ಬೆಂಗಳೂರು: ವೈಯಾಲಿಕಾವಲ್ ನಲ್ಲಿರುವ ತಿರುಮಲ ತಿರುಪತಿ ದೇವಾಸ್ಥಾನ ನಿರ್ಮಾನ ವಾಗಿ 12 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಮಹಾ ಸಂಪ್ರೋಕ್ಷಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನದ ಸ್ಥಳೀಯ ಆಡಳಿತ ಮಂಡಳಿ ಅಧ್ಯಕ್ಷ ಡಾ ಸಂಪತ್ ರವಿನಾರಾಯಣ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದ ಡಾ ಸಂಪತ್ ರವಿನಾರಾಯಣ್ ಬೆಂಗಳೂರಿನ ವೈಯಾಲಿಕಾವಲ್ ನಲ್ಲಿ ದೇವಸ್ಥಾನ ನಿರ್ಮಿಸಿ ಹನ್ನೆರಡು ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಈ ತಿಂಗಳ 9, 10, ಹಾಗೂ 11 ರಂದು ಸಂಪ್ರೊಕ್ಷಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ತಿರುಪತಿಯಿಂದ ಆಗಮಿಸುವ ಅರ್ಚಕರು ಮಹಾ ಶಾಂತಿ ಅಭಿಷೇಕ, ಯಾಗಶಾಲ ವೈದಿಕ ಕಾರ್ಯಕ್ರಮ ಹಾಗುಯ ಶಾಂತಿ ಕಲ್ಯಾಣಂ ಅಂದರೆ ಕಲ್ಯಾಣೋತ್ಸವ ಕಾರ್ಯ ನಡೆಸಲಿದ್ದಾರೆ. ಈ ಅಮಯದಲ್ಲು ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಕೆಲ ಕಾಲ ನಿರ್ಭಂದ ವಿಧಿಸಲಾಗುತ್ತದೆ ಎಂದರು.

ಮೂರುದಿನಗಳಕಾಲ ನಡೆಯುವ ಸಂಪ್ರೋಕ್ಷಣ ಕಾರ್ಯಕ್ರಮದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವಾರು ಮಂದಿ ಸಚಿವರ ಹಾಗೂ ವವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ ಎಂದರು. ಅದೇ ರೀತಿ ದೇವಸ್ಥಾನ ಆವರಣದಲ್ಲಿ ಚಿಕ್ಕ ಪುಷ್ಜರಣಿ, ಕಲ್ಯಾಣಕಟ್ಟೆ ನಿರ್ಮಾಣ ಹಾಗೂ ಪದ್ಮಾವತಿ ಅಮ್ಮನವರಿಗೆ ಗರ್ಭಗುಡಿ ನಿರ್ಮಿಸಲಾಗುತ್ತದೆ ಇದು ಎಂದರು.
ಬೆಂಗಳೂರು ಉತ್ತರ ಭಾಗದಲ್ಲಿ 59 ಎಕರೆ ಜಮೀನಿನಲ್ಲಿ ಅಂದಾಜು 300 ಕೋಟಿ ರೂಪಾಯಿ ವೆಚ್ಚದಲ್ಲಿ ತಿರುಪತಿ ಮಾದರಿಯಲ್ಲಿ ದೇವಸ್ಥಾನ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು ನಮ್ಮ ಅಧಿಕಾರಾವದಿಯಲ್ಲಿ ಭೂಮಿ ಪೂಜೆ ಮಾಡಲು ನಿರ್ಧರಿಸಲಾಗಿದೆ ಎಂದರು. ತಿರುಪತಿ ದೇವಸ್ಥಾನದಲ್ಲಿ ಉಪಯೋಗಿಸಿದ ಹೂವಿನಿಂದ ಅಗರ ಬತ್ತಿ ಹಾಗೂ ಇತರ ಪೂಜಾ ಸಾಮಗ್ರಿಗಳನ್ನು ತಯಾರಿಸಾಲಗುತ್ತದೆ ಎಂದು ಅವರು ಹೇಳಿದರು. ಉಪಾಧ್ಯಕ್ಷ ರಾಧಾಕೃಷ್ಣ ಅಡಿಗ, ಕಾರ್ಯದರ್ಶಿ ಭಕ್ತವತ್ಸಲ ರೆಡ್ಡಿ ಹಾಗೂ ಸದಸ್ಯರಾದ ಪಿ.ಭಾಸ್ಕರ್ ರೆಡ್ಡಿ ಹಾಜರಿದ್ದರು.