ಜಾಗತಿಕ ಹೂಡಿಕೆದಾರರ ಸಮಾವೇಶ: ಹೂಡಿಕೆಯ ಮಹಾಪೂರ

Kannada Nadu
ಜಾಗತಿಕ ಹೂಡಿಕೆದಾರರ ಸಮಾವೇಶ: ಹೂಡಿಕೆಯ ಮಹಾಪೂರ

ಬೆಂಗಳೂರು: ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಹೂಡಿಕೆಯ ಮಹಾಪೂರವೇ ಆಗುತ್ತಿದ್ದು, ಮೊದಲ ಮೊದಲ ಎರಡೂ ದಿನಗಳಲ್ಲಿ 4 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆಗಳು ಆಗಿದ್ದು, ಬಂಡವಾಳ ಹೂಡಿಕೆದಾರರು ರಾಜ್ಯದಲ್ಲಿ ಲಕ್ಷಾಂತರ ರೂ. ಬಂಡವಾಳ ಹೂಡುವ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ
ಇನ್ವೆಸ್ಟ್ ಕರ್ನಾಟಕದ ಈ ಸಮಾವೇಶದಲ್ಲಿ ದೊಡ್ಡ ದೊಡ್ಡ ಉದ್ಯಮಿಗಳು ಪರಸ್ಪರ ಸಭೆಗಳನ್ನು ನಡೆಸಿ ರಾಜ್ಯದಲ್ಲಿ ಬಂಡವಾಳ ಹೂಡಿಕೆಯ ಒಪ್ಪಂದಗಳಿಗೆ ಸಹಿ ಹಾಕಿದ್ದು, ಟಿವಿಎಸ್ ಕಂಪನಿ ರಾಜ್ಯದಲ್ಲಿ 2 ಸಾವಿರ ಕೋಟಿ ರೂ.ನ್ನು ಮುಂದಿನ 5 ವರ್ಷಗಳಲ್ಲಿ ಹೂಡಿಕೆ ಮಾಡಲಿದೆ.
ಈ ಸಮಾವೇಶದಲ್ಲಿ ಜೆಎಸ್‌ಡಬ್ಲ್ಯು, ಮಹಿಂದ್ರ ಅಂಡ್ ಮಹೀಂದ್ರ,ಬಲ್ಟೊಟಾ, ಯುರೋಪ್ ಫ್ಯೂಚರ್ ಸೇರಿದಂತೆ ಹಲವು ಕಂಪನಿಗಳು ರಾಜ್ಯದಲ್ಲಿ ಸಾವಿರಾರು ಕೋಟಿ ರೂ. ಬಂಡವಾಳ ಹೂಡಲಿವೆ. ಹಸಿರು ಇಂಧನ ವಲಯದಲ್ಲಿ ಹೆಚ್ಚಿನ ಹೂಡಿಕೆಗಳು ಆಗುತ್ತಿರುವುದು ವಿಶೇಷ.
ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಪೂರಕವಾದ ವಾತಾವರಣ ಎಲ್ಲದರ ಬಗ್ಗೆಯೂ ಇನ್ವೆಸ್ಟ್ ಕರ್ನಾಟಕದಲ್ಲಿ ಬಂಡವಾಳ
ಹೂಡಿಕೆಗೆ ಇರುವ ಅನುಕೂಲಕರ ಅಂಶಗಳನ್ನು ಹೂಡಿಕೆದಾರರಿಗೆ ಮನವರಿಕೆ ಮಾಡುವ ಸಭೆಗಳು, ವಿಚಾರ ಸಂಕಿರಣಗಳು ನಡೆದಿದ್ದು, ರಾಜ್ಯದಲ್ಲಿ ಬಂಡವಾಳ ಹೂಡಲು ಬಹುತೇಕ ಉದ್ದಿಮೆದಾರರು ಮನಸ್ಸುಮಾಡಿದ್ದು, ಅದಕ್ಕೆ ಸಂಬAಧಿಸಿದAತೆ ಒಪ್ಪಂದಗಳು, ಒಡಂಬಡಿಕೆಗಳಿಗೆ ಇಂದೂ ಸಹ ಸಹಿ ಹಾಕಲಾಗಿದೆ.
ರಾಜ್ಯದಲ್ಲಿ 10 ಲಕ್ಷ ಕೋಟಿ ಹೂಡಿಕೆಯ ಗುರಿಯೊಂದಿಗೆ ಇನ್ವೆಸ್ಟ್ ಕರ್ನಾಟಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆದಿದ್ದು, ನಿನ್ನೆ ಈ ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಇವರುಗಳ ಸಮ್ಮುಖದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜ್‌ನಾಥ್‌ಸಿಂಗ್ ಚಾಲನೆ ನೀಡಿದ್ದರು.
ನಾಲ್ಕು ದಿನಗಳ ಇನ್ವೆಸ್ಟ್ ಕರ್ನಾಟಕ ಬಂಡವಾಳ ಹೂಡಿಕೆಯ ಈ ಸಮಾವೇಶದಲ್ಲಿ ಮೊದಲ ದಿನವೇ ಸುಮಾರು 4 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯ ಒಪ್ಪಂದಗಳು ಆಗಿದ್ದವು. 2ನೇ ದಿನವಾದ ಇಂದೂ ಸಹ ಬಂಡವಾಳ ಹೂಡಿಕೆಗೆ ಸಂಬAಧಿಸಿದAತೆ ಹೂಡಿಕೆಗಳು ಆಗಿದ್ದು, ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಪ್ರಕಟಿಸಲಾದ ಪ್ರಮುಖ ಯೋಜನೆಗಳ ವಿವರ ಈ ಕೆಳಕಂಡAತಿದೆ.
1. ಜೆಎಸ್‌ಡಬ್ಲ್ಯು ನಿಯೊ ಎನರ್ಜಿ ಲಿಮಿಟೆಡ್ – ಸೌರ ಯೋಜನೆ , ಗಾಳಿ ಶಕ್ತಿ ಯೋಜನೆಗಳು, ಬ್ಯಾಟರಿ ಶಕ್ತಿ ಸಂಗ್ರಹಣೆ, ಬ್ಲೇಡ್ ತಯಾರಿಕೆ ಮತ್ತು ವಿಂಡ್ ಟರ್ಬೈನ್ ಜನರೇಟರ್ ಸ್ಥಾವರ ಸ್ಥಾಪನೆಗೆ 56,000 ಕೋಟಿ ಹೂಡಿಕೆ.
2. ಬಲ್ಡೋಟಾ ಸ್ಟೀಲ್ ಆಂಡ್ ಪವರ್ ಲಿಮಿಟೆಡ್ – ಸಮಗ್ರ ಉಕ್ಕು ತಯಾರಿಕಾ ಸ್ಥಾವರಕ್ಕೆ ರೂ 54,000 ಕೋಟಿ ಹೂಡಿಕೆ.
3. ಟಾಟಾ ಪವರ್ ರಿನ್ಯೂವೇಬಲ್ ಎನರ್ಜಿ ಲಿಮಿಟೆಡ್ – ರಾಜ್ಯದಾದ್ಯಂತ ನವೀಕರಿಸಬಹುದಾದ ಇಂಧನ ವಿದ್ಯುತ್ ಯೋಜನೆಗಳು ಮತ್ತು ಮೇಲ್ಚಾವಣಿ ವಿದ್ಯುತ್ ಪರಿಹಾರಗಳ ಅಭಿವೃದ್ಧಿಗೆ 50,000 ಕೋಟಿ ಹೂಡಿಕೆ.
4. ರೆನ್ಯೂ ಪ್ರೈವೇಟ್ ಲಿಮಿಟೆಡ್ 4ಗಿಗಾವಾಟ್ ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಸ್ಥಾಪಿಸಲು 50,000 ಕೋಟಿ ಹೂಡಿಕೆ.
5. ಸೆರೆಂಟಿಕಾ ರಿನ್ಯೂವೇಬಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ – ನವೀಕರಿಸಬಹುದಾದ ಇಂಧನ ಯೋಜನೆಗಳ ಅಭಿವೃದ್ಧಿಗಾಗಿ 43,975 ಕೋಟಿ ಹೂಡಿಕೆ.
6. ಜೆಎಸ್‌ಡಬ್ಲ್ಯು ಗ್ರೂಪ್ – ಜೆಎಸ್‌ಡಬ್ಲ್ಯು ಸಿಮೆಂಟ್ ಆಂಡ್ ಸ್ಟೀಲ್ ಮತ್ತು ಅದರ ಅಂಗಸAಸ್ಥೆಗಳಿಗೆ 43,900 ಕೋಟಿ ಹೂಡಿಕೆ.
7. ಮಹೀಂದ್ರಾ ಸಸ್ಟೆನ್ ಪ್ರೈವೇಟ್ ಲಿಮಿಟೆಡ್ – ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಸ್ಥಾಪಿಸಲು 35,000 ಕೋಟಿ ಹೂಡಿಕೆ
8. ಹೀರೋ ಫ್ಯೂಚರ್ ಎನರ್ಜಿಸ್ – ನವೀಕರಿಸಬಹುದಾದ ಇಂಧನ, ಪರಿಶುದ್ಧ ಜಲಜನಕ ಮತ್ತು ಅದರ ಉತ್ಪನ್ನಗಳ ಯೋಜನೆಗಳಿಗೆ 22,200 ಕೋಟಿ ಹೂಡಿಕೆ
9. ಸುಜ್ಲಾನ್ ಎನರ್ಜಿ ಲಿಮಿಟೆಡ್ – ಪವನ ವಿದ್ಯುತ್ ಯೋಜನೆಗಳಿಗೆ 21,950 ಕೋಟಿ ಹೂಡಿಕೆ.
10. ಎಸ್ಸಾರ್ ರಿನ್ಯೂವೇಬಲ್ಸ್ ಲಿಮಿಟೆಡ್- 20,000 ಕೋಟಿ ಹೂಡಿಕೆ.
11. ಅವಾಡಾ ಎನರ್ಜಿ ಪ್ರೈವೇಟ್ ಲಿಮಿಟೆಡ್ 18,000 ಕೋಟಿ ಹೂಡಿಕೆ.
12. ಎಪ್ಸಿಲಾನ್ ಗ್ರೂಪ್ – ಆನೋಡ್ ಮತ್ತು ಕ್ಯಾಥೋಡ್ ಪದಾರ್ಥಗಳ ತಯಾರಿಕೆಗೆ 15,350 ಕೋಟಿ ಹೂಡಿಕೆ.
13. ಎಂವೀ ಎನರ್ಜಿ ಪ್ರೈವೇಟ್ ಲಿಮಿಟೆಡ್ ಸೋಲಾರ ಫೊಟೊವೊಲ್ಟ್ಯಾಕ್ ಸೆಲ್ಸ್ ಮತ್ತು ಮಾಡ್ಯೂಲ್‌ಗಳ ತಯಾರಿಕೆಗೆ 15,000 ಕೋಟಿ ಹೂಡಿಕೆ.
14. ಲ್ಯಾಮ್ ರಿಸರ್ಚ್ ಸೆಮಿಕಂಡಕ್ಟರ್ ಉಪಕರಣಗಳ ತಯಾರಿಕೆಗೆ 10,000 ಕೋಟಿ ಹೂಡಿಕೆ
15. ಆಂಪಿನ್ ಎನರ್ಜಿ ಟ್ರಾನ್ಸಿಷನ್ ಪ್ರೈವೇಟ್ ಲಿಮಿಟೆಡ್ – 10,000 ಕೋಟಿ ಹೂಡಿಕೆ.
16. ಎಸಿಎಂಇ ಸೋಲಾರ್ ಹೋಲ್ಡಿಂಗ್ಸ್ ಲಿಮಿಟೆಡ್ – 10,000 ಕೋಟಿ ಹೂಡಿಕೆ
17. ಔ2 ಪವರ್ ಪ್ರೈವೇಟ್ ಲಿಮಿಟೆಡ್ – ನವೀಕರಿಸಬಹುದಾದ ಇಂಧನ ಸೌರ ಮತ್ತು ಪವನ ಯೋಜನೆಗಳ ಸ್ಥಾಪನೆಗೆ 10,000 ಕೋಟಿ ಹೂಡಿಕೆ
18. ಕಾಂಟಿನುಮ್ ಗ್ರೀನ್ ಎನರ್ಜಿ ಜಿಪಿ – ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಅಭಿವೃದ್ಧಿಪಡಿಸಲು 10,000 ಕೋಟಿ ಹೂಡಿಕೆ
19. ಸೋಟೆಫಿನ್ ಭಾರತ್ – ಸಂಪೂರ್ಣ ಸ್ವಯಂಚಾಲಿತ ರೊಬೊಟಿಕ್ ಬಹುಮಹಡಿ ಕಾರ್ ಮತ್ತು ಬಸ್ ಪಾರ್ಕಿಂಗ್ ವ್ಯವಸ್ಥೆಗಳ ನಿರ್ಮಾಣ ಮತ್ತು ಸ್ಥಾಪನೆಗೆ 8,500 ಕೋಟಿ ಹೂಡಿಕೆ
20. ಶ್ರೀ ಸಿಮೆಂಟ್ ಲಿಮಿಟೆಡ್ ಇಂಟೆಗ್ರೇಟೆಡ್ ಸ್ಥಾವರ ಮತ್ತು ಕ್ಲಿಂಕರ್ ಗ್ರೈಂಡಿAಗ್ ಘಟಕಕ್ಕೆ 8,350 ಕೋಟಿ ಹೂಡಿಕೆ
21. ಹೆಕ್ಸಾ ಕ್ಲೈಮೇಟ್ ಸೊಲ್ಯೂಷನ್ಸ್ ಪ್ರೈ. ಲಿಮಿಟೆಡ್ – 8,000 ಕೋಟಿ ಹೂಡಿಕೆ

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";