ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಸಹಾಯ ಹಸ್ತ

ಬೆಂಗಳೂರು: ಲೋಕಸಭಾ ಸದಸ್ಯರಾದ ತೇಜಸ್ವಿ ಸೂರ್ಯ, ಶಾಸಕರಾದ ರವಿ ಸುಬ್ರಮಣ್ಯ,ಮಾಜಿ ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ,ಟೈಟಾನ್ ಪ್ರಾದೇಶಿಕ ಮಾರಾಟ ವ್ಯವಸ್ಥಾಪಕರಾದ ಶರದ್ ಮತ್ತು ಬನಶಂಕರಿ ಟೈಟಾನ್ ವಲ್ಡ್ ಮಾಲೀಕರಾದ ಪದ್ಮಲತಾರವರು ಉದ್ಘಾಟಿಸಿದರು. ಪ್ರತಿ ವಾಚ್ ಮಾರಾಟದಿಂದ 100ರೂಪಾಯಿನ್ನ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ನಿಗದಿ ಮತ್ತು ಸಾರ್ಥಕ ಸಾಮಾಜಿಕ ಸೇವಾ ಸಂಘಟನೆಗೆ 6ಲಕ್ಷ ದೇಣಿಗೆ ಚಕ್ಕನ್ನ ವಿತರಿಸಲಾಯಿತು. ಲೋಕಸಭಾ ಸದಸ್ಯರಾದ ತೇಜಸ್ವಿ ಸೂರ್ಯ ರವರು ಮಾತನಾಡಿ ಕೊರೋನ ನಂತರ ಸ್ವಯಂ ಉದ್ಯೋಗ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹೆಚ್ಚಿನ ಪ್ರೋತ್ಸಹ ನೀಡುತ್ತಿದೆ.ಮುಂದಿನ ದಿನಗಳಲ್ಲಿ ದಕ್ಷಿಣ ಲೋಕಸಭಾ ಕ್ಷೇತ್ರದ 10ಸಾವಿರ ವಿದ್ಯಾರ್ಥಿಗಳಿಗೆ 10ಸಾವಿರ ವಿದ್ಯಾರ್ಥಿ ವೇತನ ಕೊಡಬೇಕು ಎಂಬ ಯೋಜನೆ ರೂಪಿಸಲಾಗಿದೆ. ಶಿಕ್ಷಣ,ಆರೋಗ್ಯ ಮತ್ತು ಪರಿಸರದ ಬಗ್ಗೆ ಹೆಚ್ಚು ಪ್ರಾಧ್ಯನತೆ ನೀಡಬೇಕು. ಉತ್ತಮ ಸಮಾಜಕ್ಕೆ ಇವೆಲ್ಲ ಪೂರಕವಾಗಿರುತ್ತದೆ ಎಂದು ಹೇಳಿದರು.

ಶಾಸಕರಾದ ರವಿಸುಬ್ರಮಣ್ಯರವರು ಮಾತನಾಡಿ ಪ್ರಧಾನಿ ನರೇಂದ್ರಮೋದಿರವರ ಆತ್ಮನಿರ್ಭಾರ ಭಾರತ ನಿರ್ಮಾಣ ಮಾಡುವ ಸಂಕಲ್ಪ ಮಾಡಿದ್ದಾರೆ.ವಿದೇಶಿ ಕಂಪನಿಗಳ ಜೊತೆಯಲ್ಲಿ ಸ್ವದೇಶಿ ಉದ್ಯಮಗಳು ಸಹ ಪೈಪೋಟಿ ನೀಡುತ್ತಿದೆ .ಕೇಂದ್ರ ಸರ್ಕಾರದ ಮುದ್ರ ಯೋಜನೆ ಮೂಲಕ ಕೊಟ್ಯಂತರ ಜನರಿಗೆ ಸ್ವಯಂ ಉದ್ಯೋಗ ಮಾಡಲು ಸುಲಭ ಸಾಲ ಸೌಲಭ್ಯ ನೀಡಿದೆ. ಭಾರತ ದೇಶ ವಿಶ್ವದ ಬಲಿಷ್ಠ ರಾಷ್ಟವಾಗಿ ಇಂದು ವಿಶ್ವದ ಮುಂದೆ ನಿಂತಿದೆ ಎಂದು ಹೇಳಿದರು. ಮಾಜಿ ವಿಧಾನಪರಿಷತ್ ಸದಸ್ಯರಾದ ಟಿ.ಎ.ಶರವಣರವರು ಮಾತನಾಡಿ ಟೈಟಾನ್ ವಲ್ಡ್ ಬನಶಂಕರಿ ಮಾಲೀಕರಾದ ಪದ್ಮಲತಾರವರು ಉದ್ಯಮದ ಜೊತೆಯಲ್ಲಿ ಸಮಾಜ ಸೇವೆಯಲ್ಲಿಯೂ ಹೆಸರು ಮಾಡಿದ್ದಾರೆ. ಉದ್ಯಮದಲ್ಲಿ ಬಂದ ಲಾಭದ ಶೇಕಡವಾರು ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡುತ್ತಿದ್ದಾರೆ. ಉಳ್ಳವರು ಇಲ್ಲದವರಿಗೆ ಸಹಾಯ ಮಾಡಿದಾಗ ಸಮಾಜ ಅಭಿವೃದ್ದಿ ಸಾಧ್ಯ ಎಂದು ಹೇಳಿದರು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಟೈಟಾನ್ ಕಂಪನಿ ಲಿಮಿಟೆಡ್‌ನ ದಕ್ಷಿಣದ ವಾಚಸ್ ಮತ್ತು ವೇರಬಲ್ಸ್ ವಿಭಾಗದ ಪ್ರಾದೇಶಿಕ ವ್ಯಾಪಾರ ವ್ಯವಸ್ಥಾಪಕರಾದ ಶ್ರೀಮತಿ ರೇವತಿ ರಂಗನ್, “ಕರ್ನಾಟಕದಲ್ಲಿ ನಮ್ಮ ಐವತ್ತೈದನೇ ಮಳಿಗೆಯನ್ನು ಗುರುತಿಸುವ ಈ ಟೈಟಾನ್ ವರ್ಲ್ಡ್ ಮತ್ತು ಹೀಲಿಯೋಸ್ ಮಳಿಗೆಯನ್ನು ಬನಶಂಕರಿಯಲ್ಲಿ ಪ್ರಾರಂಭಿಸಲು ನಾವು ರೋಮಾಂಚನಗೊಂಡಿದ್ದೇವೆ. ಈ ಅಂಗಡಿಯು ಗ್ರಾಹಕರಿಗೆ ಪ್ರೀಮಿಯಂ ಶಾಪಿಂಗ್ ಅನುಭವವನ್ನು ನೀಡುತ್ತದೆ, ಜೊತೆಗೆ ಟೈಟಾನ್ ಬ್ರಾಂಡ್‌ಗಳು ಮತ್ತು ಅಂತರಾಷ್ಟ್ರೀಯ ವಾಚ್ ಬ್ರ್ಯಾಂಡ್‌ಗಳ ವೈವಿಧ್ಯಮಯ ಪೋರ್ಟ್‌ಫೋಲಿಯೊದಿಂದ 2,500 ವಾಚ್‌ಗಳನ್ನು ಹೊಂದಿದೆ. ರೋಮಾಂಚಕ ಅಂಗಡಿಯ ವಾತಾವರಣದಲ್ಲಿ ಪ್ರಸ್ತುತಪಡಿಸಲಾದ ವಿಸ್ತಾರವಾದ ಉತ್ಪನ್ನ ಶ್ರೇಣಿಯೊಂದಿಗೆ, ನಾವು ಗ್ರಾಹಕರಿಗೆ ಒದಗಿಸುವ ಗುರಿಯನ್ನು ಹೊಂದಿದ್ದೇವೆ ಅತ್ಯುತ್ತಮ ದರ್ಜೆಯ ಅನುಭವವು ಈ ಅಂಗಡಿಯನ್ನು ಬೆಂಗಳೂರಿನ ಅತ್ಯುತ್ತಮ ಮಳಿಗೆಗಳಲ್ಲಿ ಒಂದನ್ನಾಗಿ ಮಾಡುತ್ತದೆ.

ಟೈಟಾನ್ ವಲ್ಡ್ ಮಾಲೀಕರಾದ ಪದ್ಮಲತಾ ರವರು ಪುರುಷರಷ್ಟೆ ಮಹಿಳೆಯರು ಇಂದು ಉದ್ಯೋಗ,ಉದ್ಯಮದಲ್ಲಿ ಸಾಧನೆ ಮಾಡಿದ್ದಾಳೆ . ನಮ್ಮ ನಾಲ್ಕು ಶೋ ರೂಮ್ ಗಳಲ್ಲಿ 50ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಾರೆ. ಉದ್ಯೋಗದಿಂದ ಬಂದ ಲಾಭದಲ್ಲಿ ಸ್ವಲ್ಪ ಹಣವನ್ನು ಸಮಾಜದ ಅಭಿವೃದ್ದಿ ಕೊಡಬೇಕು ಎಂಬ ಉದ್ದೇಶದಿಂದ ಶಿಕ್ಷಣ ಮತ್ತು ಸಮಾಜ ಸೇವೆಗೆ ಒತ್ತು ನೀಡಲಾಗಿದೆ. ನಮ್ಮ ಮಳಿಗೆಯಲ್ಲಿ ಮಾರಾಟವಾಗುವ ಪ್ರತಿ ಟೈಟಾನ್ ವಾಚ್ ನ 100ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ದೇಣಿಗೆ ನೀಡಲಾಗುವುದು ಮತ್ತು ಸಾರ್ಥಕ ಫೌಂಡೇಷನ್ ಸಾಮಾಜಿಕ ಸೇವಾ ಸಂಘಟನೆಗೆ 6ಲಕ್ಷ ರೂಪಾಯಿ ದೇಣಿಗೆ ಚಕ್ಕನ್ನು ವಿತರಿಸಲಾಗಿದೆ. ಸಮಾಜದಿಂದ ನಾವು ಏನು ಪಡೆದೆವು ಎಂಬದನ್ನ ಮುಖ್ಯವಲ್ಲ,ಸಮಾಜಕ್ಕೆ ನಾವು ಏನು ಕೊಟ್ಟಿದ್ದೇವೆ ಏನ್ನುವುದು ಮುಖ್ಯ . 1992ರಿಂದ ಮಹಿಳಾ ಉದ್ಯಮಿಯಾಗಿ ಗುರುತಿಸಿಕೊಂಡಿದ್ದೇನೆ, ಮಹಿಳೆಯರಿಗೆ ಹೆಚ್ಚಿನ ಸಹಕಾರ,ಉದ್ಯಮದಲ್ಲಿ ತೊಡಗಿಕೊಳ್ಳಲು ನನ್ನ ಸಹಕಾರ ನೀಡುವುದಾಗಿ ಎಂದು ಹೇಳಿದರು.

Leave a Comment

Your email address will not be published. Required fields are marked *

Translate »
Scroll to Top