿಗೆ ಕಾಡುತ್ತಿದೆ ಸರ್ಕಾರ ಹೆಚ್ಚತ್ತುಕೊಂಡು ಕೂಡಲೇ ಅತಿಥಿ ಶಿಕ್ಷಕರನ್ನು ಖಾಯಂ ನೌಕರರನ್ನಾಗಿ ನೇಮಕಗೊಳಿಸಿ ವಿದ್ಯಾರ್ಥಿಗಳ ಓದು ಬರಹಕ್ಕೆ ಸಹಕರಿಸಿ ಎಂದು ಇಲ್ಲಿನ ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.‌
‌ನಂತರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕುಷ್ಟಗಿಯಿಂದ ತರಗತಿಯನ್ನು ಬಹಿಷ್ಕರಿಸಿ ಕುಷ್ಟಗಿ ತಹಶೀಲ್ದಾರ ಕಾರ್ಯಲಯದ ವರಗೆ ಕಾಲ್ ನೆಡೆಗೆಯ ಮೂಲಕ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ತಹಶೀಲ್ದಾರ ಎಂ.ಸಿದ್ದೇಶ ಅವರಿಗೆ ಮನವಿ ಸಲ್ಲಿಸಿದರು.


‌ನಂತರ ವಿದ್ಯಾರ್ಥಿಗಳು ಮಾತನಾಡಿ ಈ ದೇಶದ ರಾಜಕಾರಣಿಗಳು ಇವತ್ತಿನ ಯುವಕರು ಮುಂದಿನ ಈ ದೇಶದ ಪ್ರಜೆಗಳು ಎನ್ನುತ್ತಾರೆ ಆದರೆ ಇವತ್ತು ಸರಕಾರ ಅತಿಥಿ ಶಿಕ್ಷಕರನ್ನು ನೀಡಿ ಅವರುಗಳನ್ನು ಖಾಯಂಗೊಳಿಸಿದೆ ಹಾಗೇ ಬಿಟ್ಟಿದ್ದು ಮತ್ತು ವಿದ್ಯಾರ್ಥಿಗಳಿಗೆ ಅನ್ಯಾಯವನ್ನು ಮಾಡುತ್ತಿದೆ ಆದರೆ ಇವತ್ತು ಅತಿಥಿ ಶಿಕ್ಷಕರು ಸುವರ್ಣ ಸೌಧ ಮುಂದೆ ಧರಣಿ ಕುಳಿತ್ತಿದ್ದಾರೆ. ಇದರಿಂದ ನಮ್ಮ ಶಿಕ್ಷಣಕ್ಕೆ ಅಡ್ಡಿಯಾಗಿದೆ ಮತ್ತು ಪಾಠಗಳು ಕೇಳಲು ಕಾಲೇಜಿನಲ್ಲಿ ಶಿಕ್ಷಕರು ಇಲ್ಲದಂತಾಗಿದೆ ಈ ಸಮಸ್ಯೆಯಿಂದ ನಾವುಗಳು ಮನನೊಂದಿದ್ದೇವೆ. ನಮ್ಮ ಕುಷ್ಟಗಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುಮಾರು ೧೮೦೦ ವಿದ್ಯಾರ್ಥಿಗಳು ಇದ್ದೇವೆ ಆದರೆ ನಮ್ಮ ಕಲಿಕೆಗೆ ಶಿಕ್ಷಕರು ಬೇಕು ಆದರೆ ನಮ್ಮ ಕಲಿಕೆಗೆ ಸುಮಾರು ೫೦ ಮoದಿ ಶಿಕ್ಷಕರು ಬೇಕು ಈಗ ನಮ್ಮ ಕಾಲೇಜಿನಲ್ಲಿ ಬರಿ ಬೆರಳೆಣಿಕೆಯಷ್ಟು ಮಾತ್ರ ಶಿಕ್ಷಕರು ಇದ್ದಾರೆ ನಮಗೆ ಕಾಲೇಜನಲ್ಲಿ ಕಲಿಕೆ ಕಲಿಯಲು ಶಿಕ್ಷಕರು ಇಲ್ಲದಂತಾಗಿದೆ ಆದ್ದರಿಂದ ಕೂಡಲೇ ಸರಕಾರ ಎಚ್ಚತ್ತುಕೊಂಡು ನಮ್ಮ ಬೇಡಿಕೆಯನ್ನು ಈಡೇರಿಸಿ ಅತಿಥಿ ಶಿಕ್ಷಕರನ್ನು ಖಾಯಂಗೊಳಿಸಿ ಖಾಯಂನೌಕರರನ್ನು ನೀಡಬೇಕೆಂದು ಆಗ್ರಹಿಸಿದರು.

Leave a Comment

Your email address will not be published. Required fields are marked *

Translate »
Scroll to Top