ಅನುದಾನ ಕೊರತೆಯಿಂದಾಗಿ ಕಳೆದ ೩ ವರ್ಷಗಳಿಂದ ಸ್ಥಗಿತಗೊಂಡ ಗದಗ ತಾಪಂ ಕಾಮಗಾರಿ

ಗದಗ : ಅನುದಾನ ಕೊರತೆ ಹಾಗೂ ಕೊರೋನಾ ೧,೨ ಮತ್ತು ೩ ನೇ ಅಲೆಯ ಕರಾಳ ಪ್ರಭಾವದಿಂದಾಗಿ ಕಳೆದ ೩ ವರ್ಷಗಳಿಂದ ಸ್ಥಗಿತಗೊಂಡಿದೆ ಇಲ್ಲಿನ ಗದಗ ತಾಲೂಕು ಪಂಚಾಯತ್ ಕಟ್ಟಡದ ಕಾಮಗಾರಿ, ಗದಗ ತಾಲೂಕು ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ೨೭ ಗ್ರಾಮ ಪಂಚಾಯತಿಗಳು, ೬೦ ಗ್ರಾಮಗಳು ಹಾಗೂ ೧.೩೫ ಲಕ್ಷ ಜನರ ಸಮಸ್ಯೆಗಳಿಗೆ ಸ್ಪಂದಿಸುವ ತಾಲೂಕು ಆಡಳಿತ ಕೇಂದ್ರಕ್ಕೀಗ ಅನುದಾನದ ಕೊರತೆ, ಕಾಮಗಾರಿ ಪ್ರಾರಂಬಿಸಿ ೩ ಕ್ಕೂ ಅಧಿಕ ವರ್ಷವಾಯಿತು, ಆಮೆಗತಿಯಲ್ಲಿ ಪ್ರಾರಂಭವಾದ ಕಾಮಗಾರಿ ಇದೀಗ ಅನುದಾನ ಇಲ್ಲದೇ ಇದೀಗ ಅದು ೨ ವರ್ಷದಿಂದ ನಿಂತಲ್ಲೇ ನಿಂತು
ಹೋಗಿದೆ,

ಗದಗ ನಗರದ ಮಹಾತ್ಮಗಾಂಧಿ ವರ್ತುಲದ ಪಕ್ಕದಲ್ಲಿ ೧೨ ಗುಂಟೆ ಜಾಗೆಯಲ್ಲಿ ೪ ಅಂತಸ್ತಿನ ಬಹುಮಹಡಿ ಕಟ್ಟಡ ತಲೆ ಎತ್ತಲಿರುವ ಗದಗ ತಾಲೂಕು ಪಂಚಾಯತದಲ್ಲಿ ಭವಿಷ್ಯಕ್ಕೆ ಅಗತ್ಯವಾಗಿರುವ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳೊಂದಿಗೆ ನಿರ್ಮಾಣವಾಗುತ್ತಿರುವದು ಗದಗ ತಾಲೂಕು ಪಂಚಾಯತಿಯ ಜನರಿಗೆ ಸಂತಸದ ವಿಚಾರವಾಗಿದೆ, ಆದರೆ ಕಾಮಗಾರಿ ಆಮೆಗತಿಯಲ್ಲಿ ಸಾಗಿ, ಇದೀಗ ಅದು ಸಂಪೂರ್ಣವಾಗಿ ನಿಂತು ಹೋಗಿರುವದು ಬಹಳ ನೋವಿನ
ಸಂಗತಿಯಾಗಿದೆ.

ಅಂಡರಗ್ರೌಂಡನಲ್ಲಿ ಪಾಕಿಂಗ್ : ಕೋಟುಮುಚಗಿ ಗ್ರಾಮದ ಕೊಡುಗೈ ದಾನಿ ರಾವಬಹದ್ದೂರ ಚಾವಡಿ ದಾನ ನೀಡಿದ ೧೨ ಗುಂಟೆ ಜಾಗೆಯಲ್ಲಿ ಗದಗ ತಾಪಂ ಕಟ್ಟಡ
ಕಾಮಗಾರಿ ನಡೆದಿದೆ, ಈ ಕಟ್ಟಡ ೪ ಅಂತಸ್ಥಿನಿಂದ ಕೂಡಿದೆ, ಮುಖ್ಯ ರಸ್ತೆಯ ಬದಿಯಲ್ಲಿ ಕಾರ್ಯಾಲಯವಿದೆ, ಸಾರ್ವಜನಿಕರ ಹಾಗೂ ಸಿಬ್ಬಂದಿಗಳ ವಾಹನ
ನಿಲುಗಡೆಗಾಗಿ ಕಟ್ಟಡದ ಅಂಡರಗ್ರೌಂಡನಲ್ಲಿ ಪಾರ್ಕಿಂಗ್ಸೌ ಲಭ್ಯವನ್ನು ಕಲ್ಪಿಸಲಾಗುತ್ತಿದೆ.

ವಿಕಲಾಂಗರಿಗೆ ಲಿಪ್ಟ ಸೌಲಭ್ಯ :

ಗದಗ ತಾಲೂಕು ಪಂಚಾಯತಿಗೆ ಸಾಮಾನ್ಯರು ಮತ್ತು ವಿಶೇಷ ಚೇತನರು ಆಗಮಿಸುತ್ತಾರೆ, ವಿಶೇಷ ಚೇತನರಿಗೆ ನೆರವಾಗಲೆಂಬ ಉದ್ದೇಶದಿಂದಾಗಿಯೇ ಲಿಪ್ಟ ಸೌಲಭ್ಯವನ್ನು ಮಾಡಲಾಗಿದೆ, ಅವರು ಸಾಮಾನ್ಯರಂತೆ ಕಚೇರಿಗೆ ಆಗಮಿಸಿ ತಮ್ಮ ಸೇವೆಯನ್ನು ಪಡೆದು ಮುಖ್ಯವಾಹಿನಿಗೆ ಬರಲೆಂಬ ಬಯಕೆ ಗದಗ ತಾಪಂ ಹೊಂದಿದೆ.

೧೨ ಗುಂಟೆ ಜಾಗೆಯಲ್ಲಿ ತಲೆ ಎತ್ತಲಿರುವ ಗದಗ ತಾಪಂ ಬಹುಮಹಡಿ ಕಟ್ಟಡದಲ್ಲಿ ಗದಗ ತಾಲೂಕು ಪಂಚಾಯ್ ಆಡಳಿತ ನಿರ್ವಹಣೆ ಕಚೇರಿ, ಸಭಾಭವನ, ಎನ್.ಆರ್.ಎಲ್.ಎಂ, ಎನ್.ಆರ್.ಇ.ಜಿ, ವಿಕಲಚೇತನರ ಸಂಪರ್ಕ ಕೇಂದ್ರ, ಡಿಜಿಟಲ್ ಗ್ರಂಥಾಲಯ ಸೇರಿದಂತೆ ಹಲವು ಸೇವಾ ಕೇಂದ್ರಗಳು ಕಾರ್ಯವನ್ನು ನಿರ್ವಹಿಸಲಿವೆ.

  • ಗದಗ ತಾಲೂಕು ಪಂಚಾಯತ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಹಾಗೂ ಅನುದಾನದ ಕೊರತೆ ಹಿನ್ನೆಲೆಯಲ್ಲಿ ಗದಗ ತಾಪಂ ಕೆಡಿಪಿ ಸಭೆ, ಇತರೆ ಸಭೆಗಳನ್ನು ಗದಗ
    ಬೆಟಗೇರಿ ನಗರಸಭೆಯಲ್ಲಿ ನಡೆಸುವದು ಅನಿವಾರ್ಯವಾಗಿದೆ.
  • ಕಾಮಗಾರಿಗೆ ಅಗತ್ಯವಾಗಿರುವ ಅನುದಾನ ತಕ್ಷಣವೇ ರಾಜ್ಯ ಸರಕಾರ ಬಿಡುಗಡೆಗೊಳಿಸಿದರೇ ಕಾಮಗಾರಿ ತ್ವರಿತ ಗತಿಯಲ್ಲಿ ಸಾಗಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದೆ.
  • ಅನುದಾನ ಕೊರತೆ ಹಿನ್ನೆಲೆಯಲ್ಲಿ ಕಳೆದ ೨ ವರ್ಷಗಳಿಂದ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿದೆ, ಕಾಮಗಾರಿಗೆ ಅವಶ್ಯವಾಗಿರುವ ೩೦೦
    ಲಕ್ಷ ರೂ ಅನುದಾನ ಬೇಡಿಕೆಯ ಪ್ರಸ್ತಾವನೆಯನ್ನು ರಾಜ್ಯ ಸರಕಾರದ ಮುಂದೆ ಮಂಡಿಸಲಾಗಿದೆ, ಅನುದಾನ ಬಿಡುಗಡೆಯಾದ ತಕ್ಷಣವೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವದು.

ಮಲ್ಲಿಕಾರ್ಜುನ, ಸಹಾಯಕ ಅಭಿಯಂತರ ಲ್ಯಾಂಡ
ಆರ್ಮಿ ಗದಗ

  • ಕೊರೋನಾ ೧,೨ ಮತ್ತು ೩ ಅಲೆ ಪ್ರಭಾವ ಹಾಗೂ ಅನುದಾನದ ಕೊರತೆ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿದೆ, ಶಾಸಕರಾದ ಎಚ್.ಕೆ.ಪಾಟೀಲ್ ಅನುದಾನ ಕೋರಿ ರಾಜ್ಯ ಸರಕಾರದ ಜೊತೆಗೆ ಮಾತನಾಡಿದ್ದಾರೆ. ಕಾಮಗಾರಿ ಬೇಡಿಕೆಯ ಅನುದಾನ ಕಡತವನ್ನು ಮುಖ್ಯ ಕಾರ್ಯದರ್ಶಿಗಳು ತಕ್ಷಣವೇ ಬಿಡುಗಡೆಗೊಳಿಸುವ
    ಭರವಸೆಯಿದೆ.

ಡಾ. ಹೀರಾಲಾಲ ಜನಗಿ, ಗದಗ ತಾಪಂ .ಮುಖ್ಯಕಾರ್ಯನಿರ್ವಹಣಾಧಿಕಾರಿ, ಗದಗ

ವಿಶೇಷ ವರದಿ ಸುನೀಲಸಿಂಗ ಲದ್ದಿಗೇರಿ

Leave a Comment

Your email address will not be published. Required fields are marked *

Translate »
Scroll to Top