ಹೊಸಪೇಟೆ ಉಪಖಜಾನೆಯಲ್ಲಿ ಮಹಿಳಾ ದಿನ ಆಚರಣೆ

ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆ ಉಪಖಜಾನೆಯ ವತಿಯಿಂದ ಮಂಗಳವಾರದಂದು ಉಪಖಜಾನೆ ಕಚೇರಿಯ ಆವರಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಉಪಖಜಾನೆಯ ಅಧಿಕಾರಿಗಳಾದ ವೆಂಕಟೇಶ್ ಮೂರ್ತಿ ಅವರು ಉದ್ಘಾಟಿಸಿ ಮಾತನಾಡಿ ಎಲ್ಲಾ ಮಹಿಳಾ ಸಿಬ್ಬಂದಿಗಳಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು. ಮಹಿಳೆಯರು ಇಂದು ಸಮಾಜದಲ್ಲಿ ನಿರ್ವಹಿಸುತ್ತಿರುವ ಪಾತ್ರ ಹಾಗೂ ಎಲ್ಲ ರಂಗಗಳಲ್ಲಿಯೂ ಛಾಪೂ ಮೂಡಿಸಿರುವ ಬಗ್ಗೆ ವಿವರಿಸಿದರು.
ತಹಶೀಲ್ದಾರರಾದ ಮೇಘ ಅವರು ಉಪಖಜಾನೆ ಇಲಾಖೆಯ ಹಿರಿಯ ಮಹಿಳಾ ಸಿಬ್ಬಂದಿಯಾದ ಸಾವಿತ್ರಮ್ಮ ಅವರಿಗೆ ಗೌರವಪೂರ್ವಕವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಉಪನೊಂದಣಿ ಅಧಿಕಾರಿಗಳಾದ ಜಯಪ್ರದಾ, ಉಪಖಜಾನೆಯ ಸಿಬ್ಬಂದಿಗಳಾದ ಸುಜಾತಾ ಹಾಗೂ ಸಿಬ್ಬಂದಿ ಇದ್ದರು.

Leave a Comment

Your email address will not be published. Required fields are marked *

Translate »
Scroll to Top