ಕಲಬುರಗಿ,ಫೆ,19 : ಕಲ್ಯಾಣ ಕರ್ನಾಟಕ ಪ್ರದೇಶದ ಹೃದಯ ಭಾಗ, ಕಲಬುರಗಿ ಜಿಲ್ಲಾ ಪ್ರವಾಸದಲ್ಲಿರುವ ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು, ಕಲಬುರಗಿ ನಗರ ಪೊಲೀಸ್ ಆಯುಕ್ತಾಲಾಯ ನೂತನ ಕಟ್ಟಡ ಕಾಮಗಾರಿ ಯನ್ನು ಪರಿವೀಕ್ಷಣೆ ಮಾಡಿದರು.

ಕಟ್ಟಡ ಕಾಮಗಾರಿ ಕೆಲಸ ನಿಧಾನ ಗತಿಯಲ್ಲಿ ನಡೆಯುತ್ತಿದ್ದು, ಹೆಚ್ಚಿನ ವಿಳಂಬ ವಿಲ್ಲದಂತೆ ಕಟ್ಟಡವನ್ನು ಇಲಾಖೆಗೆ ಹಸ್ತಾಂತರ ಮಾಡಬೇಕು ಎಂದು ನಿರ್ದೇಶನ ನೀಡಿದರು. ಬಿಜೆಪಿಯ ಕಲಬುರಗಿ ಉತ್ತರ ಶಾಸಕ ಶ್ರಿ ದತ್ತಾತ್ರೇಯ ಪಾಟೀಲ್ ರೇವೂರ್ ಹಾಗೂ ಕಲಬುರಗಿ ಗ್ರಾಮೀಣ ಶಾಸಕ ಶ್ರಿ ಬಸವರಾಜ್ ಮತ್ತಿಮೂಡ್ ಹಾಗೂ ಜಿಲ್ಲಾ ಪೊಲೀಸ್ ಹಿರಿಯ ಅಧಿಕಾರಿಗಳೂ, ಈ ಸಂದರ್ಬದಲ್ಲಿ ಉಪಸ್ತಿತರಿದ್ದರು.