ಫ್ಯಾಮಿಲಿ ಪ್ಲ್ಯಾನಿಂಗ್ ಆಸೋಸಿಯೇಶನ್‍ನಿಂದ ಆರೋಗ್ಯ ತಪಾಸಣಾ ಶಿಬಿರ

ಬಳ್ಳಾರಿ: ಬಳ್ಳಾರಿ ನಗರದ ತಾಳೂರು ರಸ್ತೆಯ ಮಹಾನಂದಿಕೂಟ್ಯಂ ಬಡಾವಣೆಯ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಫ್ಯಾಮಿಲಿ ಪ್ಲ್ಯಾನಿಂಗ್ ಆಸೋಸಿಯೇಶನ್ಸ್ ಆಫ್ ಇಂಡಿಯಾ ಮತ್ತು ಶ್ರೀರಕ್ಷಾ ಪೌಂಡೇಶನ್ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಲಿಂಗ ಸಮಾನತೆ ಇಂದು ಸುಸ್ತಿರ ನಾಳೆ ಎಂಬ ಧ್ಯೇಯಘೋಷವಾಕ್ಯದೊಂದಿಗೆ ಆರೋಗ್ಯ ತಪಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಫ್ಯಾಮಿಲಿ ಪ್ಲ್ಯಾನಿಂಗ್ ಆಸೋಸಿಯೇಶನ್ಸ್ ಆಫ್ ಇಂಡಿಯಾ ಮ್ಯಾನೇಜರ್ ವಿಜಯಲಕ್ಷ್ಮೀ ಅವರು ಮಾತನಾಡಿ, ಮಹಿಳೆಯರ ಸಬಲೀಕರಣವು ಅತ್ಯಂತ ಮಹತ್ವದಾಗಿದ್ದು, ಸಬಲೀಕರಣ ಹೊಂದಿದ ಮಹಿಳೆ ಸಮಾಜದ ಎಲ್ಲ ರಂಗದ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲಳು ಹಾಗೂ ಇಂತಹ ಮಹಿಳೆಯರಲ್ಲಿ ಆತ್ಮವಿಶ್ವಾಸ, ಏಕತೆ ಸ್ವಾವಲಂಬನೆ ಸಾಧಿಸಲು ಸಾಧ್ಯ ಎಂದರು
ಗರ್ಭಕೋಶದ ಸಮಸ್ಯೆ, ಊಟದಲ್ಲಿ ಅಪೌಷ್ಠಿಕತೆಯ ಕೊರತೆ ನಿಭಾಯಿಸುವುದಕ್ಕೆ ಸಂಬಂಧಿಸಿದಂತೆ ವಿಜಯಲಕ್ಷ್ಮೀ ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶ್ರೀರಕ್ಷಾ ಪೌಂಡಶೇನ್ ಅಧ್ಯಕ್ಷರಾದ ರೇವೂರ ಸುನೀಲ್,ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರಾದ ಡಾ. ಅನುಷಾ ಹಾಗೂ ಫ್ಯಾಮಿಲಿ ಪ್ಲ್ಯಾನಿಂಗ್ ಆಸೋಸಿಯೇಶನ್ಸ್ ಆಫ್ ಇಂಡಿಯಾ ಸಿಬ್ಬಂದಿಗಳು ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಶಿಬಿರದಲ್ಲಿ ಬಡಾವಣೆಯ ಸುಮಾರು 250 ಅಧಿಕ ಮಹಿಳೆಯರಿಗೂ ಆರೋಗ್ಯ ತಪಾಸಣೆ ಒಳಪಡಿಸಲಾಯಿತು. ಈ ತಪಾಸಣೆ ಶಿಬಿರದಲ್ಲಿ ಮುಖ್ಯವಾಗಿ ಗರ್ಭಗೊರಳಿನ ಪರೀಕ್ಷೆ ಮತ್ತು ಎಚ್.ಐ.ವಿ ಪರೀಕ್ಷೆ ಹಿಮೋಗ್ಲೋಬಿನ್, ಶುಗರ್ ಪರೀಕ್ಷೆಗಳ ಬಗ್ಗೆ ಆರೋಗ್ಯ ತಪಾಸಣೆ ನಡೆಸಲಾಯಿತು.

Leave a Comment

Your email address will not be published. Required fields are marked *

Translate »
Scroll to Top